4ನೇ ಟಿ20ಐಗೆ ಟೀಮ್ ಇಂಡಿಯಾದಲ್ಲಿ ಇಬ್ಬರನ್ನು ಆಡಿಸಲು ವಾನ್ ಸಲಹೆ

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಟಿ20ಐ ಸರಣಿಯಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ತಂಡ ಅಂಥ ಶ್ರೇಷ್ಠ ತಂಡವೇನೂ ಅಲ್ಲ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 16) ನಡೆದಿದ್ದ 3ನೇ ಟಿ20ಐನಲ್ಲಿ ಭಾರತ 8 ವಿಕೆಟ್ ಹೀನಾಯ ಸೋಲನುಭವಿಸಿದ ಬಳಿಕ ವಾನ್ ಈ ಹೇಳಿಕೆ ನೀಡಿದ್ದಾರೆ.
ಭಾರತ-ಇಂಗ್ಲೆಂಡ್ ತೃತೀಯ ಟಿ20ಐ ಪಂದ್ಯದಲ್ಲಿ ಸೋಲುವುದರೊಂದಿಗೆ ಭಾರತ ತಂಡ ಐದು ಪಂದ್ಯಗಳ ಟಿ20ಐನಲ್ಲಿ 2-1ರ ಹಿನ್ನಡೆ ಅನುಭವಿಸಿದೆ. ನಾಯಕ ವಿರಾಟ್ ಕೊಹ್ಲಿ 77 ರನ್ ಬಾರಿಸಿ ಹೋರಾಡಿದ್ದು ಬಿಟ್ಟರೆ ಉಳಿದ ಯಾರೂ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ.

ಬೆಸ್ಟ್ ತಂಡವೆಂದು ನೆನಪಾಯ್ತು
'ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ನೀವು ಆಡಿದ್ದು ನೋಡುವಾಗ ನಿಮ್ಮದು ಬೆಸ್ಟ್ ತಂಡವೆಂದು ನೆನಪಾಯ್ತು. ತಂಡವನ್ನು ಸಂಪೂರ್ಣ ಬದಲಿಸಿ ಆಡಿದಿರಿ ಮತ್ತು ಇಂಗ್ಲೆಂಡ್‌ನದ್ದು ಬೆಸ್ಟ್ ತಂಡವಾಗಿರಲಿಲ್ಲ. ಆದರೆ ಈಗ ಇರುವ ಈ ಟಿ20ಐ ತಂಡ ಅಷ್ಟೇನೂ ಚೆನ್ನಾಗಿಲ್ಲ,' ಎಂದು ಕ್ರಿಕ್‌ಬಝ್ ಜೊತೆ ಮಾತನಾಡಿದ ವಾನ್ ಹೇಳಿದ್ದಾರೆ.

ಇಬ್ಬರನ್ನು ಆಡಿಸಲು ಸಲಹೆ
'ನನಗೆ ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ನೆನಪಾಗುತ್ತಿದ್ದಾರೆ. ಅವರನ್ನು ತಂಡಕ್ಕೆ ಕರೆತನ್ನಿ. ಅವರು ತಂಡವನ್ನು ಇನ್ನಷ್ಟು ಬಲಿಷ್ಠ ಆಗಿಸುತ್ತಾರೆ. ನಿಮಗೆ ಹೆಚ್ಚಿನ ಬೌಲಿಂಗ್ ಆಯ್ಕೆ ಸಿಗುತ್ತದೆ. ಎಡ-ಬಲ ಬ್ಯಾಟಿಂಗ್ ಶಕ್ತಿ ಅಡೇಜಾ ಅವರಿಂದ ಸಿಗುತ್ತದೆ. ಬೂಮ್ರಾ ಅವರಿಂದ ವಿಶ್ವಶ್ರೇಷ್ಠ ಪ್ರದರ್ಶನ ಸಿಗುತ್ತದೆ,' ಎಂದು ವಾನ್ ವಿವರಿಸಿದರು.

ಬೂಮ್ರಾ-ಜಡೇಜಾ ಹೊರಗೇಕೆ?
ಅಂದ್ಹಾಗೆ ವಾನ್ ಸಲಹೆ ನೀಡಿರುವ ಮುಂಬೈ ಇಂಡಿಯನ್ಸ್ ವೇಗಿ ಬೂಮ್ರಾ ಮತ್ತು ಜಡೇಜಾ ಅವರಲ್ಲಿ ಬೂಮ್ರಾ ಮದುವೆಯ ರಜೆಯಲ್ಲಿದ್ದಾರೆ. ಇನ್ನು ಆಲ್ ರೌಂಡರ್ ಜಡೇಜಾ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳೆ ಜಡೇಜಾ ಬೆರಳಿಗೆ ಗಾಯವಾಗಿತ್ತು. ಭಾರತ-ಇಂಗ್ಲೆಂಡ್ 4ನೇ ಟಿ20 ಮಾರ್ಚ್ 18ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications