ಜೋಶ್ ಹ್ಯಾಜಲ್‌ವುಡ್ WTC ಫೈನಲ್‌ಗೂ ಮುನ್ನ IPL ಆಡಿದ್ದೇ ತಪ್ಪು
ಲಾರ್ಡ್ಸ್ ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳ ಪ್ರದರ್ಶನ ನಾಲ್ಕನೇ ಇನಿಂಗ್ಸ್‌ನಲ್ಲಿ ಸ್ಥಿರವಾಗಿರಲಿಲ್ಲ. ಇದರ ಪರಿಣಾವೇ ಆಸೀಸ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೈ ಚೆಲ್ಲಬೇಕಾಯಿತು ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಇವರು ಆರ್‌ಸಿಬಿ ತಂಡದ ವೇಗದ ಬೌಲರ್ ಮೇಲೂ ಕೆಂಡಕಾರಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ತಂಡದಲ್ಲಿ ಜೋಶ್ ಹ್ಯಾಜಲ್‌ವುಡ್ ಮೊದಲ ಆಯ್ಕೆಯ ಆಟಗಾರ. ಇವರು ಸ್ಕಾಟ್ ಬೋಲ್ಯಾಂಡ್ ಅವರನ್ನು ತಂಡದಿಂದ ಹೊರ ಹಾಕಿ ಸ್ಥಾನ ಪಡೆದಿದ್ದಾರೆ. ಆದರೆ ಜೋಶ್ ಹ್ಯಾಜಲ್‌ವುಡ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜೋಶ್ ಕೇವಲ 2 ವಿಕೆಟ್ ಕಬಳಿಸಿದ್ದಾರೆ. ಜೋಶ್ ಅವರ ಪ್ರದರ್ಶನ ಕಂಡು ಆಸೀಸ್ ಮಾಜಿ ವೇಗಿ ಕೋಪಗೊಂಡಿದ್ದಾರೆ.

ಜೋಶ್ ಹ್ಯಾಜಲ್‌ವುಡ್ ಆ ಒಂದು ತಪ್ಪು ನಿರ್ಧಾರ ತಂಡಕ್ಕೆ ಮಾರಕವಾಯಿತು. ಟೆಸ್ಟ್ ಫೈನಲ್‌ಗೂ ಮುನ್ನ ಐಪಿಎಲ್ ಆಡುವ ನಿರ್ಧಾರ ಸರಿಯಾಗಿರಲಿಲ್ಲ. ಜೋಶ್ ಹ್ಯಾಜಲ್‌ವುಡ ಐಪಿಎಲ್ ಆಡುವ ಬದಲು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗೆ ತಯಾರಿ ನಡೆಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮಿಚೆಲ್ ಜಾನ್ಸನ್ ತಿಳಿಸಿದ್ದಾರೆ.
ಮಿಚೆಲ್ ಜಾನ್ಸನ್ ವೆಸ್ಟ್ ಆಸ್ಟ್ರೇಲಿಯನ್ ಪತ್ರಿಕೆಗೆ ಬರೆದ ಅಂಕಣದಲ್ಲಿ ಈ ಬಗ್ಗೆ ಪ್ರಸ್ಥಾಪಿಸಿದ್ದಾರೆ. ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಕಳೆದ ಕೆಲವು ತಿಂಗಳುಗಳಿಂದ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇವರು ರಾಷ್ಟ್ರೀಯ ತಂಡದೊಂದಿಗೆ ಸಿದ್ಧತೆ ನಡೆಸುವ ಬದಲು, ಪುನರಾರಂಭವಾದ ಐಪಿಎಲ್‌ನಲ್ಲಿ ಆಡಲು ಮನಸ್ಸು ಮಾಡಿದ್ದು ತಪ್ಪು ನಿರ್ಧಾರವಾಗಿದೆ. ಅವರ ಈ ನಿರ್ಧಾರ ಆಸೀಸ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಎಂದು ಬರೆದುಕೊಂಡಿದ್ದಾರೆ. ಮಿಚೆಲ್ ಜಾನ್ಸನ್ ಸಹ ಐಪಿಎಲ್‌ನಲ್ಲಿ ಆಡಿದ್ದಾರೆ. ಇವರು ಐಪಿಎಲ್‌ನಲ್ಲಿ ಆರು ತಂಡಗಳ ಪರ ಆಡಿದ ಅನುಭವ ಹೊಂದಿದ್ದಾರೆ.

ಪಂದ್ಯದ ಫಲಿತಾಂಶ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 212 ರನ್ ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 138 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್‌ನಲ್ಲಿ ಆಸೀಸ್ 207 ರನ್ ಸೇರಿಸಿತು. ದಕ್ಷಿಣ ಆಫ್ರಿಕಾ ಗುರಿಯನ್ನು ಬೆನ್ನಟ್ಟಿ 5 ವಿಕೆಟ್ ನಷ್ಟಕ್ಕೆ 282 ರನ್ ಕಲೆ ಹಾಕಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications