IPL 2023: ಬೌಂಡರಿ ಸಿಡಿಸುತ್ತಿಲ್ಲ ಕೊಹ್ಲಿ: ಸ್ಟ್ರೇಕ್‌ರೇಟ್ ಬಗ್ಗೆ ಪ್ರಶ್ನಿಸಿದ ಮೈಕಲ್ ವಾನ್
ಆರ್‌ಸಿಬಿ ತಂಡ ಅಗ್ರಕ್ರಮಾಂಕದ ಆಟಗಾರರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಆಟಗಾರರ ಪೈಕಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮಾತ್ರವೇ ಮಿಂಚಲು ಸಫಲವಾದರು. ಮಧ್ಯಮ ಕ್ರಮಾಂಕದಿಂದ ಎಂದಿನಂತೆಯೇ ನೀರಸ ಪ್ರದರ್ಶನ ವ್ಯಕ್ತವಾದ ಕಾರಣ ಆರ್‌ಸಿಬಿ ಮತ್ತೊಮ್ಮೆ ಕೆಕೆಆರ್ ವಿರುದ್ಧ ಸೋಲು ಕಂಡಂತಾಗಿದೆ.
ಈ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಮತ್ತೊಮ್ಮೆ ಆಧಾರವಾದ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಬಾರಿಸಿದರು. 145ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ ವಿರಾಟ್ ಕೊಹ್ಲಿ. ಈ ಪ್ರದರ್ಶನದ ಬಗ್ಗೆ ಮಾತನಾಡಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ವಿರಾಟ್ ಕೊಹ್ಲಿ ಹೆಚ್ಚಾಗಿ ಬೌಂಡರಿಗಳನ್ನು ಗಳಿಸುವ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದಿದ್ದಾರೆ.

ಕ್ರಿಕ್‌ಬಜ್ ಜೊತೆಗೆ ಮಾತನಾಡಿದ ಮೈಕಲ್ ವಾನ್ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾಗ ಹೆಚ್ಚಿನ ತಂಡಗಳು ಸ್ಪಿನ್ನರ್‌ಗಳನ್ನು ದಾಳಿಗಿಳಿಸಲು ಬಯಸುತ್ತಾರೆ. ಅದಕ್ಕೆ ಕಾರಣ ಸ್ಪಿನ್ನರ್‌ಗಳ ವಿರುದ್ಧ ಕೊಹ್ಲಿಯ ಸ್ಟ್ರೈಕ್‌ರೇಟ್ ಎಂದಿದ್ದಾರೆ. "ಬಹುತೇಕ ತಂಡಗಳು ಕೊಹ್ಲಿ ವಿರುದ್ಧ ಸ್ಪಿನ್ನರ್‌ಗಳನ್ನು ದಾಳಿಗಿಳಿಸಲು ಬಯಸುತ್ತಾರೆ. ಅದಕ್ಕೆ ಕಾರಣ ಸ್ಪಿನ್ನರ್‌ಗಳ ವಿರುದ್ಧ ಅವರ ಸ್ಟ್ರೈಕ್‌ರೇಟ್. ಸ್ಪಿನ್ನರ್‌ಗಳ ವಿರುದ್ಧ ಅವರು ಬಹಶಃ 107ರಷ್ಟು ಸ್‌ಟರೈಕ್‌ರೇಟ್ ಹೊಂದಿದ್ದಾರೆ. ಅಲ್ಲದೆ ವಿಡ್ ವಿಕೆಟ್ ಭಾಗದಲ್ಲಿ ಮೂವರು ಫೀಲ್ಡರ್‌ಗಳನ್ನು ನಿಲ್ಲಿಸುತ್ತಾರೆ" ಎಂದಿದ್ದಾರೆ ಮೈಕಲ್ ವಾನ್.
ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. 8 ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟ್‌ನಿಂದ 333 ರನ್‌ಗಳು ಹರಿದು ಬಂದಿದೆ. 47.57ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವ ಕೊಹ್ಲಿ 142.31 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಈ ಟೂರ್ನಿಯಲ್ಲಿ ಕೊಹ್ಲಿ ಐದು ಅರ್ಧ ಶತಕ ಸಿಡಿಸಿದ್ದು ಅವರ ಹೈಯೆಸ್ಟ್ ಸ್ಕೋರ್ 82 ಆಗಿದೆ. ಫೀಲ್ಟಿಂಗ್‌ನಲ್ಲಿಯೂ ಕೊಹ್ಲಿ ಮಿಂಚಿದ್ದು ಮೊದಲ 8 ಪಂದ್ಯಗಳಲ್ಲಿ 8 ಕ್ಯಾಚ್‌ಗಳನ್ನು ಪಡೆದುಕೊಂಡಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ 21 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲಿಯೂ ಆರ್‌ಸಿಬಿ ಕೆಕೆಆರ್ ತಂಡಕ್ಕಿಂತ ಹಿಂದುಳಿದ ಪರಿಣಾಮವಾಗಿ ಸೋಲು ಕಾಣುವಂತಾಯಿತು. ಆರ್‌ಸಿಬಿ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೇ 1ರಂದು ಏಕಾನ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications