Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಾಕೋಬ್ ಬೆಥೆಲ್ ಆರ್‌ಸಿಬಿ ತೊರೆದು ಇಂಗ್ಲೆಂಡ್‌ಗೆ ಮರಳಲಿ: ಮೈಕಲ್ ವಾನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಆಡುವ ಅವಕಾಶ ಸಿಗದಿದ್ದರೆ ತಕ್ಷಣವೇ ಇಂಗ್ಲೆಂಡ್‌ಗೆ ಮರಳುವಂತೆ ಯುವ ಆಟಗಾರ ಜಾಕೋಬ್ ಬೆಥೆಲ್‌ಗೆ ಮಾಜಿ ಇಂಗ್ಲೆಂಡ್ ನಾಯಕ ಮೈಕಲ್ ವಾನ್ ಸಲಹೆ ನೀಡಿದ್ದಾರೆ. ಬೆಥೆಲ್ ಟೆಸ್ಟ್‌ ಕ್ರಿಕೆಟ್ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ತವರಿಗೆ ಹಿಂದಿರುಗಬೇಕು ಎಂದು ಮಾಜಿ ನಾಯಕ ಅಲಿಸ್ಟೇರ್ ಕುಕ್ ಕೂಡ ಈ ಮೊದಲೇ ತಿಳಿಸಿದ್ದರು. ಈಗ ಈ ಸಾಲಿಗೆ ಮೈಕಲ್ ವಾನ್ ಸೇರಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೆಥೆಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯದಿದ್ದಾಗ ಮೈಕಲ್ ವಾನ್ ಈ ಹೇಳಿಕೆ ನೀಡಿದ್ದು ವೈರಲ್ ಆಗಿದೆ.

ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ, ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವಿರುದ್ಧ ಟಾಸ್ ಸೋತಿತು. ಈ ವೇಳೆ ಆರ್‌ಸಿಬಿ ನಾಯಕ ಜಾಕೊಬ್ ಬೆಥೆಲ್‌ ಅವರು ಹೆಬ್ಬರಳಿನ ಗಾಯಕ್ಕೆ ತುತ್ತಾಗಿದ್ದಾರೆ ಎಂದು ತಿಳಿಸಿದ್ದರು.

Michael Vaughan

ಬೆಥೆಲ್‌ ಗಾಯಗೊಂಡಿದ್ದರೆ ಅವರು ಮುಂದಿನ ಫೈಟ್ ಹಿಡಿದು ನೇರವಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಬೇಕು. ಇಂಗ್ಲೆಂಡ್‌ ಜೂನ್ 4 ರಂದು ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ವೇಳೆ ಇವರು ಫಿಟ್ ಆಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಇಂಗ್ಲೆಂಡ್ ಸಹ ಪರಿಶೀಲಿಸಬೇಕು ಎಂದು ಮೈಕಲ್ ವಾನ್ ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೈಕಲ್ ವಾನ್ ಹೇಳಿದಿಷ್ಟು?

ನಾನು ಹಳೆಯ ಸಂಪ್ರದಾಯವನ್ನು ನಂಬುತ್ತೇನೆ. ಐಪಿಎಲ್‌ನಲ್ಲಿ ಆರ್‌ಸಿಬಿ ಲೀಗ್‌ನ ಕೊನೆಯ ವರೆಗೂ ಇರಬೇಕು ಎಂದು ತಿಳಿಸಬಹುದು. ಇವರು ಆರ್‌ಸಿಬಿ ಪರ ಕೊನೆಯ ಪಂದ್ಯದ ವರೆಗೆ ಆಡಿದರೆ, ಇಂಗ್ಲೆಂಡ್‌ ವಿರುದ್ಧದ ತರಬೇತಿ ಶಿಬಿರವನ್ನು ಮಿಸ್‌ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ಇವರು ಯುಕೆಗೆ ಮರಳಬೇಕು. ಐಪಿಎಲ್‌ನಲ್ಲಿ ನೀವು ಆಡಿದರೆ ಆಟದ ಗುಣಮಟ್ಟ ಬೆಳೆಯುತ್ತದೆ ಎಂಬುದು ಸಹ ತಿಳಿದಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಇರುವುದು ದೊಡ್ಡ ಅನುಭವ ಎಂದು ಮೈಕಲ್ ವಾನ್ ಅಭಿಪ್ರಾಯ ಪಟ್ಟಿದ್ದಾರೆ.

Michael Vaughan

Story first published: Saturday, May 23, 2026, 15:07 [IST]
Other articles published on May 23, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+