ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಎಸೆತ ಹಾಕಿದ ಮಿಚೆಲ್ ಸ್ಟಾರ್ಕ್
ಪರ್ತ್, ನ.15: ವೇಗದ ಬೌಲರ್ ಗಳ ಸ್ವರ್ಗ ಎನಿಸಿರುವ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಆಸೋಸಿಯೇಷನ್ (ವಾಕಾ) ಮೈದಾನದಲ್ಲಿ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರು ಅತ್ಯಂತ ವೇಗದ ಎಸೆತವನ್ನು ಹಾಕಿದ್ದಾರೆ. ಈ ಮೂಲಕ ಪ್ರತಿ ಗಂಟೆಗೆ 160 ಕಿ.ಮೀ ಎಸೆದಿರುವ ವೇಗಿಗಳ ಸಾಲಿಗೆ ಸೇರಿದ್ದಾರೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ 25ವರ್ಷದ ಸ್ಟಾರ್ಕ್ ಅವರು ತಮ್ಮ ವೇಗದ ಬೌಲಿಂಗ್ ಮೂಲಕ ಕಿವೀಸ್ ಬ್ಯಾಟ್ಸ್ ಮನ್ ಗಳನ್ನು ಕಾಡಿದ್ದಾರೆ. ಬ್ರೆಂಡನ್ ಮೆಕಲಮ್ ಹಾಗೂ ರಾಸ್ ಟೇಲರ್ ಅವರು ಸ್ಟಾರ್ಕ್ ವೇಗಕ್ಕೆ ತಲೆಬಾಗಿದ್ದಾರೆ.
ಪಂದ್ಯದ 89ನೇ ಓವರ್ ನಲ್ಲಿ ಎಡಗೈ ವೇಗಿ ಸ್ಟಾರ್ಕ್ ಅವರು 160.4 ಕಿ.ಮೀ/ ಗಂಟೆ ವೇಗದಲ್ಲಿ ಎಸೆದರು. ಇದು ಟೆಸ್ಟ್ ಇತಿಹಾಸದ ಅತ್ಯಂತ ವೇಗದ ಎಸೆತ ಎನ್ನಬಹುದಾಗಿದ. ಈ ಮುಂಚೆ ಆಸ್ಟ್ರೇಲಿಯಾದ ಜೆಫ್ ಥಾಮ್ಸನ್ (160.6 kmph), ಬ್ರೆಟ್ ಲೀ (161.1 kmph), ಶಾನ್ ಟೈಟ್(161.1 kmph), ಪಾಕಿಸ್ತಾನದ ಶೋಯಿಬ್ ಅಕ್ತರ್ (161.3 kmph) ಅವರು 160 kmph ಗಡಿ ದಾಟಿದ್ದರು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 559/9 (133 ಓವರ್ಸ್)
ಡೇವಿಡ್ ವಾರ್ನರ್ 253, ಉಸ್ಮನ್ ಖ್ವಾಜಾ 121.
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 485/5 (120.2 ಓವರ್ಸ್)
ಕೇನ್ ವಿಲಿಯಮ್ಸನ್ 166 ರನ್, ರಾಸ್ ಟೇಲರ್ 222 ಅಜೇಯ

ಅತ್ಯಂತ ವೇಗದ ಎಸೆತ ಹಾಕಿದ ಮಿಚೆಲ್ ಸ್ಟಾರ್ಕ್
ಅತ್ಯಂತ ವೇಗದ ಎಸೆತವನ್ನು ಸಮರ್ಥವಾಗಿ ಎದುರಿಸಿದ ನ್ಯೂಜಿಲೆಂಡ್ ನ ರಾಸ್ ಟೇಲರ್. ಸ್ಟಾರ್ಕ್ ಅವರು ಹಾಕಿದ ಯಾರ್ಕರ್ ಅನ್ನು ಟೇಲರ್ ಎದುರಿಸಿ ವಿಕೆಟ್ ಉಳಿಸಿಕೊಂಡರು.

ಬ್ಯಾಟ್ ಮುರಿದ ಸ್ಟಾರ್ಕ್ ಎಸೆತ
ಬ್ರೆಂಡನ್ ಮೆಕಲಮ್ ಅವರ ಬ್ಯಾಟ್ ಮುರಿದ ಸ್ಟಾರ್ಕ್ ಎಸೆತ. ಅದರೆ, ಬ್ಯಾಟ್ ಮುರಿದ ಎಸೆತ 160 ಕಿ.ಮೀ/ ಗಂಟೆ ಆಗಿರಲಿಲ್ಲ.
ಇದು ಅತ್ಯಂತ ಶ್ರೇಷ್ಠ ಟೆಸ್ಟ್ ಕ್ರಿಕೆಟ್
ಇದು ಅತ್ಯಂತ ಶ್ರೇಷ್ಠ ಟೆಸ್ಟ್ ಕ್ರಿಕೆಟ್, 160.4 kmph ಎಸೆದ ಸ್ಟಾರ್ಕ್ ನಿಜಕ್ಕೂ ಗ್ರೇಟ್ ಎಂದ ಡೇಮಿಯನ್ ಫ್ಲೆಮಿಂಗ್.
ಮಾಜಿ ವೇಗಿ ಬ್ರೆಟ್ ಲೀ ಇಂದ ಟ್ವೀಟ್
ಮಾಜಿ ವೇಗಿ ಬ್ರೆಟ್ ಲೀ ಟ್ವೀಟ್ ಮಾಡಿ ಇದು ಸೂಪರ್ ವೇಗ ಎಂದಿದ್ದಾರೆ.
ಹರ್ಷಲ್ ಗಿಬ್ಸ್ ರಿಂದ ಟ್ವೀಟ್
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ರಿಂದ ಸ್ಟಾರ್ಕ್ ಬಗ್ಗೆ ಟ್ವೀಟ್.
ಶರವೇಗಿ ಬೌಲರ್ ಗಳ ಪಟ್ಟಿ
ಶರವೇಗಿ ಬೌಲರ್ ಗಳ ಪಟ್ಟಿ ಹೀಗಿದೆ:
ಮಿಚೆಲ್ ಸ್ಟಾರ್ಕ್ ಎಸೆತದ ವಿಡಿಯೋ
ಮಿಚೆಲ್ ಸ್ಟಾರ್ಕ್ ಎಸೆತದ ವಿಡಿಯೋ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications