1.25ಕ್ಕೆ ಶುಭ್ಮನ್ ಗಿಲ್ ಔಟ್, 1.30ಕ್ಕೆ ಇನ್: ಭಾರೀ ಟ್ರೋಲಿಗೆ ಒಳಗಾದ ಈ ಮಹಾ ಎಡವಟ್ಟು!
ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಏಷ್ಯಾ ಕಪ್ - 2023, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ಆಗಸ್ಟ್ 30ರಂದು ನಡೆಯುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಸೆಣಸಾಡಲಿವೆ. ಹೈವೊಲ್ಟೇಜ್ ಪಂದ್ಯಕ್ಕೆ ಟೀಂ ಇಂಡಿಯಾ ತನ್ನ ತಂಡವನ್ನು ಪ್ರಕಟಿಸಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ 17 ಸದಸ್ಯರ ತಂಡವನ್ನು ಸೋಮವಾರ್ (ಆಗಸ್ಟ್ 21) ಮಧ್ಯಾಹ್ನದಂದು ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಘೋಷಿಸಿದರು. ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ, ಆ ಮೂಲಕ ಜಸ್ಪ್ರೀತ್ ಬುಮ್ರಾ ಅವರು ಉಪನಾಯಕರಾಗುತ್ತಾರೆ ಎನ್ನುವ ಸುದ್ದಿಗೆ ತೆರೆಬಿದ್ದಿದೆ.

ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಬಿಸಿಸಿಐ ಅನೌನ್ಸಮೆಂಟ್ ಅನ್ನು ಕಾಯುತ್ತಿದ್ದರು. ಆದರೆ, ಆರು ನಿಮಿಷಗಳ ಅಂತರದಲ್ಲಿ ಆದ ಗೊಂದಲದಿಂದಾಗಿ ಕ್ರಿಕೆಟ್ ಅಭಿಮಾನಿಗಳು ಶಾಕ್ ಎದುರಿಸುವಂತಾಯಿತು. ಆದರೆ, ಇದು ಬಿಸಿಸಿಐನಿಂದಾಗಿ ಆದ ಎಡವಟ್ಟು ಆಗಿರಲಿಲ್ಲ. ಬದಲಿಗೆ, ಏಷ್ಯಾ ಕಪ್ ಟೂರ್ನಮೆಂಟಿನ ಅಧಿಕೃತ ಪ್ರಸಾರಕರಿಂದಾದ ಎಡವಟ್ಟು ಆಗಿತ್ತು.
ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಿತ್ತು, ಆದರೆ ಸ್ಟಾರ್ ಸ್ಪೋರ್ಟ್ಸ್ ಪ್ರಕಟಿಸಿದ್ದ ಪಟ್ಟಿಯಲ್ಲಿ ಒಂದು ಹೆಸರು ಮಿಸ್ ಆಗಿತ್ತು. ಅದು ಆರಂಭಿಕ ಆಟಗಾರ್ ಶುಭ್ಮನ್ ಗಿಲ್ ಅವರದ್ದು. ಆರು ನಿಮಿಷದಲ್ಲಿ ತನ್ನಿಂದಾದ ತಪ್ಪನ್ನು ಸ್ಟಾರ್ ಸ್ಪೋರ್ಟ್ಸ್ ಸರಿ ಪಡಿಸಿತ್ತು. ಆದರೆ, ಅಷ್ಟೊತ್ತಿಗಾಗಲೇ ಅದು ಭಾರೀ ಟ್ರೋಲಿಗೆ ಆಹಾರವಾಯಿತು.

ಮೊದಲಿಗೆ ಸ್ಟಾರ್ ಸ್ಪೋರ್ಟ್ ಪ್ರಕಟಿಸಿದ್ದ ಹದಿನೇಳು ತಂಡ ಹೀಗಿತ್ತು: ರೋಹಿತ್, ವಿರಾಟ್, ಶ್ರೇಯಸ್ ಐಯ್ಯರ್, ರಾಹುಲ್, ಸೂರ್ಯಕುಮಾರ್, ತಿಲಕ್ ವರ್ಮಾ, ಇಶಾನ್ ಕಿಷನ್, ಪಾಂಡ್ಯ, ಜಡೇಜ, ಅಕ್ಸರ್, ಶ್ರಾದ್ದೂಲ್, ಬುಮ್ರಾ, ಶಮಿ, ಸಿರಾಜ್, ಕುಲದೀಪ್, ಪ್ರಸಿದ್ ಕೃಷ್ಣ ಮತ್ತು ಸಂಜು ಸಾಮ್ಯನ್ (ಬ್ಯಾಕ್ ಅಪ್) ಎಂದು ಪ್ರಕಟಿಸಿತ್ತು.
