ವಿರಾಟ್ ಕೊಹ್ಲಿಗೆ ಮಹತ್ವದ ಸಲಹೆ ನೀಡಿದ ವಿಂಡೀಸ್ ಬೌಲಿಂಗ್ ಶ್ರೇಷ್ಠ ಮೈಕಲ್ ಹೋಲ್ಡಿಂಗ್

Virat Kohli, Richards ಇಬ್ಬರು ಒಂದೇ ತರ : Michael Holding | Oneindia Kannada

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ಬಳಿಕ ಸಾಕಷ್ಟು ಪರಾಮರ್ಶೆಗಳು ನಡೆಯುತ್ತಿದೆ. ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಪ್ರೇಮಿ ಕೂಡ ಟೀಮ್ ಇಂಡಿಯಾ ಸೋಲಿಗೆ ಯಾವೆಲ್ಲಾ ಕಾರಣಗಳು ಎಂಬ ಬಗ್ಗೆ ಮಿಮರ್ಶೆಗಳನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್ ಎನಿಸಿರುವ ಮಾಜಿ ವೇಗಿ ಮೈಕಲ್ ಹೋಲ್ಡಿಂಗ್ ವಿರಾಟ್ ಕೊಹ್ಲಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.

ಮಾಜಿ ಕ್ರಿಕೆಟರ್ ಹಾಲಿ ಕಾಮೆಂಟೇರ್ ಆಗಿರುವ ಮೈಕಲ್ ಹೋಲ್ಡಿಂಗ್ ಇತ್ತೀಚೆಗಷ್ಟೇ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ಮೈಕಲ್ ಹೋಲ್ಡಿಂಗ್ ಮುಕ್ತಕಂಠದಿಂದ ಹೊಗಳಿದ್ದಾರೆ. ವಿರಾಟ್ ಕೊಹ್ಲಿಯನ್ನು ಅವರು ವೆಸ್ಟ್ ಇಂಡೀಸ್‌ನ ಶ್ರೇಷ್ಟ ಕ್ರಿಕೆಟರ್ ಸರ್ ವಿವ್ ರಿಚರ್ಡ್ಸ್‌ಗೆ ಹೋಲಿಸಿದ್ದಾರೆ.

ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಶ್ರೀಲಂಕಾಕ್ಕೆ ಪ್ರಯಾಣಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಶ್ರೀಲಂಕಾಕ್ಕೆ ಪ್ರಯಾಣ

"ವಿರಾಟ್ ಕೊಹ್ಲಿ ಹೃದಯವನ್ನು ತೋಳಿಗೆ ಧರಿಸಿಕೊಂಡು ಓಡಾಡುವಂತಾ ವ್ಯಕ್ತಿ. ಆತ ತನ್ನ ಭಾವನೆಯನ್ನು ನೇರವಾಗಿ ಮುಖದಲ್ಲಿಯೇ ವ್ಯಕ್ತಪಡಿಸುವ ವ್ಯಕ್ತಿ. ಕೆಲವೊಂದು ಬಾರಿ ವಿಚಾರಗಳಿಂದಿಉಗೆ ಅವರು ಮುಂದುವರಿಯುವಂತೆ ಭಾಸವಾಗುತ್ತಾರೆ. ಈ ವಿಚಾರದಲ್ಲಿ ಅವರು ವಿವ್ ರಿಚರ್ಡ್ಸ್‌ಅವರನ್ನು ಹೋಲಿತ್ತಾರೆ" ಎಂದು ಮೈಕಲ್ ಹೋಲ್ಡಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ವಿವ್ ರಿಚರ್ಡ್ಸ್‌ ಕೂಡ ಮೈದಾನದಲ್ಲಿ ಅತಿಯಾಗಿ ಭಾವನೆಯನ್ನು ಹೊರಹಾಕುತ್ತಿದ್ದರು. ಆದರೆ ಅದು ಈ ಇಬ್ಬರು ಜಂಟಲ್‌ಮೆನ್‌ಗಳ ವ್ಯಕ್ತಿತ್ವವಾಗಿದೆ. ಈ ಭಾವನೆಯನ್ನು ವ್ಯಕ್ತಪಡಿಸುವ ಪ್ರಮಾಣವನ್ನು ಅವರು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು" ಎಂದಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮೈಕಲ್ ಹೋಲ್ಡಿಂಗ್ ಮಾತನಾಡಿದರು. ವಿರಾಟ್ ಕೊಹ್ಲಿ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದರೆ ತಂಡದ ಅಹ ಆಟಗಾರರು ಹೆಚ್ಚು ಮುಕ್ತವಾಗಿರುವ ಅವಕಾಶವಿರುತ್ತದೆ ಎಂಬ ಸಲಹೆಯನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಮುಂದೆ ಇಂಗ್ಲೆಂಡ್ ತಂಡದ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Monday, June 28, 2021, 16:06 [IST]
Other articles published on Jun 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X