Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

What a Catch: ಸ್ಯಾಂಟ್ನರ್‌ ಹಿಂಬದಿಯಿಂದ ಹಿಡಿದ ಕ್ಯಾಚ್‌ ಸಖತ್‌ ವೈರಲ್

ಕ್ರಿಕೆಟ್‌ ಆಟದಲ್ಲಿ ಬ್ಯಾಟ್ಸಮನ್‌ ಹಾಗೂ ಬೌಲರ್‌ಗಳಿಗೆ ಎಷ್ಟು ಗೌರವ ಶ್ಲಾಘನೆ ಸಿಗುವುದೋ, ಅಷ್ಟೇ ಅಭಿಮಾನಿಗಳ ಪ್ರೀತಿ ಕ್ಷೇತ್ರರಕ್ಷಕರಿಗೂ ಸಿಗುತ್ತದೆ. ಇದಕ್ಕೆ ಬೆಸ್ಟ್‌ ಎಕ್ಸಾಮ್‌ ಪಲ್‌ ಸೂರ್ಯಕುಮಾರ್ ಯಾದವ್. ಅಂದು ವೆಸ್ಟ್‌ ಇಂಡೀಸ್‌ನ ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸ್ಕೈ ಬೌಂಡರಿ ಲೈನ್‌ನಲ್ಲಿ ಅಮೋಘ ಕ್ಯಾಚ್ ಪಡೆದು ಪಂದ್ಯದ ಚಿತ್ರಣವನ್ನೇ ಬುಡಮೇಲು ಮಾಡಿದರು.

ಟಿ20 ವಿಶ್ವಕಪ್‌ ಬಗ್ಗೆ ಯಾವಾಗಲೂ ಮಾತನಾಡಿದರೂ, ಸೂರ್ಯಕುಮಾರ್‌ ಯಾದವ್ ಅವರ ಸೂಪರ್ ಕ್ಯಾಚ್‌ ಬಗ್ಗೆ ಮಾತನಾಡುತ್ತಾರೆ. ನಿಜಕ್ಕೂ ಸ್ಕೈ ಹಿಡಿದ ಕ್ಯಾಚ್‌ ಸೂಪರ್‌. ಹೀಗೆ ಅಭಿಮಾನಿಗಳು ಸೂಪರ್‌ ಕ್ಯಾಚ್‌ಗಳನ್ನು ಸಹ ಆನಂದಿಸುತ್ತಾರೆ. ಈಗ ಸಖತ್‌ ಆಗುತ್ತಿರುವ ವಿಡಿಯೋದಲ್ಲಿ ನ್ಯೂಜಿಲೆಂಡ್‌ ಪ್ಲೇಯರ್‌ ಒಬ್ಬ ಹಿಡಿದ ಕ್ಯಾಚ್ ಸಖತ್ ಸದ್ದು ಮಾಡುತ್ತಿದೆ.

Mitchell Santner s Spectacular Catch Leads Northern Superchargers to Victory in The Hundred

ದಿ ಹಂಡ್ರೆಡ್ ಮೆನ್ಸ್ ಕಾಂಪಿಟೇಷನ್‌ನಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡದ ಪರ ಆಡುತ್ತಿರುವ ಮಿಚೆಲ್ ಸ್ಯಾಂಟ್ನರ್, ಲಂಡನ್ ಸ್ಪಿರಿಟ್ ತಂಡದ ವಿರುದ್ಧದ ಹಿಡಿದ ಕ್ಯಾಚ್‌ ಸಖತ್‌ ವೈರಲ್‌ ಆಗುತ್ತಿದೆ. ಈ ಕ್ಯಾಚ್ ನೋಡಿದ ಅಭಿಮಾನಿಗಳು ತರೆಹಾವಾರಿ ಕಮೆಂಟ್‌ ಮಾಡಿದ್ದರು. ಈ ಪಂದ್ಯದಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡವು ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ 21 ರನ್‌ಗಳಿಂದ ಜಯಗಳಿಸಿತು.

ಕ್ಯಾಚ್‌ ವೈರಲ್

ಹೆಡಿಂಗ್ಲೆಯ ಲೀಡ್ಸ್ ಮೈದಾನದಲ್ಲಿ ನಡೆದ ದಿ ಹಂಡ್ರೆಡ್‌ನ ಕ್ರಿಕೆಟ್‌ ಟೂರ್ನಿಯ ನಾಲ್ಕನೇ ಋತುವಿನ 29 ನೇ ಲೀಗ್ ಪಂದ್ಯದಲ್ಲಿ ಮಿಚೆಲ್‌ ಕಮಾಲ್ ಮಾಡಿದ್ದಾರೆ. ಮೈಕೆಲ್ ಪೆಪ್ಪರ್ ರೀಸ್ ಟೋಪ್ಲಿ ಬೌಲ್ ಮಾಡಿದ ಇನ್ನಿಂಗ್ಸ್‌ನ 11 ನೇ ಎಸೆತವನ್ನು ಮಿಡ್ ಆನ್‌ನಲ್ಲಿ ಹೊಡೆಯಲು ಬಾರಿಸಲು ಬ್ಯಾಟರ್‌ ಮುಂದಾದರು. ಈ ವೇಳೆ ಮಿಚೆಲ್ ಸ್ಯಾಂಟ್ನರ್ ಗಾಳಿಯಲ್ಲಿ ಚೆಂಡನ್ನು ನೋಡಿದ ತಕ್ಷಣ ಹಿಮ್ಮುಖವಾಗಿ ಓಡಲು ಆರಂಭಿಸಿದರು.

ಸ್ಯಾಂಟ್ಸರ್‌ ಚೆಂಡಿನ ಮೇಲಿನ ಕಣ್ಣನ್ನು ತೆಗೆಯಲೇ ಇಲ್ಲ. ಚೆಂಡು ನೆಲಕ್ಕೆ ಸ್ಪಷ್ಟವಾಗುವ ಮುನ್ನವೇ ಸ್ಯಾಂಟ್ನರ್ ಅಮೋಘ ಕ್ಯಾಚ್ ಪಡೆದು ಸಾಧನೆ ಮಾಡಿದರು. ಸ್ಯಾಂಟ್ನರ್‌ ಈ ಕ್ಯಾಚ್ ಪಡೆಯಲು ಗಾಳಿಯಲ್ಲಿ ಜಿಗಿದಿದ್ದರು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Story first published: Wednesday, August 14, 2024, 15:28 [IST]
Other articles published on Aug 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+