For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ಗೆ ಈತನೇ ಪ್ರಮುಖ ಅಸ್ತ್ರ ಎಂದ ಮೈಕಲ್ ವಾನ್

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಆಶಸ್ ಟೆಸ್ಟ್ ಸರಣಿ ಈಗಾಗಲೇ ಆರಂಭವಾಗಿದ್ದು ಮೊದಲ ಪಂದ್ಯ ರೋಚಕ ಘಟ್ಟದಲ್ಲಿದೆ. ಇಂಗ್ಲೆಂಡ್ ತಂಡ ತನ್ನ ಬೇಸ್‌ಬಾಲ್ ಶೈಲಿಯ ಬ್ಯಾಟಿಂಗ್‌ನ ಮೂಲಕ ಆಕ್ರಮಣಕಾರಿ ಆಟವನ್ನು ಈ ಪಂದ್ಯದಲ್ಲಿಯೂ ಮುಂದಿವರಿಸಿದರೆ ಆಸ್ಟ್ರೇಲಿಯಾ ಅದಕ್ಕೆ ಸಾಂಪ್ರದಾಯಿಕ ಶೈಲಿಯಲ್ಲಿಯೇ ತಿರುಗೇಟು ನೀಡಿದ್ದು ತೀವ್ರ ಪೈಪೋಟಿ ಸೆಣೆಸಾಟ ನಡೆಯುತ್ತಿದೆ.

ಈ ರಣರೋಚಕ ಪಂದ್ಯದ ಹಿನ್ನೆಲೆಯಲ್ಲಿ ಮಾತನಾಡಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಇಂಗ್ಲೆಂಡ್ ಅನುಭವಿ ಆಟಗಾರ ಜೋ ರೂಟ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕ್ರಿಕೆಟ್ ಋತುವಿನಲ್ಲಿ ಇಂಗ್ಲೆಂಡ್ ತಂಡಕ್ಕೆ ಮೈಕಲ್ ವಾನ್ ಅವರೇ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದಿದ್ದಾರೆ ಮೈಕಲ್ ವಾನ್.

Michael Vaughan praises Joe Root said he will be that glue for England in the summer

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಜೋ ರೂಟ್ ಮೊದಲ ದಿನವೇ ಭರ್ಜರಿ ಶತಕ ಸಿಡಿಸಿದ್ದರು. ಜೋ ರೂಟ್ ಶತಕದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 393 ರನ್‌ಗಳನ್ನು ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ರೂಟ್ 118 ರನ್‌ಗಳನ್ನು ಗಳಿಸಿ ಅಜೇಯವಾಗುಳಿದಿದ್ದರು.

ರೂಟ್ ಬ್ಯಾಟಿಂಗ್ ಮಾಡುವಾಗ ಇಂಗ್ಲೆಂಡ್ ಮೈದಾನದಲ್ಲಿ ಸುಲಲಿತವಾಗಿ ಕಾಣುತ್ತದೆ ಎಂದು ವಾನ್ ಹೇಳಿದರು. ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ವಿರುದ್ಧ ರೂಟ್ ಸಿಡಿಸಿದ ಸಿಕ್ಸರ್ ಬಗ್ಗೆ ಮಾತನಾಡಿದ ವಾನ್ ಈ ಸ್ಟಾರ್ ಆಟಗಾರ ತನ್ನದೇ ಶೈಲಿಯ ಆಟದೊಂದಿಗೆ ಇಂಗ್ಲೆಂಡ್ ತಂಡಕ್ಕೆ ಬೆಂಬಲವಾಗಿ ನಿಂತಿದ್ದು ಇದನ್ನು ನೋಡಲು ಬಹಳ ರೋಮಾಂಚನಕಾರಿಯಾಗಿದೆ ಎಂದಿದ್ದಾರೆ.

"ಆತ ಆಡುವಾಗ ಬಹಳ ಸುಲಭವಾಗಿ ಕ್ರಿಕೆಟ್ ಆಡುವಂತೆ ಭಾಸವಾಗುತ್ತದೆ. ಸ್ಕಾಟ್ ಬೋಲ್ಯಾಂಡ್ ಅವರ 95 mph ವೇಗದ ಎಸೆತವನ್ನು ಸ್ಕೂಪ್ ಮೂಲಕ ಸಿಕ್ಸರ್‌ಗೆ ಅಟ್ಟಿದ್ದು ತುಂಬಾ ಸುಲಭವಾಗಿ ಕಾಣುವಂತೆ ಮಾಡಿದ್ದರು. ಇದು ಬಹುಶಃ ಅತ್ಯಂತ ವಿಚಿತ್ರವಾದ ಹೊಡೆತಗಳಲ್ಲಿ ಒಂದಾಗಿದೆ. ಅದನ್ನು ನಾವು ಬಾರಿಸಲು ಪ್ರಯತ್ನಿಸಿದರೆ ಗಾಳಿಯಲ್ಲಿ ಬಲೂನ್ ಆಡಿದಂತೆ ಆಗಬಹುದು. ಅವರು ಬ್ರ್ಯಾಂಡ್ ಆಫ್ ಕ್ರಿಕೆಟ್ ಆಡುತ್ತಿದ್ದು ಅದಕ್ಕೆ ತಂಡ ಕೂಡ ಅವರಿಗೆ ಅವಕಾಶ ನೀಡುತ್ತಿದೆ " ಎಂದಿದ್ದಾರೆ.

ರೂಟ್ ಅವರು ಈ ಪಂದ್ಯದಲ್ಲಿ ತಮ್ಮದೇ ಶೈಲಿಯಲ್ಲಿ ಆಡಿದ್ದರಿಂದ ಅವರ ಇನ್ನಿಂಗ್ಸ್ ಇಷ್ಟವಾಯಿತು ಎಂದು ವಾನ್ ಹೇಳಿದ್ದಾರೆ. ಮುಂದಿವರಿದು ವಾನ್ ಕೀಪರ್-ಬ್ಯಾಟರ್ ಜಾನಿ ಬೈರ್‌ಸ್ಟೋವ್ ಅವರೊಂದಿಗೆ ರೂಟ್ ಅವರ ವಿಕೆಟ್‌ಗಳ ನಡುವೆ ಅವರ ಓಟವು ಅತ್ಯುತ್ತಮವಾಗಿತ್ತು ಎಂದಿದ್ದಾರೆ. ರೂಟ್ ಅವರ ಈ ಪ್ರದರ್ಶನ ಈ ಆವೃತ್ತಿಯುದ್ದಕ್ಕೂ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿದ ಮೈಕಲ್ ವಾನ್ ಈ ಋತುವಿನಲ್ಲಿ ಇಂಗ್ಲೆಂಡ್ ತಂಡಕ್ಕೆ ರೂಟ್ ಆಧಾರವಾಗಲಿದ್ದಾರೆ ಎಂದಿದ್ದಾರೆ.

Story first published: Sunday, June 18, 2023, 21:55 [IST]
Other articles published on Jun 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+