ರೋಹಿತ್-ಕೊಹ್ಲಿ ಅಲ್ಲವೇ ಅಲ್ಲ; ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಯಾರು ಗೊತ್ತೇ?
ಹಲವು ವರ್ಷಗಳಿಂದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ. ಇಬ್ಬರು ಕೂಡ ಅಧಿಕ ರನ್ ಗಳನ್ನು ಗಳಿಸಿ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಈಗ ಇದ್ದಕ್ಕಿದ್ದಂತೆ ವಿಶ್ವ ಕ್ರಿಕೆಟ್‌ನಲ್ಲಿ ಸ್ಟಾರ್ ಬ್ಯಾಟರ್ ಮತ್ತೊಮ್ಮ ತನ್ನ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರನ್ನು ಈ ಬ್ಯಾಟರ್ ಹಿಂದಿಕ್ಕಿ ಮುನ್ನುಗುತ್ತಿದ್ದಾರೆ.

ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಇತಿಹಾಸ ನಿರ್ಮಿಸಿದ್ದಾರೆ. ಅವರು ಇದುವರೆಗೆ 145 ಟೆಸ್ಟ್ ಪಂದ್ಯಗಳ 265 ಇನ್ನಿಂಗ್ಸ್‌ಗಳಲ್ಲಿ 50.93 ರ ಅತ್ಯುತ್ತಮ ಸರಾಸರಿಯಲ್ಲಿ 12377 ರನ್ ಗಳಿಸಿದ್ದಾರೆ. ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 34 ಶತಕ ಮತ್ತು 64 ಅರ್ಧ ಶತಕಗಳನ್ನು ಹೊಂದಿರುವುದು ಅವರ ಸಾಧನೆಗ ನೆರವಾಗಿದೆ.
ದಿಗ್ಗಜರ ದಾಖಲೆ ಬ್ರೇಕ್
ಶನಿವಾರ ಲಾರ್ಡ್ಸ್‌ನಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೂರನೇ ದಿನ ಜೋ ರೂಟ್ ತಮ್ಮ 34ನೇ ಟೆಸ್ಟ್ ಶತಕವನ್ನು ಪೂರೈಸಿದ್ದಾರೆ. ಇದರೊಂದಿಗೆ ಭಾರತದ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸುನಿಲ್ ಗವಾಸ್ಕರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 34 ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ ಅವರು, ಅಲಸ್ಟೈರ್ ಕುಕ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್
ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್, ಜೋ ರೂಟ್ ಅವರನ್ನು ಶ್ರೇಷ್ಠ ಬ್ಯಾಟರ್ ಎಂದು ಹೊಗಳಿದ್ದಾರೆ. ಬಿಬಿಸಿಗೆ ನೀಡಿರುವ ಹೇಳಿಕೆ ಪ್ರಕಾರ, 'ಇದೊಂದು ದೊಡ್ಡ ಸಾಧನೆ. ಜೋ ರೂಟ್ ತಮ್ಮ ತಂತ್ರ ಮತ್ತು ಸಾಮರ್ಥ್ಯದಿಂದ ಈ ಸ್ಥಾನವನ್ನು ಸಾಧಿಸಿದ್ದಾರೆ. ಜೋ ರೂಟ್ ಒಬ್ಬ ಅತ್ಯುತ್ತಮ ಬ್ಯಾಟರ್ ಮತ್ತು ರೋಲ್ ಮಾಡೆಲ್ ಎಂದಿದ್ದಾರೆ.
10 ದೇಶಗಳ ವಿರುದ್ಧ ಶತಕ
ಟೆಸ್ಟ್ ಕ್ರಿಕೆಟ್‌ನಲ್ಲಿ ರೂಟ್ ಅವರು ಕಡಿಮೆ ಅವಧಿಯಲ್ಲಿ 25 ರನ್ ಗಳಿಸುವುದನ್ನು ನೀವು ಎಷ್ಟು ಬಾರಿ ನೋಡಿರುತ್ತೀರಿ. 10 ದೇಶಗಳ ವಿರುದ್ಧ ಶತಕಗಳನ್ನು ಗಳಿಸಿರುವ ರೂಟ್, ಆಸ್ಟ್ರೇಲಿಯಾದಲ್ಲಿ ಇನ್ನೂ ಶತಕ ಬಾರಿಸಿಲ್ಲ. ಇದು ಅವರ ಶ್ರೇಷ್ಠ ದಾಖಲೆಗೆ ದೊಡ್ಡ ಕಳಂಕವಾಗಿದೆ. ಆದರೆ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆಶಸ್‌ನಲ್ಲಿ ಅವರು ಶತಕ ಹೊಡೆಯಬಹುದು ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications