ಭಾರತ ತಂಡಕ್ಕಿಂತ ಮುಂಬೈ ಇಂಡಿಯನ್ಸ್ ಬಲಿಷ್ಠ ಎಂದು ಕುಟುಕಿದ ವಾನ್ ಕಾಲೆಳೆದ ವಾಸಿಂ ಜಾಫರ್

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬಳಿಕ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪ್ರತಿಕ್ರಿಯೆ ನೀಡಿ ಸುದ್ದಿಯಾಗಿದ್ದಾರೆ. ಟೀಮ್ ಇಂಡಿಯಾಗಿಂತ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡ ಎಂದು ಮೈಕಲ್ ವಾನ್ ಕಾಲೆಳೆಯುವ ಮೂಲಕ ವಿರಾಟ್ ಕೊಹ್ಲಿ ಬಳಗವನ್ನು ಕುಟುಕುವ ಪ್ರಯತ್ನ ಮಾಡಿದ್ದಾರೆ.
ಈ ಹಿಂದೆ ಟೆಸ್ಟ್ ಸರಣಿಯ ಸಂದರ್ಭದಲ್ಲೂ ಮೈಕಲ್ ವಾನ್ ವಿರಾಟ್ ಕೊಹ್ಲಿ ತಂಡವನ್ನು ಕೆಣಕುವಂತೆ ಹಲವು ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದರು. ಬಳಿಕ ಭಾರತೀಯ ಪಿಚ್ ಬಗ್ಗೆ ನೀಡಿದ ಹೇಳಿಕೆಗಳು ಕೂಡ ಸಾಕಷ್ಟು ಸುದ್ದಿಯಾಗಿತ್ತು. ಈಗ ಸೀಮಿತ ಓವರ್‌ಗಳ ಸರಣಿಗೂ ಮುನ್ನ ಮತ್ತೆ ಮೈಕಲ್ ವಾನ್ ಸುದ್ದಿಯಾಗಿದ್ದಾರೆ.
"ಭಾರತೀಯ ತಂಡಕ್ಕಿಂತ ಮುಂಬೈ ಇಂಡಿಯನ್ಸ್ ಉತ್ತಮವಾದ ತಂಡ!!!" ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಪ್ರತಿಕ್ರಿಯಿಸಿದ್ದು ಮೈಕಲ್ ವಾನ್‌ಗೆ ತಿರುಗೇಟು ನೀಡಿದ್ದಾರೆ.
"ಎಲ್ಲಾ ತಂಡಗಳು ಕೂಡ ನಾಲ್ವರು ವಿದೇಶಿ ಆಟಗಾರರೊಂದಿಗೆ ಆಡುವಷ್ಟು ಅದೃಷ್ಟವನ್ನು ಹೊಂದಿರುವುದಿಲ್ಲ" ಎಂದು ಜಾಫರ್ ಮೈಕಲ್‌ವಾನ್‌ಗೆ ಪ್ರತ್ಯುತ್ತರವನ್ನು ನೀಡುವ ಮೂಲಕ ಇಂಗ್ಲೆಂಡ್ ವಿದೇಶಿ ಆಟಗಾರರನ್ನು ಹೆಚ್ಚಾಗಿ ಅವಲಂಬಿಸಿರುವುದಕ್ಕೆ ಕಾಲೆಳೆದಿದ್ದಾರೆ.
ಐಪಿಎಲ್‌ನಲ್ಲಿ ತಂಡವೊಂದು ನಾಲ್ವರು ವಿದೇಶಿ ಆಟಗಾರರನ್ನು ಹೊಂದಿರುವುದಕ್ಕೆ ಅವಕಾಶವಿದೆ. ಆದರೆ ರಾಷ್ಟ್ರೀಯ ತಂಡವಾಗಿರುವ ಇಂಗ್ಲೆಂಡ್ ತಂಡ ಇದೇ ಮಾದರಿಯಲ್ಲಿ ವಿದೇಶಿ ಆಟಗಾರರನ್ನು ಹೋಮದಿ ಕಣಕ್ಕಿಳಿಯುತ್ತಿದೆ ಎಂದು ಜಾಫರ್ ಮೈಕಲ್ ವಾನ್ ಕಾಳೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications