Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಆತನಿಗೆ ದೊಡ್ಡ ಕಾಂಟ್ರಾಕ್ಟ್ ದೊರೆಯಬೇಕು: ಮೈಕಲ್ ವಾನ್ ಹೇಳಿದ್ದು ಯಾರ ಬಗ್ಗೆ?

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್ ಹೆಡ್ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ ಟ್ರಾವಿಸ್ ಹೆಡ್ ಆರನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲು ಕಾರಣವಾದರು. ಇನ್ನು ಟೀಮ್ ಇಂಡಿಯಾ ಮೊದಲಿಗೆ ಬ್ಯಾಟಿಂಗ್ ನಡೆಸುತ್ತಿದ್ದಾಗ ನಾಯಕ ರೋಹಿತ್ ಶರ್ಮಾ ನೀಡಿದ ಅತ್ಯಂತ ಕಠಿಣ ಕ್ಯಾಚನ್ನು ಪಡೆಯುವ ಮೂಲಕ ಭಾರತ ತಂಡಕ್ಕೆ ಆರಂಭದಲ್ಲಿಯೇ ದೊಡ್ಡ ಆಘಾತವನ್ನು ಕೂಡ ನೀಡಿದ್ದರು.

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟ್ರಾವಿಡ್ ಹೆಡ್ ನೀಡಿರುವ ಈ ಪ್ರದರ್ಶನವನ್ನು ಉಲ್ಲೇಖಿಸಿ ಮೈಕಲ್ ವಾನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಂದಿನ ಐಪಿಎಲ್ ಆವೃತ್ತಿಗಾಗಿ ನಡೆಯಲಿರುವ ಹರಾಜಿನಲ್ಲಿ ಟ್ರಾವಿಸ್ ಹೆಡ್ ಅವರೊಗೆ ದೊಡ್ಡ ಮೊತ್ತಕ್ಕೆ ಹರಾಜಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

Michael Vaughan praises Travis Head said he should get a large IPL contract

"ಆಸ್ಟ್ರೇಲಿಯಾದ ಬೌಲರ್‌ಗಳೆಲ್ಲಾ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಇನ್ನು ಅವರು ಫೀಲ್ಡಿಂಗ್‌ನಲ್ಲಿಯೂ ಅಮೋಘ. ರೋಹಿತ್ ಶರ್ಮಾ ಅವರ ಕ್ಯಾಚನ್ನು ಪಡೆಯುವ ಮೂಲಕ ಟ್ರಾವಿಸ್ ಹೆಡ್ ಅದಕ್ಕೆ ಮುನ್ನುಡಿ ಬರೆದರು. ಅದುವೇ ಪಂದ್ಯದ ದೊಡ್ಡ ಸಂದರ್ಭ. ಬಳಿಕ ಅವರು ಬ್ಯಾಟಿಂಗ್‌ನಲ್ಲಿ ವಿಶೇಷ ಇನ್ನಿಂಗ್ಸ್ ಆಡಿದರು. ವಿಶ್ವಕಪ್‌ನಂಥಾ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವುದು ಬಹಳ ವಿಶೇಷ" ಎಂದಿದ್ದಾರೆ ಮೈಕಲ್ ವಾನ್.

"ಈಗ ಅವರು ವಿಶ್ವದ ಅತ್ಯಂತ ಭಯಾನಕ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಯಾವುದೇ ತಂಡಕ್ಕಾದರೂ ಅವರು ದೊಡ್ಡ ಅಸ್ತ್ರವಾಗಲಿದ್ದಾರೆ" ಎಂದು ಮೈಕಲ್ ವಾನ್ ಅವರು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ಬರೆದಿರುವ ಅಂಕಣದಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

"ಅವರು ನಿಖರವಾಗಿ ಏನು ಮಾಡಿದ್ದಾರೆ ಎಂದು ನನಗೆ ಅರಿವಿಲ್ಲ. ಆದರೆ ಪ್ರಗತಿ ಸಾಧಿಸುವುದಕ್ಕೆ ಬಹಳಷ್ಟು ಅವಕಾಶವಿದೆ ಎನ್ನುವುದಕ್ಕೆ ಆತ ದೊಡ್ಡ ಉದಾಹರಣೆಯಾಗಿದ್ದಾರೆ. ವರ್ಷದ ಹಿಂದೆ ಅವರಲ್ಲಿ ಸಾಮರ್ಥ್ಯವಿದ್ದರೂ ಅವರು ಸ್ಥಿರವಾಗಿ ಪ್ರದರ್ಶನ ನೀಡದ ಕಾರಣ ಅಪಾಯಕಾರಿ ಆಟಗಾರ ಎನಿಸಿಕೊಂಡಿರಲಿಲ್ಲ. ಆದರೆ ಈಗ ಅವರು ಆಡುತ್ತಿರುವ ರೀತಿ ಆಕ್ರಮಣಕಾರಿ ಆಟಕ್ಕೆ ಮತ್ತು ಹೇಗೆ ಆಡಬೇಕು ಎನ್ನುವುದಕ್ಕೆ ಮಾದರಿಯಾದಂತಿದೆ. ನನ್ನ ಪ್ರಕಾರ ಆತನಿಗೆ ದೊಡ್ಡ ಐಪಿಎಲ್ ಕಾಂಟ್ರಾಂಕ್ಟ್ ಸಿಗಲಿದೆ ಮತ್ತು ಅದು ಅವರಿಗೆ ಸಿಗಬೇಕು" ಎಂದಿದ್ದಾರೆ ಮೈಕಲ್ ವಾನ್.

ಈ ಬಾರಿಯ ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ಗಾಯದಿಂದಾಗಿ ಕೆಲ ಪಂದ್ಯಗಳನ್ನು ಹೆಡ್ ತಪ್ಪಿಸಿಕೊಂಡಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧ ಕಮ್‌ಬ್ಯಾಕ್ ಮಾಡಿದ ಪಂದ್ಯದಲ್ಲಿಯೇ ಅಮೋಘ ಶತಕ ಬಾರಿಸುವ ಮೂಲಕ ಅಬ್ಬರಿಸಿದ್ದರು. ಅದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇತರ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡುತ್ತಿದ್ದರೂ ಅರ್ಧ ಶತಕ ಸಿಡಿಸಿ ಆ ಪಂದ್ಯದಲ್ಲಿಯೂ ಆಸಿಸ್ ಗೆಲುವಿಗೆ ಕಾರಣವಾಗಿದ್ದರು. ಇನ್ನು ಫೈನಲ್ ಪಂದ್ಯದಲ್ಲಿಯೂ ಭಾರತದ ಸೋಲಿಗೆ ಕಾರಣವಾದರು ಟ್ರಾವಿಸ್ ಹೆಡ್.

Story first published: Wednesday, November 22, 2023, 8:54 [IST]
Other articles published on Nov 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+