Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Finalನಿಂದ ನ್ಯೂಜಿಲೆಂಡ್ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಹೊರಕ್ಕೆ

Mitchell Santner ruled out of the World Test Championship Final against India

ಲಂಡನ್: ಮುಂಬರಲಿರುವ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಿಂದ ಕಿವೀಸ್ ಬೌಲಿಂಗ್ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಹೊರ ಬಿದ್ದಿದ್ದಾರೆ. ಅಝಾಝ್ ಪಟೇಲ್ ಮತ್ತು ಮಿಚೆಲ್ ನಡುವಿನ ಪೈಪೋಟಿಯಲ್ಲಿ ಟಪೇಲ್ ಗೆದ್ದಿದ್ದಾರೆ. ಹೀಗಾಗಿ ಸ್ಯಾಂಟ್ನರ್‌ಗೆ ತಂಡದಲ್ಲಿ ಅವಕಾಶ ಲಭಿಸಿಲ್ಲ.

ಇಂಗ್ಲೆಂಡ್‌ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಅಝಾಝ್ ಪಟೇಲ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಆ ಪಂದ್ಯದಲ್ಲಿ ಅಝಾಝ್ 2+2 ವಿಕೆಟ್ ಪಡೆದಿದ್ದರು. ಇಂಗ್ಲೆಂಡ್‌ ಟೆಸ್ಟ್‌ ಬಳಿಕ ಡೌಗ್ ಬ್ರೇಸ್ವೆಲ್, ಜಾಕೋಬ್ ಡಫ್ಫಿ, ಡ್ಯಾರಿಲ್ ಮಿಚೆಲ್, ರಾಚಿನ್ ರವೀಂದ್ರ ಅವರನ್ನೂ ನ್ಯೂಜಿಲೆಂಡ್ ಕೂಡ ತಂಡದಿಂದ ಕೈ ಬಿಡಲಾಗಿದೆ.

ಭಾರತ ವಿರುದ್ಧ ವರ್ಲ್ಡ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಮಂಗಳವಾರ (ಜೂನ್ 15) ನ್ಯೂಜಿಲೆಂಡ್‌ 15 ಜನರ ತಂಡ ಪ್ರಕಟಿಸಿದ್ದು ಇದರಲ್ಲಿ ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಡೆವೊನ್ ಕಾನ್ವೇ, ಟಿಮ್ ಸೌಥೀ ಮೊದಲಾದವರು ಕಾಣಿಸಿಕೊಂಡಿದ್ದಾರೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಕಿವೀಸ್ ತಂಡ
ಕೇನ್ ವಿಲಿಯಮ್ಸನ್ (ಸಿ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಡೆವೊನ್ ಕಾನ್ವೇ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್, ವಿಲ್ ಯಂಗ್.

Story first published: Tuesday, June 15, 2021, 10:56 [IST]
Other articles published on Jun 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+