For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ಕ್ರಿಕೆಟ್ ನಿರ್ದೇಶಕನ ಹೇಳಿಕೆಗೆ ಕೆರಳಿ ಕೆಂಡವಾದ ಐಸಿಸಿ: ಸಂಕಟಕ್ಕೆ ಸಿಲುಕಿದ ಮಿಕ್ಕಿ ಆರ್ಥರ್

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿದ್ದ ಮುಖಾಮುಖಿಯೆಂದರೆ ಅದು ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯ. ಅಹ್ಮದಾಬಾದ್‌ನಲ್ಲಿ ಈ ಪಂದ್ಯ ಈಗಾಗಲೇ ನಡೆದಿದ್ದ ಭಾರತ ತಂಡ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿಹಾಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತದ ಅಜೇಯ ಗೆಲುವಿನ ಓಟ ಮುಂದುವರಿದಿದೆ.

ಈ ಹೈವೋಲ್ಟೇಜ್ ಪಂದ್ಯದ ಬಳಿಕ ಪಾಕಿಸ್ತಾನ ತಂಡದ ಕ್ರಿಕೆಟ್ ನಿರ್ದೇಶಕ ಮಿಕ್ಕಿ ಆರ್ಥರ್ ನೀಡಿರುವ ಹೇಳಿಕೆ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ. ಅಹ್ಮದಾಬಾದ್‌ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಈ ಪಂದ್ಯ ಐಸಿಸಿ ಟೂರ್ನಿಯ ರೀತಿಯಲ್ಲಿ ಆಯೋಜನೆಯಾಗಿಲ್ಲ. ಬದಲಾಗಿ ಇದೊಂದು ದ್ವಿಪಕ್ಷೀಯ ಸರಣಿಯಂತೆ ಕಂಡುಬಂದಿತ್ತು. ಇದು ಸಂಪೂರ್ಣವಾಗಿ ಬಿಸಿಸಿಐನ ಸರಣಿಯಂತೆ ಭಾಸವಾಗಿತ್ತು ಎನ್ನುವ ಮೂಲಕ ಬಿಸಿಸಿಐ ಹಾಗೂ ಐಸಿಸಿಯನ್ನು ಖಂಡಿಸಿದ್ದರು.

India vs Pakistan

ಮುಜುಗರಕ್ಕೀಡಾದ ಐಸಿಸಿ

ಮಾಧ್ಯಮಗೋಷ್ಠಿಯಲ್ಲಿ ಪಾಕಿಸ್ತಾನ ತಂಡದ ಕ್ರಿಕೆಟ್ ನಿರ್ದೇಶಕನಾಗಿರುವ ಮಿಕ್ಕಿ ಆರ್ಥರ್ ನೀಡಿರುವ ಈ ಹೇಳಿಕೆಯನ್ನು ಐಸಿಸಿ ಇದೀಗ ಗಂಭೀರವಾಗಿ ಪರಿಗಣಿಸಿದೆ. ಮಿಕ್ಕಿ ಆರ್ಥರ್ ನೀಡಿರುವ ಈ ಹೇಳಿಕೆ ಐಸಿಸಿಯನ್ನು ಮುಜುಗರಕ್ಕೀಡು ಮಾಡಿದೆ. ಹೀಗಾಗಿ ಈ ಅಭಿಪ್ರಾಯವನ್ನು ಪರಾಮರ್ಶಿಸಲು ಐಸಿಸಿ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಿಕ್ಕಿ ಆರ್ಥರ್ ನೀಡಿರುವ ಈ ಹೇಳಿಕೆಯನ್ನು ಸಮರ್ಥಿಸಲು ವಿಫಲವಾದರೆ ದಂಡನೆಗೂ ಒಳಗಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಿಕ್ಕಿ ಆರ್ಥರ್ ಹೇಳಿದ್ದೇನು?

ಪಾಕಿಸ್ತಾನ ತಂಡಕ್ಕೆ ಅಹ್ಮದಾಬಾದ್‌ನಲ್ಲಿ ಪ್ರೇಕ್ಷಕರಿಂದ ಬೆಂಬಲ ದೊರೆಯದ ವಿಚಾರವನ್ನು ಮಿಕ್ಕಿ ಆರ್ಥರ್ ಪ್ರಸ್ತಾಪಿಸಿದ್ದರು. "ಇದರಿಂದಾಗಿ ನಮ್ಮ ತಂಡಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರೆ ನಾನು ಸುಳ್ಳು ಹೇಳಿದಂತಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಐಸಿಸಿ ಇವೆಂಟ್ ರೀತಿಯಾಗಿ ಗೋಚರವಾಗಲಿಲ್ಲ. ಇದು ದ್ವಿಪಕ್ಷೀಯ ಸರಣಿಯಂತೆ ಭಾಸವಾಗಿತ್ತು. ಇದು ಬಿಸಿಸಿಐನ ಕಾರ್ಯಕ್ರಮದಂತೆ ಕಾಣಿಸಿತು" ಎಂದು ಮಿಕ್ಕಿ ಆರ್ಥರ್ ಹೇಳಿಕೊಂಡಿದ್ದರು.

ಪ್ರತಿಕ್ರಿಯೆ ನೀಡಿದ ಐಸಿಸಿ ಮುಖ್ಯಸ್ಥ

ಇನ್ನು ಮಿಕ್ಕಿ ಆರ್ಥರ್ ಅವರ ಈ ಹೇಳಿಕೆಗೆ ಐಸಿಸಿ ಮುಖ್ಯಸ್ಥ ಗ್ರೆಗ್ ಬಾರ್ಕ್ಲೆ "ಪ್ರತಿ ಬಾರಿ ಟೂರ್ನಿಗಳನ್ನು ಆಯೋಜನೆ ಮಾಡಿದಾಗಲೂ ಬೇರೆ ಬೇರೆ ಕಡೆಯಿಂದ ನಾವು ಟೀಕೆಗಳನ್ನು ಎದುರಿಸುತ್ತೇವೆ. ಅಂಥಾ ಟೀಕೆಗಳಿಗೆ ಮೌಲ್ಯವಿದ್ದರೆ ಅದನ್ನು ನಾವು ಗಂಭೀರವಾಗಿ ಪರಿಗಣಿಸಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಇದೀಗ ಟೂರ್ನಿಯ ಆರಂಭವಷ್ಟೇ. ಎಲ್ಲವನ್ನೂ ಕೂಡ ಪರಾಮರ್ಶಿಸಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಿದ್ದೇವೆ" ಎಂದು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ತಂಡ ಈಗಾಗಲೇ ಮೂರು ಪಂದ್ಯಗಳನ್ನು ಆಡಿದ್ದು ಎರಡು ಗೆಲುವು ಒಂದು ಸೋಲು ಕಂಡಿದೆ. ಪಾಕಿಸ್ತಾನ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಳಿಯಾಗಿರಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 20ರಂದು ಈ ಪಂದ್ಯ ಆಯೋಜನೆಯಾಗಲಿದೆ. ಇನ್ನು ಮತ್ತೊಂದೆಡೆ ಭಾರತ ತಂಡಕ್ಕೆ ಬಾಂಗ್ಲಾದೇಶ ಮುಂದಿನ ಎದುರಾಳಿಯಾಗಿದ್ದು ಅಕ್ಟೋಬರ್ 19ರಂದು ಈ ಪಂದ್ಯ ನಡೆಯಲಿದೆ.

Story first published: Tuesday, October 17, 2023, 15:51 [IST]
Other articles published on Oct 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+