Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs PBKS IPL 2025: ಪಂಜಾಬ್‌ ಕೈಯಿಂದ ಪಂದ್ಯ ಜಾರಲು ಇದೇ ಮುಖ್ಯ ಕಾರಣ...

ನ್ಯೂ ಚಂಢೀಗಡ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಬೌಲರ್‌ಗಳ ಬಿಗುವಿನ ದಾಳಿ ಹಾಗೂ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಅವರ ಅರ್ಧಶತಕದ ಬಲದಿಂದ ಆರ್‌ಸಿಬಿ ನಿಗದಿತ ಗುರಿಯನ್ನು ಇನ್ನು 7 ಎಸೆತ ಇರುಂವತೆ ಮುಟ್ಟಿ ಬೀಗಿದೆ. ಈ ಪಂದ್ಯದಲ್ಲಿ ಪಂಜಾಬ್‌ ಸೋಲಿಗೆ ಕಾರಣ ಏನು ಎಂಬ ಪ್ರಶ್ನೆಗಳು ಉದ್ಭವಿಸುತ್ತಿದೆ. ಅದಕ್ಕೆ ಎಲ್ಲರ ಕಣ್ಣುಗಳು ಪಂಜಾಬ್ ಕಿಂಗ್ಸ್‌ ತಂಡದ ಮಿಡ್ಲ್ ಆರ್ಡರ್ ಬ್ಯಾಟರ್‌ಗಳತ್ತ ಹೋಗುತ್ತದೆ.

Middle-order Collapse Turns the Tide as RCB Clinch 7-Wicket Win Over PBKS

ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್ ಮಾಡುವ ನಿರ್ಧಾರಕ್ಕೆ ಬರುತ್ತದೆ. ಆದರೆ ಪಂಜಾಬ್ ತಂಡದ ಆರಂಭಿಕರು ಮಾಡುತ್ತಿದ್ದ ಬ್ಯಾಟಿಂಗ್‌ ನೋಡಿ ರಜತ್‌ ಪಟಿದಾರ್ ತಪ್ಪು ಮಾಡಿದಾರ ಎಂಬ ಭಾವನೆ ಸಹ ಬರುತ್ತದೆ. ಆದರೆ ಬಳಿಕ ಆರ್‌ಸಿಬಿ ಬೌಲರ್‌ಗಳು ಕಮಾಲ್‌ ಪ್ರದರ್ಶನ ನೀಡಿದ್ದಾರೆ. ಮೊದಲ ವಿಕೆಟ್‌ ಪಂಜಾಬ್‌ ಆರಂಭಿಕರು 42 ರನ್‌ ಕಾಣಿಕೆ ನೀಡುತ್ತಾರೆ. ಈ ಇಬ್ಬರು ಓಪನರ್ಸ್‌ಗಳನ್ನು ಕೃನಾಲ್‌ ಪಾಂಡ್ಯ ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾಗುತ್ತಾರೆ. ಇಲ್ಲಿಂದ ಪಂಜಾಬ್‌ ಕಿಂಗ್ಸ್‌ ಬ್ಯಾಟರ್‌ಗಳು ರನ್‌ಗಳನ್ನು ಕಲೆ ಹಾಕುವಲ್ಲಿ ವಿಫಲರಾಗುತ್ತಾರೆ.

ಇದೇ ಮ್ಯಾಚ್‌ ಟರ್ನಿಂಗ್ ಪಾಯಿಂಟ್‌

ಪಂಜಾಬ್‌ ತಂಡದ ಮಿಡ್ಲ್‌ ಆರ್ಡರ್‌ನಲ್ಲಿ ಶ್ರೇಯಸ್ ಅಯ್ಯರ್ (6) ಇವರಿಗೆ ರೊಮಾರಿಯೋ ಶೆಫರ್ಡ್ ಖೆಡ್ಡ ತೋಡುತ್ತಾರೆ. ಕಳೆದ ಪಂದ್ಯದಲ್ಲಿ ಹೀರೋ ರೀತಿ ಮಿಂಚಿದ್ದ ನೇಹಾಲ್‌ ವಧೇರಾ (5) ಬೇಗನೆ ಪೆವಿಲಿಯನ್ ಹಾದಿ ಹಿಡಿಯುತ್ತಾರೆ. ಇವರು ಇಲ್ಲದ ರನ್‌ ಕದಿಯಲು ಹೋಗಿ ರನ್‌ ಔಟ್ ಆಗುತ್ತಾರೆ.

ಜೋಶ್‌ ಇಂಗ್ಲಿಷ್‌ (29 ರನ್) ಸಹ ಜವಾಬ್ದಾರಿ ಮರೆಯುತ್ತಾರೆ. ಇದೇ ಅವಧಿಯಲ್ಲಿ ಸುಯೇಶ್ ಶರ್ಮಾ ಒಂದೇ ಓವರ್‌ನಲ್ಲಿ ಜೋಶ್ ಇಂಗ್ಲೀಷ್ ಹಾಗೂ ಮಾರ್ಕಸ್ ಸ್ಟೋಯಿನಿಸ್‌ಗೆ ಔಟ್ ಮಾಡುತ್ತಾರೆ. ಪಂಜಾಬ್ ಕಿಂಗ್ಸ್‌ 7 ರಿಂದ 14 ಓವರ್‌ಗಳ ಮಧ್ಯದಲ್ಲಿ ಕೇವಲ 46 ರನ್‌ ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಳ್ಳುತ್ತದೆ. ಪಂಜಾಬ್‌ ಕಿಂಗ್ಸ್ ತಂಡದ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಉತ್ತಮ ವೇದಿಕೆಯನ್ನು ನಿರ್ಮಿಸಿಕೊಟ್ಟರು ಇದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಮಿಡ್ಲ್ ಆರ್ಡರ್‌ ಬ್ಯಾಟರ್‌ಗಳು ವಿಫಲರಾಗುತ್ತಾರೆ. ಇದುವೇ ಪಂಜಾಬ್‌ ಬಿಗ್ ಸ್ಕೋರ್ ಕನಸಿಗೆ ಪೆಟ್ಟು ನೀಡುತ್ತದೆ.

Middle-order Collapse Turns the Tide as RCB Clinch 7-Wicket Win Over PBKS

ಗುರಿಯನ್ನು ಬೆನ್ನಟಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿರುತ್ತದೆ. ಫಿಲ್‌ ಸಾಲ್ಟ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಬೇಗನೆ ವಿಕೆಟ್‌ ಒಪ್ಪಿಸುತ್ತಾರೆ. ಆದರೆ ದೇವದತ್ ಹಾಗೂ ವಿರಾಟ್‌ ಕೊಹ್ಲಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಗುತ್ತಾರೆ. ಅಲ್ಲದೆ ಇಬ್ಬರೂ ಅರ್ಧಶತಕ ಬಾರಿಸಿ ಮಿಂಚುತ್ತಾರೆ. ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಆಟಕ್ಕೆ ಪಂದ್ಯ ಶ್ರೇಷ್ಠ ಗರಿ ಸಹ ಸಲ್ಲುತ್ತದೆ. ಈ ಗೆಲುವಿನ ಮೂಲಕ ಆರ್‌ಸಿಬಿ ಅಗತ್ಯ 2 ಅಂಕ ಕಲೆ ಹಾಕಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

Story first published: Sunday, April 20, 2025, 20:14 [IST]
Other articles published on Apr 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+