ಐಪಿಎಲ್ 2021 ದ್ವಿತೀಯ ಹಂತಕ್ಕೆ ಆರ್‌ಬಿಯಲ್ಲಿ ಕೋಚ್, ಪ್ಲೇಯರ್ಸ್ ಬದಲಾವಣೆ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2021ರ ದ್ವಿತೀಯ ಆವೃತ್ತಿಗೂ ಮುನ್ನ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ತಂಡದಲ್ಲಿ ಒಂದಿಷ್ಟು ಆಟಗಾರರು ಮತ್ತು ಮುಖ್ಯ ಕೋಚ್ ಕೂಡ ಬದಲಾಗಿದ್ದಾರೆ. ಐಪಿಎಲ್ ದ್ವಿತೀಯ ಹಂತಕ್ಕೆ ಆರ್‌ಸಿಬಿ ಮುಖ್ಯ ಕೋಚ್ ಆಗಿ ಸೈಮನ್ ಕಟಿಚ್ ಬದಲು ಮೈಕ್ ಹೆಸನ್ ಆರಿಸಲ್ಪಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಅಧಿಕೃತ ಟ್ವಿಟರ್ ಖಾತೆ ಈ ಸಂಗತಿ ಖಾತರಿಪಡಿಸಿದೆ.
ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 'ಒಂದು ಘೋಷಣೆಯಿದೆ. ಕೋಚ್ ಸೈಮನ್ ಕಟಿಚ್ ವೈಯಕ್ತಿಕ ಕಾರಣಕ್ಕಾಗಿ ಅಲಭ್ಯರಿರುವುದರಿಂದ ಐಪಿಎಲ್ 2021 ಇನ್ನುಳಿದ ಪಂದ್ಯಗಳಿಗೆ ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿ ಮೈಕ್ ಹೆಸನ್ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ' ಎಂದು ಬರೆದುಕೊಂಡಿದೆ.
ಐಪಿಎಲ್ ದ್ವಿತೀಯ ಹಂತಕ್ಕೆ ಆರ್‌ಸಿಬಿಯಲ್ಲಿ ಪ್ಲೇಯರ್ಸ್ ಕೂಡ ಬದಲಾವಣೆ
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ ಐಪಿಎಲ್ 2021ರ ದ್ವಿತೀಯ ಹಂತದ ಪಂದ್ಯಗಳ ವೇಳೆ ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಗಳು ಕಾಣ ಸಿಗಲಿವೆ. ಒಂದು ತಂಡದ ಮುಖ್ಯ ಕೋಚ್ ಆಗಿ ಸೈಮನ್ ಕಟಿಚ್ ಬದಲು ಮೈಕ್ ಹೆಸನ್ ಆರಿಸಲ್ಪಟ್ಟರೆ, ಆಟಗಾರರು ಒಂದಿಷ್ಟು ಮಂದಿ ಬದಲಾಗಿದ್ದಾರೆ. ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಆರ್‌ಸಿಬಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ ಬದಲು ಶ್ರೀಲಂಕಾದ ಸ್ಪಿನ್ನರ್, ಆಲ್ ರೌಂಡರ್ ವನಿಂದು ಹಸರಂಗ ಆಡಲಿದ್ದಾರೆ. ಆಸೀಸ್ ಮತ್ತೊಬ್ಬ ಬೌಲರ್ ಕೇನ್ ರಿಚರ್ಡ್ಸನ್ ಬದಲು ಶ್ರೀಲಂಕಾದ ದುಶ್ಮಂತ ಚಮೀರ ಆಡಲಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಫಿನ್ ಅಲೆನ್ ಬದಲಿಗೆ ಸಿಂಗಾಪುರದ ಕ್ರಿಕೆಟರ್ ಟಿಮ್ ಡೇವಿಡ್ ಕಣಕ್ಕಿಳಿಯಲಿದ್ದಾರೆ. ಆರ್‌ಸಿಬಿ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದು, ಬದಲಾವಣೆಗೆ ತಕ್ಕಂತೆ ಉತ್ತಮ ಪ್ರದರ್ಶನವೂ ನೀಡಿದರೆ ಚೊಚ್ಚಲ ಬಾರಿಗೆ ಕಪ್ ಗೆಲ್ಲಲು ಅವಕಾಶಗಳಿವೆ.

ಐಪಿಎಲ್ ದ್ವಿತೀಯ ಪಂದ್ಯಗಳು ಶುರು ಯಾವಾಗ?
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಆರ್‌ಸಿಬಿಗೆ ಸೆಪ್ಟೆಂಬರ್ 20ರಂದು ಮೊದಲ ಪಂದ್ಯವಿದ್ದು, ಆವತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ.

ಐಪಿಎಲ್ 2021 ದ್ವಿತೀಯ ಹಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿ
* ಸೆಪ್ಟೆಂಬರ್ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್, ರಾತ್ರಿ 7.30
* ಸೆಪ್ಟೆಂಬರ್ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ರಾತ್ರಿ 7.30
* ಸೆಪ್ಟೆಂಬರ್ 26: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ರಾತ್ರಿ 7.30 ಕ್ಕೆ
* ಸೆಪ್ಟೆಂಬರ್ 29: ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಂಜೆ 7.30 ಕ್ಕೆ
* ಅಕ್ಟೋಬರ್ 3: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಧ್ಯಾಹ್ನ 3.30 ಕ್ಕೆ
* ಅಕ್ಟೋಬರ್ 6: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಸಂಜೆ 7.30 ಕ್ಕೆ
* ಅಕ್ಟೋಬರ್ 8: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಸಂಜೆ 7.30 ಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications