ಟಿ20 ವಿಶ್ವಕಪ್ ಟೂರ್ನಿಯಿಂದ ಆಸ್ಟ್ರೇಲಿಯಾ ಹೊರಗುಳಿಯಲು ಐಸಿಸಿ ಕಾರಣವೇ?; ಮಿಚೆಲ್ ಸ್ಟಾರ್ಕ್ ಹೇಳಿದ್ದೇನು?
ಜುಲೈ 11 ಗುರುವಾರ, 2024ರ ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದಿಂದ ಹೊರಗುಳಿದಿರುವ ಬಗ್ಗೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೂಪರ್-8ರ ಪಂದ್ಯದಲ್ಲಿ ಅಫ್ಘಾನಿಸ್ತಾನ ಎದುರು ಆಸ್ಟ್ರೇಲಿಯಾ ತಂಡವು 21 ರನ್‌ಗಳ ಅನಿರೀಕ್ಷಿತ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನ ಕಾರಣ ಕಾಂಗೂರು ಪಡೆ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ.

ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್ ಬದಲಿಗೆ ಆಶ್ಟನ್ ಅಗರ್ ಅವರನ್ನು ಕಣಕ್ಕಿಳಿಸಿತ್ತು. ಆದರೆ ಅಗರ್ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಇದಾದ ಬಳಿಕ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆದ್ದು ಚಾಂಪಿಯನ್ ಆಗಿದೆ. ಇದೀಗ ಮಿಚೆಲ್ ಸ್ಟಾರ್ಕ್ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲು ಕಾರಣ ತಿಳಿಸಿದ್ದಾರೆ.
ಕೆಲವು ಪಂದ್ಯದಲ್ಲಿ ಸ್ಪಿನ್ನರ್‌ಗಳು ಆ ಮೈದಾನದಲ್ಲಿ ಆಡುತ್ತಿದ್ದರಿಂದ ತಂಡದ ಆಡಳಿತವು ಆಷ್ಟನ್ ಅಗರ್ ಅವರನ್ನು ನಂಬಿತ್ತು. ಆದ್ದರಿಂದ ಆಷ್ಟನ್‌ಗೆ ಅವಕಾಶ ನೀಡಲಾಯಿತು. ಪವರ್ ಪ್ಲೇಯಲ್ಲಿ ಆಶ್ಟನ್ ಉತ್ತಮವಾಗಿ ಬೌಲಿಂಗ್ ಮಾಡಿದರು.
ಆದರೆ ಅಫ್ಘಾನಿಸ್ತಾನವು ಸ್ಪಿನ್ ಬೌಲಿಂಗ್‌ಗೆ ಚೆನ್ನಾಗಿ ಆಡಿತು. ಬಹುಶಃ ಪರಿಸ್ಥಿತಿಯನ್ನು ನಮಗಿಂತ ಉತ್ತಮವಾಗಿ ನಿರ್ಣಯಿಸಿತು. ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ. ಅದರ ಪರಿಣಾಮ ನಾವು ಸೋಲನ್ನು ಅನುಭವಿಸಬೇಕಾಯಿತು ಎಂದು ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲು ಮೊದಲ ಕಾರಣ ಹೇಳಿದ್ದಾರೆ.
ಐಸಿಸಿ ವಿರುದ್ಧ ಸಾರ್ಕ್ ಅಸಮಾಧಾನ
ಐಸಿಸಿ ವಿರುದ್ಧ ಮಿಚೆಲ್ ಸ್ಟಾರ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನೂ ಸಾರ್ಕ್ ಟೀಕಿಸಿದ್ದಾರೆ.
'ನಾವು ಗುಂಪು ಹಂತದಲ್ಲಿ ಇಂಗ್ಲೆಂಡ್‌ಗಿಂತ ಮುಂದಿದ್ದೆವು. ಇದ್ದಕ್ಕಿದ್ದಂತೆ ಬೇರೆ ಗುಂಪಿಗೆ ಬಂದೆವು. ನಾವು ಹಗಲು ಮತ್ತು ರಾತ್ರಿ ಎರಡು ಪಂದ್ಯಗಳನ್ನು ಪಡೆದುಕೊಂಡಿದ್ದವು. ಹೀಗಾಗಿ ಮೂರನೇ ಪಂದ್ಯವು ಹಗಲಿನದ್ದಾಗಿತ್ತು.
ನಮಗೆ ಉತ್ತಮ ತಯಾರಿ ಸಾಧ್ಯವಾಗಲಿಲ್ಲ. ನಮ್ಮ ವಿಮಾನ ತಡವಾದುದ್ದರಿಂದ ಒಂದೂವರೆ ಗಂಟೆ ದೂರದಲ್ಲಿರುವ ಹೋಟೆಲ್‌ಗೆ ಬೇಗ ತಲುಪಲು ಸಾಧ್ಯವಾಗಲಿಲ್ಲ ಎಂದು ಐಸಿಸಿ ವಿರುದ್ಧ ಸಾರ್ಕ್ ಬೇಸರ ಹೊರಹಾಕಿದ್ದಾರೆ.
ಕಾಂಗೂರು ಪಡೆಯ ಕನಸು ಭಗ್ನ
2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾವನ್ನು 21 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ 2023ರ ಏಕದಿನ ವಿಶ್ವಕಪ್ ಸೋಲಿನ ಸೇಡ ಅನ್ನು ಅಫ್ಘಾನಿಸ್ತಾನ ತೀರಿಸಿಕೊಂಡಿತ್ತು.
ಅಫ್ಘಾನಿಸ್ತಾನ ನಂತರ ಭಾರತದ ವಿರುದ್ಧ ಸೋತ ಆಸ್ಟ್ರೇಲಿಯಾ 2024ರ ಟಿ20 ವಿಶ್ವಕಪ್‌ನಿಂದ ಹೊರಗುಳಿದಿತ್ತು. ಈ ಮೂಲಕ ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ ಸ್ಥಾನ ಕಳೆದುಕೊಂಡಿತ್ತು. ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವ ನೋವು ಇನ್ನೂ ಆಸ್ಟ್ರೇಲಿಯಾ ಆಟಗಾರರನ್ನು ಕಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications