ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕನಾಗಿ ಮುನ್ನಡೆಸುತ್ತಿರುವ ಮಿಚೆಲ್ ಮಾರ್ಶ್ ವಿಶ್ವಕಪ್‌ನಲ್ಲಿ ತಂಡದ ಆರಂಭಿಕ ಸ್ಥಾನದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಉತ್ತರ ನೀಡಿದ್ದಾರೆ. ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರನಾಗಿ ಮಿಚೆಲ್ ಮಾರ್ಶ್ ಅವರೇ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದು ಹರಿದಾಡಿತ್ತು. ಇದಕ್ಕೆ ಮಾರ್ಶ್ ಸ್ಪಷ್ಟನೆ ನೀಡಿದ್ದಾರೆ.
ಭಾರತದಲ್ಲಿ ನಡೆಯಲಿರುವ ಏಕದಿನ ವಿರ್ಶವಕಪ್‌ನಲ್ಲಿ ಮಿಚೆಲ್ ಮಾರ್ಶ್ ಆರಂಬಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದು ಡೇವಿಡ್ ವಾರ್ನರ್ ನಾಲ್ಕನೇ ಕ್ರಮಾಂಕದಲ್ಲಿ ಅಡಲಿದ್ದಾರೆ ಎನ್ನಲಾಗಿತ್ತು. ಸ್ವತಃ ಆಸ್ಟ್ರೇಲಿಯಾದ ಮಾಧ್ಯಮಗಳು ಕೂಡ ಈ ವಿಚಾರವಾಗಿ ಸಾಕಷ್ಟು ವರದಿಗಳನ್ನು ಮಾಡಿತ್ತು. ಆದರೆ ಇದನ್ನು ಮಿಚೆಲ್ ಮಾರ್ಶ್ ಅಲ್ಲಗಳೆದಿದ್ದು ತಾನು ಆರಂಭಿಕನಾಗಿ ಕಣಕ್ಕಿಳಿಯುವುದಿಲ್ಲ ಎಂದಿದ್ದಾರೆ.

"ನಾನು ಮಧ್ಯಮಕ್ರಮಾಂಕದಲ್ಲಿ ಆಡುವುದನ್ನು ನಿರೀಕ್ಷಿಸುತ್ತಿದ್ದೇನೆ. ಬದಲಾವಣೆಗಳು ಆಗಬಹುದು, ಆದರೆ ವಾರ್ನರ್ ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ನಮ್ಮಲ್ಲಿ ಡ್ರೆವಿಸ್ ಹೆಡ್ ಹಾಗೂ ಸಾರ್ವಕಾಲಿಕ ಶ್ರೇಷ್ಠ ಮೂರು ಮಾದರಿಯ ಆಟಗಾರ ಇದ್ದಾರೆ. ಹಾಗಾಗಿ ನಾನು ಧೈರ್ಯವಾಗಿ ಹೇಳಬಹುದು ನಾನು ಆರಂಭಿಕನಾಗಿ ಆಡುವುದಿಲ್ಲ ಎಂದು" ಎಂದಿದ್ದಾರೆ ಮಾರ್ಶ್.
ಅಂದಹಾಗೆ ಮಾರ್ರ್ಶ ಆರಂಭಿಕ ಆಟಗಾರನಾಗಿ ಕೇವಲ ಮೂರು ಪಂದ್ಯಗಳನ್ನು ಮಾತ್ರವೇ ಏಕದಿನ ಮಾದರಿಯಲ್ಲಿ ಆಡಿದ್ದಾರೆ. ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಆರಂಇಕ ಆಟಗಾರನಾಗಿ ಕಣಕ್ಕಿಳಿದಿದ್ದ ಮಾರ್ಶ್ ಆ ಸರಣಿಯಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದರು. ಅಲ್ಲದೆ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗುಯೂ ಹೊರಹೊಮ್ಮಿದ್ದರು. ಈ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡಿತ್ತು.
ಆ ಸರಣಿಯಲ್ಲಿ ಮಾರ್ಶ್ 97ರ ಸರಾಸರಿಯಲ್ಲಿ 131.08 ಸ್ಟ್ರೈಕ್-ರೇಟ್‌ನೊಂದಿಗೆ 194 ರನ್ ಗಳಿಸಿದರು. ಕಳೆದೆರಡು ವರ್ಷಗಳಲ್ಲಿ ಮಾರ್ಶ್ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಮಾರ್ಶ್ ಆಸ್ಟ್ರೇಲಿಯಾ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಲು ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು ಈ ಸರಣಿಯಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ.
ದಕ್ಷಿಣ ಆಪ್ರಿಕಾ ವಿರುದ್ಧ ಆಸ್ಟ್ರೆಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದು ಈ ಸರಣಿಯಲ್ಲಿ ಆಸ್ಟ್ರೇಲಿಯಾ ಕೆಲ ಪ್ರಮುಖ ಆಟಗಾರರನ್ನು ಹೊರಗಿಟ್ಟು ಆಡುತ್ತಿದೆ. ವಿಶ್ವಕಪ್‌ಗೆ ಅಭ್ಯಾಸದ ದೃಷ್ಟಿಯಿಂದ ಈ ಸರಣಿ ಎರಡು ತಂಡಗಳಿಗೂ ಅತ್ಯಂತ ಪ್ರಮುಖ ಎನಿಸಿಕೊಂಡಿದೆ.
ದ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಆಸಿಸ್ ತಂಡ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯ್ನಿಸ್, ಶಾನ್ ಅಬಾಟ್, ಆಶ್ಟನ್ ಅಗರ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