AB de Villiers: ಇಶಾನ್ ಕಿಶನ್ ಬಗ್ಗೆ ಮಹತ್ವದ ಹೇಳಿಕೆ ನೀಡಿರುವ ಆರ್‌ಸಿಬಿಯ ಮಾಜಿ ಪ್ಲೇಯರ್ ಎಬಿಡಿ ವಿಲಿಯರ್ಸ್
ಈ ದಿನಗಳಲ್ಲಿ ಭಾರತ ತಂಡದಿಂದ ಹೊರಗುಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಿಸ್ಟರ್ 360 ಎಬಿ ಡಿವಿಲಿಯರ್ಸ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಶಾನ್ ಕಿಶನ್ ಮತ್ತು ಭಾರತ ತಂಡದ ಆಡಳಿತದ ನಡುವೆ ಒಂದು ಗ್ಯಾಪ್ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ. ಕಿಶನ್ ಟೀಮ್ ಇಂಡಿಯಾಗೆ ಏಕೆ ಆಯ್ಕೆಯಾಗುತ್ತಿಲ್ಲ? ಮತ್ತು ಕಿಶನ್ ದೇಶೀಯ ಕ್ರಿಕೆಟ್ ಏಕೆ ಆಡುತ್ತಿಲ್ಲ?, ಈ ಪ್ರಶ್ನೆಗೆ ಇನ್ನು ಯಾರೊಬ್ಬರೂ ಸರಿಯಾಗಿ ಉತ್ತರಿಸಲು ಸಾಧ್ಯವಾಗುತ್ತಿಲ್ಲ.
ಕೆಲವು ದಿನದ ಹಿಂದೆ ಕಿಶನ್ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ನ ಹೊಸ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಬರೋಡಾದಲ್ಲಿ ಅಭ್ಯಾಸ ಮಾಡುತ್ತಿರುವ ಸುದ್ದಿ ಭಾರೀ ವೈರಲ್ ಆಗಿತ್ತು. ಈಗ ಡಿವಿಲಿಯರ್ಸ್ ನೀಡಿರುವ ಹೇಳಿಕೆಯು ಬೇರೆ ಸೂಚನೆಯನ್ನು ನೀಡುವಂತಿದೆ.

ಇಶಾನ್ ಬಗ್ಗೆ ಹೇಳಿದ್ದೇನು?
ಇಶಾನ್ ಕಿಶನ್ ಪರಿಸ್ಥಿತಿಗೆ ಅನುಗುಣವಾಗಿ ಡಿವಿಲಿಯರ್ಸ್, ಭಾರತದಲ್ಲಿ ಕ್ರಿಕೆಟ್ ವಾತಾವರಣವು ತುಂಬಾ ಆಸಕ್ತಿದಾಯಕವಾಗಿದೆ. ನನ್ನ ಇಡೀ ವೃತ್ತಿಜೀವನದಲ್ಲಿ ನಾನು ಈ ಪರಿಸ್ಥಿತಿಯನ್ನು ಬಹಳ ಎದುರಿಸಿದ್ದೇನೆ ಎಂದು ಎಬಿಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಇದೊಂದು ಕಷ್ಟಕರ ಸನ್ನಿವೇಶ. ಆಟಗಾರರು ತಮ್ಮ ವೃತ್ತಿಜೀವನವನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಂದು ತೋರುತ್ತದೆ. ಆದರೆ ವಿಶ್ವದಾದ್ಯಂತ ವಿಭಿನ್ನ ಟಿ20 ಲೀಗ್‌ಗಳು ಮತ್ತು ಐಪಿಎಲ್ ಇರುವುದರಿಂದ ಆಟಗಾರರು ಸಾಕಷ್ಟು ಸಮಸ್ಯೆಗಳು ಮತ್ತು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನಿಮ್ಮ ಶಕ್ತಿಯು ಖಾಲಿಯಾದಾಗ. ನೀವು ಅಂತಹ ರಕ್ಷಣಾತ್ಮಕ ಸ್ಥಿತಿಗೆ ಹೋಗುತ್ತೀರಿ. ನಿಮಗೆ ಹೆಚ್ಚು ಮುಖ್ಯವೆಂದು ನೀವು ಪರಿ ಭಾವಿಸುವ ವಿಷಯವನ್ನು ಮಾತ್ರ ನೀವು ನೋಡಿಕೊಳ್ಳುತ್ತೀರಿ. ಇದು ಕೇವಲ ಮಾನವ ಪ್ರಕ್ರಿಯೆ ಎಂದು ಹೇಳಿದ್ದಾರೆ.

ಡಿವಿಲಿಯರ್ಸ್ ಇನ್ನೂ ಟೆಸ್ಟ್‌ಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಟೆಸ್ಟ್ ಸ್ವರೂಪವು ಶ್ರೇಷ್ಠವಾಗಿದೆ ಎಂದು ಹೇಳಿದರು. ಆಟದ ಅಸಲಿ ಸ್ವರೂಪವು ಟೆಸ್ಟ್ ಕ್ರಿಕೆಟ್ ಆಗಿದೆ. ಟೆಸ್ಟ್ ಆಡುವ ದೇಶಗಳು ನಿಜವಾಗಿಯೂ ಟೆಸ್ಟ್ ಸ್ವರೂಪದ ಮೇಲೆ ಕೇಂದ್ರೀಕರಿಸಲು ಬಯಸುತ್ತವೆ ಎಂದು ಅವರು ಹೇಳಿದ್ದಾರೆ.
ಡಿವಿಲಿಯರ್ಸ್ ನೀಡಿದ ಈ ಹೇಳಿಕೆಯಿಂದ, ಕ್ರಿಕೆಟಿಗನ ವೃತ್ತಿಜೀವನದಲ್ಲಿ ಒಂದು ಹಂತಕ್ಕೆ ತಲುಪುತ್ತಿದೆ ಎಂದು ನೀವು ಊಹಿಸಬಹುದು.
ಐಪಿಎಲ್‌ಗೆ ಪ್ರವೇಶಿಸಲು ಆಟಗಾರರು ರಣಜಿ ಟ್ರೋಫಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಈ ವಿಚಾರದಲ್ಲಿ ಆಟಗಾರರನ್ನು ಸಮರ್ಥಿಸಿಕೊಂಡಿದ್ದಾರೆ.
ಆಗಿದ್ದೇನು?
ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರಾಸೆ ಅನುಭವಿಸಿದರು. ಅಲ್ಲದೆ ಯಾವುದೇ ಫಾರ್ಮೆಟ್‌ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶವನ್ನು ಪಡೆಯುವಲ್ಲಿ ವಿಫಲರಾದರು. ಅಲ್ಲದೆ ಭಾರತದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧ ಸರಣಿಗೆ ಇಶಾನ್ ಕಿಶನ್ ಅವರನ್ನು ಕೈ ಬಿಟ್ಟಿದ್ದಕ್ಕೆ ಅಸಮಾಧಾನಗೊಂಡರು. ಇದರಿಂದ ಇಶಾನ್ ಒತ್ತಡಕ್ಕೆ ಒಳಗಾದರು.
ಇನ್ನು ಅಂತಾರಾಷ್ಟ್ರೀಯ ತಂಡಕ್ಕೆ ಮರಳಲುವ ಆಸೆಯಿದ್ದರೆ, ರಣಜಿ ಟೂರ್ನಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವಂತೆ ಕೋಚ್ ರಾಹುಲ್ ದ್ರಾವಿಡ್ ಸೂಚನೆ ನೀಡಿದ್ದರು. ಆದರೆ ಇಶಾನ್ ಕಿಶನ್ ಅವರ ಸಲಹೆಯನ್ನು ತಿರಸ್ಕರಿಸಿ, ಬರೋಡಾದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅಭ್ಯಾಸ ಆರಂಭಿಸಿದರು. ಇದರ ಪರಿಣಾಂ ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಇವರನ್ನು ಪರಿಗಣಿಸಲಾಗಲಿಲ್ಲ. ಈಗ ಟೀಮ್ ಇಂಡಿಯಾ ಪರ ಧ್ರುವ್ ಜುರೇಲ್ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications