ಪಿಚ್ ಚೆನ್ನಾಗಿದೆ, ಇಂಗ್ಲೆಂಡ್ ಬ್ಯಾಟಿಂಗ್ ಕೆಟ್ಟದಾಗಿದೆ: ಮೈಕಲ್ ವಾನ್ ಬಾಯಲ್ಲಿ ಅಚ್ಚರಿಯ ಮಾತು!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನವನ್ನು ನೀಡುತ್ತಿದೆ. ಟಾಸ್ ಗೆದ್ದರೂ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಅದರ ಸದುಪಯೋಗವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಮಧ್ಯೆ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸೋಲಿನ ಬಳಿಕ ಪಿಚ್ ಬಗ್ಗೆ ಅಪಸ್ವರವೆತ್ತಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಈ ಬಾರಿ ಭಿನ್ನ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಹೌದು, ಭಾರತದ ವಿರುದ್ಧದ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಕಳಪೆ ಬ್ಯಾಟಿಂಗ್‌ಗೆ ಇನ್ಯಾವುದೇ ಕಾರಣವನ್ನು ನೀಡದೆ ಮೈಕಲ್ ವಾನ್ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳನ್ನೇ ಟೀಕಿಸಿದ್ದಾರೆ. ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪಿಚ್ ಉತ್ತಮ ಆದರೆ ಬ್ಯಾಟಿಂಗ್ ಕಳಪೆ
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭಾರತದ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಿಚ್ ಪರಿಪೂರ್ಣವಾಗಿದೆ. ಆದರೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳ ಆಟ ಕಳಪೆಯಾಗಿದೆ ಎಂದು ಮೈಕಲ್ ವಾನ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ವಾನ್ ಹೇಳಿದ್ದೇನು?
"ಕಳೆದ ಕೆಲ ಪಂದ್ಯಗಳಿಗಿಂತ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಅತ್ಯಂತ ಕಳಪೆಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ರನ್‌ಗಳಿಸಲು ಪರಿಪೂರ್ಣವಾದ ಪಿಚ್ ಇದಾಗಿತ್ತು. ತಿರುವುಗಳು ಇರಲಿಲ್ಲ. ಚೆಂಡು ಬ್ಯಾಟ್‌ಗೇ ಬರುತ್ತಿತ್ತು. ಈವರೆಗೆ ಅತ್ಯಂತ ಕಳಪೆ ಬ್ಯಾಟಿಂಗ್" ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ ಮೈಕಲ್ ವಾನ್.

ಟೀಕೆಯನ್ನೇ ಮಾಡುತ್ತಿದ್ದ ಮೈಕಲ್ ವಾನ್
ಮೈಕಲ್ ವಾನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗುವ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೇ ಸುದ್ದಿಯಾಗುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಕಳಪೆ ಪ್ರದರ್ಶನ ನೀಡುತ್ತದೆ ಎಂದು ಭವಿಷ್ಯ ನುಡಿದಿದ್ದ ಮೈಕಲ್ ವಾನ್ ಟೀಕೆಗೆ ಒಳಗಾಗಿದ್ದರು. ಬಳಿಕ ಇಂಗ್ಲೆಂಡ್ ಪ್ರವಾಸದಲ್ಲೂ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲಿಲ್ಲ. ಅದರಲ್ಲೂ ಚೆನ್ನೈ ಹಾಗೂ ಅಹ್ಮದಾಬಾದ್ ಪಿಚ್ ಬಗ್ಗೆ ಮೈಕಲ್ ವಾನ್ ತೀವ್ರ ಟೀಕೆಯನ್ನು ಮಾಡಿದ್ದರು.

ಭಾರತದ ಮೇಲುಗೈ
ಇನ್ನು ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದ ಆರಂಭಿಕ ದಿನದಂದು ಭಾರತ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಅಗ್ಗಕ್ಕೆ ಫೆವಿಲಿಯನ್‌ಗೆ ಕಳುಹಿಸುವಲ್ಲಿ ಭಾರತದ ಭೌಲರ್‌ಗಳು ಯಶಸ್ಸು ಕಂಡಿದ್ದಾರೆ. ಈ ಪಂದ್ಯದಲ್ಲೂ ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಮಿಂಚಿದ್ದು ಅಕ್ಷರ್ ಪಟೇಲ್ 4 ಹಾಗೂ ಆರ್ ಅಶ್ವಿನ್ 3 ವಿಕೆಟ್ ಪಡೆದುಕೊಂಡಿದ್ದಾರೆ. ಉಳಿದಂತೆ ಮೊಹಮ್ಮದ್ ಸಿರಾಜ್ 2 ಹಾಗೂ ವಾಶಿಂಗ್ಟನ್ ಸುಂದರ್ ಪಂದು ವಿಕೆಟ್ ಪಡೆದುಕೊಂಡಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications