ಮಿಚೆಲ್ ಮಾರ್ಷ್‌ನನ್ನೇ ಅಪಹಾಸ್ಯ ಮಾಡಿದ ಆಸ್ಟ್ರೇಲಿಯಾ ಪ್ರೇಕ್ಷಕರು!

ಮೆಲ್ಬರ್ನ್, ಡಿಸೆಂಬರ್ 26: ಭಾರತದಲ್ಲಿ ಪಂದ್ಯ ನಡೆಯುತ್ತಿದೆ ಅಂದುಕೊಳ್ಳೋಣ. ನಮ್ಮವರು ಚೆನ್ನಾಗಿ ಆಡಲಿ ಆಡದಿರಲಿ ಒಟ್ಟಿನಲ್ಲಿ ಭಾರತೀಯ ಪ್ರೇಕ್ಷಕರು ಅಸ್ಪಷ್ಟವಾಗಿ ತಮ್ಮೊಳಗೇ ಗೊಣಗಿಕೊಂಡಾದ್ರೂ ಸರಿಯೆ, ಒಟ್ಟಿನಲ್ಲಿ ನಮ್ಮವರಿಗೇ ಬೆಂಬಲಿಸೋದು ಸಾಮಾನ್ಯ. ಆದರೆ ಆಸ್ಟ್ರೇಲಿಯಾದಲ್ಲಿ ಇದಕ್ಕೆ ವ್ಯತಿರಿಕ್ತ, ಅಪರೂಪದ ಸಂಗತಿ ನಡೆದಿದೆ.
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಬುಧವಾರ (ಡಿಸೆಂಬರ್ 26) ಆರಂಭಗೊಂಡ ಆಸ್ಟ್ರೇಲಿಯಾ-ಭಾರತ ಮೂರನೇ ಟೆಸ್ಟ್ ವೇಳೆ ಆಸ್ಟ್ರೆಲಿಯಾ ಆಲ್ ರೌಂಡರ್ ಮಿಚೆಲ್ ಮಾರ್ಚ್ ಅವರು ಆಸ್ಟ್ರೇಲಿಯಾ ಅಭಿಮಾನಿಗಳಿಂದಲೇ ಅಪಹಾಸ್ಯಕ್ಕೀಡಾಗಿ ಅವಮಾನ ಅನುಭವಿಸಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸೀಸ್ ಆಡುವ 11 ಆಟಗಾರರ ತಂಡದಲ್ಲಿ ಮಾರ್ಷ್ ಹೆಸರನ್ನು ಸೇರಿಸಲಾಗಿತ್ತು. ಸ್ಥಳೀಯ ಆಟಗಾರ ಪೀಟರ್ ಹ್ಯಾಂಡ್ಸ್‌ಕಾಂಬ್ ಬದಲಿಗೆ ಮಿಚೆಲ್‌ಗೆ ಸ್ಥಾನ ನೀಡಲಾಗಿತ್ತು. ಸರಣಿಯಲ್ಲಿ ಆಟಗಾರನ ಬದಲಾವಣೆ ನಡೆದಿದ್ದು ಇದೊಂದೆ. ಉಳಿದಂತೆ ಹಿಂದಿನ ಪಂದ್ಯಗಳಲ್ಲಿ ಆಡಿದ್ದ ಅದೇ ತಂಡ ಹೆಸರಿಸಲ್ಪಟ್ಟಿತ್ತು.
ಮೂರನೇ ಟೆಸ್ಟ್ ವೀಕ್ಷಿಸಲು ಬಂದಿದ್ದ ಕೆಲ ಆಸೀಸ್ ಅಭಿಮಾನಿಗಳಿಗೆ ತಂಡದಲ್ಲಿ ಹ್ಯಾಂಡ್ಸ್‌ಕಾಂಬ್ ಬದಲು ಮಾರ್ಷ್ ಸೇರಿಸಿದ್ದು ಸರಿ ಬಂದಂತೆ ಕಾಣಲಿಲ್ಲವೋ ಏನೋ. ಪಂದ್ಯದ ವೇಳೆ ಮಿಚೆಲ್‌ಗೆ ಮುಜುಗರ ಅನ್ನಿಸುವಂತೆ ಅಪಹಾಸ್ಯ ಮಾಡಿದ್ದಾರೆ. ವೀಕ್ಷಕರ ಈ ದುರ್ವರ್ತನೆಗೆ ಆಸೀಸ್ ಸಹ ಆಟಗಾರರಿಂದ ಅಸಮಾಧಾನ ವ್ಯಕ್ತವಾಗಿದ್ದೂ ಕಂಡುಬಂತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications