ಮ್ಯಾಚ್ ಫಿಕ್ಸಿಂಗ್ ವೇಳೆ ಈ ಬುದ್ಧಿ ಇರಬೇಕಿತ್ತು ; ಕೊಹ್ಲಿ ಪರ ಮಾತನಾಡಿದ್ದ ಆಟಗಾರನಿಗೆ ವಾನ್ ತರಾಟೆ

ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ನಡುವೆ ಹೋಲಿಕೆ ಮಾಡಿ ಮೈಕಲ್ ವಾನ್ ನೀಡಿದ್ದ ಹೇಳಿಕೆ ಇದೀಗ ದಿನದಿಂದ ದಿನಕ್ಕೆ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಮಾಜಿ ಆಟಗಾರ ಮೈಕಲ್ ವಾನ್ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರು ಸಹ ಒಂದೇ ಮಟ್ಟದ ಆಟಗಾರರು ಆದರೆ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ ಹಾಗೂ ಜಾಹೀರಾತಿನಲ್ಲಿ ಅಪಾರವಾದ ಹಣವನ್ನು ದುಡಿಯುತ್ತಾರೆ, ಒಂದುವೇಳೆ ಕೇನ್ ವಿಲಿಯಮ್ಸನ್ ಭಾರತೀಯ ಆಟಗಾರನಾಗಿದ್ದರೆ ವಿರಾಟ್ ಕೊಹ್ಲಿಗಿಂತ ಆತ ಹೆಚ್ಚು ಜನಪ್ರಿಯನಾಗುತ್ತಿದ್ದ ಎಂದು ಮೈಕಲ್ ವಾನ್ ಹೇಳಿದ್ದರು.
ಮೈಕಲ್ ವಾನ್ ನೀಡಿದ ಈ ಹೇಳಿಕೆ ಕುರಿತು ಇತ್ತೀಚಿಗಷ್ಟೆ ಪಾಕಿಸ್ತಾನದ ಮಾಜಿ ಆಟಗಾರ ಸಲ್ಮಾನ್ ಬಟ್ ಪ್ರತಿಕ್ರಿಯೆ ನೀಡಿದ್ದರು. ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರ, ಕೊಹ್ಲಿ ಇದುವರೆಗೂ ಒಟ್ಟು 70 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ, ವಿರಾಟ್ ಕೊಹ್ಲಿ ಭಾರತಕ್ಕೆ ಸಾಕಷ್ಟು ಪಂದ್ಯಗಳನ್ನು ಹೋರಾಡಿ ಗೆಲ್ಲಿಸಿಕೊಟ್ಟಿದ್ದಾರೆ. ಇಂತಹ ಆಟಗಾರನನ್ನು ಇದುವರೆಗೂ ಒಂದೇ ಒಂದು ಏಕದಿನ ಶತಕವನ್ನು ಸಿಡಿಸದ ಮೈಕಲ್ ವಾನ್ ಬೇರೆಯವರೊಡನೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಸಲ್ಮಾನ್ ಬಟ್ ಮೈಕಲ್ ವಾನ್ ಹೇಳಿಕೆಗೆ ಟಾಂಗ್ ನೀಡಿದರು.
ಇದೀಗ ಸಲ್ಮಾನ್ ಬಟ್ ಹೇಳಿಕೆಗೆ ಪ್ರತಿಕ್ರಿಯಿಸುವುದರ ಮೂಲಕ ಮೈಕಲ್ ವಾನ್ ತಿರುಗೇಟು ನೀಡಿದ್ದಾರೆ. 'ಸಲ್ಮಾನ್ ಬಟ್ ನೀಡಿರುವ ಹೇಳಿಕೆಗಳನ್ನು ಕೇಳಿದ್ದೇನೆ, ಆತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ ಆದರೆ ಇಷ್ಟೊಂದು ಬುದ್ಧಿ ಆತನಿಗೆ 2010ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಕೊಳ್ಳುವಾಗ ಇದ್ದಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಮೈಕಲ್ ವಾನ್ ಸಲ್ಮಾನ್ ಭಟ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications