For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮರು ಆಯೋಜನೆಗೆ ಸಮಯ ಹೊಂದಿಸುವುದು ಕಷ್ಟ: ಇಂಗ್ಲೆಂಡ್ ಮಾಜಿ ನಾಯಕ

Mike Atherton sais Just dont see gap in calendar for IPL 2021 to be rescheduled

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕ್ ಅಥರ್ಟನ್ ಈ ಬಾರಿಯ ಐಪಿಎಲ್ ಟೂರ್ನಿ ಮುಂದೂಡಿರುವ ವಿಚಾರವಾಗಿ ಪ್ರತಿಕ್ರಿಯಸಿದ್ದಾರೆ. ಮುಂದೂಡಿರುವ ಐಪಿಎಲ್ ಮರು ಆಯೋಜನೆಗೆ ಸಮಯಾವಕಾಶದ ಹೊಂದಾಣಿಕೆ ಕಷ್ಟ ಎಂದು ಅಥರ್ಟನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಐಪಿಎಲ್ ಮರು ಆಯೋಜನೆಗೆ ಎಲ್ಲಿಯೂ ನನಗೆ ಸಮಯಾವಾಕಾಶಗಳು ಕಾಣಿಸುತ್ತಿಲ್ಲ. ಬೇಸಿಗೆಯಲ್ಲಿ ಭಾರತ ಇಂಗ್ಲೆಂಡ್‌ಗೆ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲು ಆಗಮಿಸಲಿದೆ. ಅದು ಬೇಸಿಗೆಯ ಮಧ್ಯ ಭಾಗದಲ್ಲಿ ಅಂತ್ಯವಾಗಲಿದೆ. ನಂತರ ಟಿ20 ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗೆ ನಿಗದಿಯಾಗಿದೆ. ಆದರೆ ಅದು ಯುಎಇಗೆ ಸ್ಥಳಾಂತರವಾದರೆ ಅಚ್ಚರಿಯಿಲ್ಲ" ಎಂದು ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಆಥರ್ಟನ್ ಹೇಳಿದ್ದಾರೆ.

ಈ ಮಧ್ಯೆ ಸಣ್ಣ ಅಂತರ ಇರುವಂತಿದೆ. ಆದರೆ ಈಗ ಎಲ್ಲಾ ರಾಷ್ಟ್ರಗಳು ಕೂಡ ಈಗ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಸಿದ್ಧತೆಗಳನ್ನು ನಡೆಸಲಿದೆ. ಇಂಗ್ಲೆಂಡಗ ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ತೆರಳಲಿದೆ. ಈ ಸಂದರ್ಭದಲ್ಲಿ ಭಾರತದ ಆಟಗಾರರು ಕೂಡ ಸಾಕಷ್ಟು ಬಯೋಬಬಲ್‌ನಲ್ಲಿ ಕಳೆಯಲಿದ್ದು ಮತ್ತಷ್ಟು ಸಮಯವನ್ನು ಬಯೋಬಬಲ್‌ನಲ್ಲಿ ಕಳೆಯುವಂತೆ ಕೇಳಕೊಳ್ಳುವುದು ಕಷ್ಟ ಎಂದು ಆಥರ್ಟನ್ ಹೇಳಿದ್ದಾರೆ.

ಸದ್ಯ ಬಿಸಿಸಿಐ ಯಾವಾಗ ಐಪಿಎಲ್ ಮರು ಆಯೋಜನೆ ಮಾಡಲಿದೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹೊಂದಿಲ್ಲ. ಆದರೆ ಸಪ್ಟೆಂಬರ್ ತಿಂಗಳಿನಲ್ಲಿ ವಿಶ್ವಕಪ್‌ಗೂ ಮುನ್ನ ದೊರೆಯುವ ಅವಕಾಶದಲ್ಲಿ ಬಿಸಿಸಿಐ ಐಪಿಎಲ್ ಆಯೋಜಿಸುವ ಯೋಚನೆಯನ್ನು ಹೊಂದಿದೆ ಎಂಬುದನ್ನು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿಕೊಂಡಿದ್ದಾರೆ.

Story first published: Thursday, May 6, 2021, 9:57 [IST]
Other articles published on May 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+