ಪಟ್ಟಿಯಲ್ಲಿ ಶುಭ್ಮನ್ ಗಿಲ್ ಹೆಸರು ಇರಲಿಲ್ಲ
ಈ ಪಟ್ಟಿಯಲ್ಲಿ ಶುಭ್ಮನ್ ಗಿಲ್ ಹೆಸರು ಇರಲಿಲ್ಲ. ಬಿಸಿಸಿಐ ಪ್ರಕಟಿಸಿದ್ದ ಅಸಲಿ ಪಟ್ಟಿಯಲ್ಲಿ ಶುಭ್ಮನ್ ಗಿಲ್ ಹೆಸರಿತ್ತು ಮತ್ತು ಸಂಜು ಸಾಮ್ಸನ್ ಹೆಸರು ಪ್ರಯಾಣದ ಮೀಸಲು ಆಟಗಾರರ ಪಟ್ಟಿಯಲ್ಲಿತ್ತು. ಶುಭ್ಮನ್ ಗಿಲ್ ಹೆಸರನ್ನು ಸ್ಟಾರ್ ಸ್ಪೋರ್ಟ್ಸ್ ಮಿಸ್ ಮಾಡಿರುವುದು ಸಾಮಾಜಿಕ ಜಾಲತಾಣ ಟ್ವಿಟ್ಟರ್ (X) ನಲ್ಲಿ ವ್ಯಾಪಕ ಟ್ರೋಲಿಗೆ ಒಳಗಾಗಿದೆ. ತರಹೇವಾರಿ ಟ್ವೀಟುಗಳು #AsiaCup2023 ಹ್ಯಾಷ್ ಟ್ಯಾಗಿನಲ್ಲಿ ಬಂದು ಬೀಳುತ್ತಿದೆ. ಕೆಲವರು, ಶುಭ್ಮನ್ ಗಿಲ್ ಹೆಸರು ಡ್ರಾಪ್ ಆಗಿರುವುದಕ್ಕೆ ಸಚಿನ್ ತೆಂಡೂಲ್ಕರ್ ಹೆಸರನ್ನೂ ಎಳೆದು ತರುತ್ತಿದ್ದಾರೆ.
ಒಂದು ಸ್ಯಾಂಪಲ್ ಟ್ವೀಟ್ ಹೀಗಿದೆ
ಒಂದು ಸ್ಯಾಂಪಲ್ ಟ್ವೀಟ್ ಹೀಗಿದೆ: "ಶುಭ್ಮನ್ ಗಿಲ್ ಸ್ಕ್ವಾಡ್ ನಲ್ಲಿ ತನ್ನ ಹೆಸರು ಇರದ ಹಿನ್ನೆಲೆಯಲ್ಲಿ ಬಿಸಿಸಿಐ ಪ್ರಧಾನ ಕಚೇರಿಗೆ ತೆರಳುತ್ತಿದ್ದರು. ಆದರೆ, ಈಗ ಅವರು ಮಿನಿ ದಾಳಿಗಾಗಿ ಸ್ಟಾರ್ ಸ್ಪೋರ್ಟ್ಸ್ ಕಚೇರಿಗೆ ತೆರಳುತ್ತಿದ್ದಾರೆ" ಇನ್ನೊಂದು, "ಗ್ರೇಟ್ ಕಂಬ್ಯಾಕ್ ಬೈ ಶುಭ್ಮನ್ ಆನ್ ಸ್ಟಾರ್ ಸ್ಪೋರ್ಟ್ಸ್" ಎಂದು ಸಿಲ್ಲಿ ಪಾಯಿಂಟ್ ಎನ್ನುವ ಅಕೌಂಟ್ ನಿಂದ ಟ್ವೀಟೊಂದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications