ಆಗಿನ ಬೌಲರ್‌ಗಳ ಮುಂದೆ ಇವರ ಆಟ ನಡೆಯದು: ರೋಹಿತ್, ಎಬಿಡಿಗೆ ದಿಗ್ಗಜ ಬೌಲರ್‌ನ ಸವಾಲು

ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಸೀಮಿತ ಓವರ್‌ಗಳಲ್ಲಿ ಅಮೋಘ ಸಾಧನೆಯನ್ನು ಮಾಡುತ್ತಿದ್ದಾರೆ. ಎದುರಾಳಿ ಬೌಲರ್‌ಗಳನ್ನು ನಿರ್ದಯವಾಗಿ ಚೆಂಡಾಡುವ ರೋಹಿತ್ ಬಾಲನ್ನು ಯಾವ ಮೂಲೆಗಾದರೂ ಅಟ್ಟುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ರೋಹಿತ್ ಶರ್ಮಾ ಅವರ ಈ ಸಾಮರ್ಥ್ಯಕ್ಕೆ ದಿಗ್ಗಜ ವೇಗಿಯೊಬ್ಬರು ಸವಾಲೆಸಿದ್ದಾರೆ.
ರೋಹಿತ್ ಶರ್ಮಾ ಮಾತ್ರವಲ್ಲ ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್ ಅವರನ್ನು ಕೂಡ ಉದ್ದೇಶಿಸಿ ಈ ಸವಾಲನ್ನು ಹಾಕಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಬೌಲರ್ ಮೈಕಲ್ ಹೋಲ್ಡಿಂಗ್ ರೋಹಿತ್‌ಗೆ ನೈಜ ಸವಾಲೊಂದನ್ನು ನೀಡಿದ್ದಾರೆ. ವೆಸ್ಟ್ ಇಂಡೀಸ್‌ನ ಈ ದಿಗ್ಗಜ ಬೌಲರ್ ರೋಹಿತ್ ಮತ್ತು ಎಬಿಡಿಯನ್ನು ಗುರಿಯಾಗಿಸಿ ಯಾಕೆ ಈ ಸವಾಲನ್ನು ಹಾಕಿದ್ದಾರೆ. ಆ ಸವಾಲು ಏನು ಎಂಬುದರ ಬಗ್ಗೆ ಮುಂದೆ ಓದಿ..

ಗುಣಮಟ್ಟದ ವೇಗದ ಮುಂದೆ ಮಂಕು?
ಮೈಕಲ್ ಹೋಲ್ಡಿಂಗ್ ಅವರ ಪ್ರಕಾರ ರೋಹಿತ್ ಅವರಂತಹ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳು ಕೂಡ ಅತ್ಯುತ್ತಮ ಗುಣಮಟ್ಟದ ವೇಗದ ಬೌಲಿಂಗ್ ಎದುರು ಸ್ವಾಭಾವಿಕ ಹೊಡೆತಗಳನ್ನು ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಂತಹ ಗುಣಮಟ್ಟದ ಬೌಲಿಂಗ್ ಎದುರು ರೋಹಿತ್ ಯಾವ ರೀತಿ ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ ಎಂದಿದ್ದಾರೆ.

ನಿಜವಾದ ವೇಗಿಗಳನ್ನು ಹೇಗೆ ಎದುರಿಸುತ್ತಾರೆ?
ರೋಹಿತ್ ಶರ್ಮಾ ಮತ್ತು ಎಬಿ ಡಿವಿಲಿಯರ್ಸ್ ಅವರಂತಾ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳ ವೇಗಕ್ಕೆ ಅನುಗುಣವಾಗಿ ಹೊಡೆತಗಳನ್ನು ಬಾರಿಸುತ್ತಾರೆ. ಇಂತದ್ದೇ ಹೊಡೆತಗಳನ್ನು ನಿಜವಾದ ವೇಗಿಗಳ ಎಸೆತಕ್ಕೆ ಬಾರಿಸಲು ಅವರಿಂದ ಸಾಧ್ಯವೇ ಇಂದು ಪ್ರಶ್ನಿಸಿದ್ದಾರೆ.

ನಾನು ಕೂಡ ಅದೇ ಮಾದರಿಯ ಬೌಲರ್
ಡೇಲ್ ಸ್ಟೇಯ್ನ್, ಬ್ರೆಟ್ ಲೀ ಶೋಯೆಬ್ ಅಖ್ತರ್ ಅವರಂತಾ ವೇಗದ ಬೌಲರ್‌ಗಳ ಎಸೆತಕ್ಕೆ ತಮ್ಮ ನೈಜ ಹೊಡೆತವನ್ನು ಆಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಒಂದು ವೇಳೆ ಈ ವೇಗಿಗಳಿಗೆ ಅವರು ತಮ್ಮ ನೈಜ ಹೊಡೆತಗಳನ್ನು ಬಾರಿಸಿದರೆ ಆಗ ನಾನೂ ಅವರಿಗೆ ಬೌಲಿಂಗ್ ಮಾಡುವ ರೀತಿ ಬಗ್ಗೆ ತಲೆಕೆಡಿಸಿಕೊಳ್ಳಬಹುದು. ಯಾಕೆಂದರೆ ನಾನೂ ಕೂಡ ಆದೇ ರೀತಿಯ ಬೌಲರ್ ಎಂದು ಮೈಕಲ್ ಹೋಲ್ಡಿಂಗ್ ಹೇಳಿದ್ದಾರೆ.

ಆಗಿನ ಬೌಲರ್‌ಗಳ ಮುಂದೆ ಇವರ ಆಟ ನಡೆಯದು!
ರೋಹಿತ್ ಶರ್ಮಾ ಮತ್ತು ಎಬಿ ಡಿ'ವಿಲಿಯರ್ಸ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಬತ್ತಳಿಕೆಯಲ್ಲಿ ಸಾಕಷ್ಟು ವೈವಿಧ್ಯದ ಹೊಡೆತಗಳಿವೆ. ಆದರೆ ಆಗಿನ ಕಾಲದ ವೇಗಿಗಳ ಎದುರು ಈ ಬ್ಯಾಟ್ಸ್‌ಮನ್‌ಗಳು ಇಷ್ಟೇ ಉತ್ತಮವಾಗಿ ಬ್ಯಾಟ್ ಬೀಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ವೇಗದ ಎಸತಕ್ಕೆ ತಪ್ಪು ಮಾಡುವಂತಿಲ್ಲ
ವೇಗದ ಬೌಲಿಂಗ್‌ಗೆ ಬ್ಯಾಟ್ಸ್‌ಮನ್‌ಗಳು ಭಯಪಡುತ್ತಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ವೇಗದ ಬೌಲಿಂಗ್‌ನಲ್ಲಿ ಹೊಡೆತಗಳನ್ನು ಬಾರಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಾಗಾಗಿ ಎಚ್ಚರಿಕೆಯಿಂದಲೇ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಆ ವೇಗದಲ್ಲಿ ಬರುವ ಎಸೆತಗಳಿಗೆ ತಪ್ಪುಗಳನ್ನು ಮಾಡುವಂತಿಲ್ಲ ಎಂದು ಹೋಲ್ಡಿಂಗ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications