ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಐಪಿಎಲ್ 2025 ರ 48ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಿತು. ಉಭಯ ತಂಡಗಳ ನಡುವಿನ ಪಂದ್ಯ ರೋಚಕವಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್‌ನ 20ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಮಿಂಚಿದರು. ಈ ಮೂಲಕ ಕೋಲ್ಕತ್ತಾ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಪರಿಣಾಮ ಕೋಲ್ಕತ್ತಾ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 18ನೇ ಓವರ್‍ನಲ್ಲಿ 177 ರನ್‌ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಇನ್ನಿಂಗ್ಸ್ ಅನ್ನು ಚೆನ್ನಾಗು ಮುಗಿಸುವ ಜವಾಬ್ದಾರಿ ಆಂಡ್ರೆ ರಸೆಲ್ ಮತ್ತು ರೋವ್‌ಮನ್ ಪೊವೆಲ್ ಅವರ ಮೇಲಿತ್ತು. ಆದರೆ, ಈ ನಿರೀಕ್ಷೆಯನ್ನು ರಸೆಲ್ ಮತ್ತು ಪೊವೆಲ್ ಉಳಿಸಿಕೊಳ್ಳಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ 20ನೇ ಓವರ್ ಅನ್ನು ಮಿಚೆಲ್ ಸ್ಟಾರ್ಕ್ ಮಾಡಿದರು. ಈ ಓವರ್‍ನಲ್ಲಿ ಕೋಲ್ಕತ್ತಾ ತಂಡದ ಎಲ್ಲಾ ಲೆಕ್ಕಚಾರ ಉಲ್ಟಾ ಆಯಿತು. ಈ ಓವರ್‌ನಲ್ಲಿ ನಾಲ್ಕು ರಿವ್ಯೂಗಳನ್ನು ತೆಗೆದುಕೊಳ್ಳಲಾಯಿತು. ಎರಡು ವೈಡ್ ಬಾಲ್‌ಗಳಿಗೆ ಮತ್ತು ಎರಡು ವಿಕೆಟ್‌ಗಳಿಗೆ. ಈ ಓವರ್‌ನ ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಮೂವರು ಬ್ಯಾಟರ್ಸ್ ಸತತವಾಗಿ ಔಟಾದರು. ಆದರೆ ಸ್ಟಾರ್ಕ್ ಹ್ಯಾಟ್ರಿಕ್ ವಿಕೆಟ್ ಗಳಿಸಿ ಸಾಧ್ಯವಾಗಲಿಲ್ಲ.
ಮಿಚೆಲ್ ಸ್ಟಾರ್ಕ್ ಏಕಾಂಗಿಯಾಗಿ ರಸೆಲ್ ಮತ್ತು ಅನುಕುಲ್ ರಾಯ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರೆ, ವಿಕೆಟ್‌ಕೀಪರ್ ಅಭಿಷೇಕ್ ಪೊರೆಲ್ ಅವರು ರಸೆಲ್ ಅವರನ್ನು ರನೌಟ್ ಮಾಡಿದರು. ಪೊವೆಲ್ 5 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರೆ, ರಸೆಲ್ 9 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಸೋಲನ್ನು ಅನುಭವಿಸಿದೆ. ಮಂಗಳವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 14 ರನ್‌ಗಳಿಂದ ಸೋಲುಂಡಿತು. ಈ ಸೋಲು ಡೆಲ್ಲಿ ತಂಡದ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಆಸೆಯನ್ನು ಭಗ್ನಗೊಳಿಸಬಹುದು. ಐಪಿಎಲ್ ಈಗ ಅಂತಿಮ ಸುತ್ತಿನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರ, ಕೋಲ್ಕತ್ತಾ ವಿರುದ್ಧದ ಸೋಲು ಕೂಡ ತಂಡಕ್ಕೆ ದುಬಾರಿಯಾಗಿ ಪರಿಣಮಿಸಬಹುದು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿ ಶಕ್ತವಾಯಿತು.