Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Turning Point: ಎಲ್‌ಎಸ್‌ಜಿ ದೊಡ್ಡ ಮೊತ್ತದ ಕನಸಿಗೆ ಪೆಟ್ಟು ನೀಡಿದ್ದೇ ಟರ್ನಿಂಗ್ ಪಾಯಿಂಟ್

ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಬಿಗ್ ಫೈಟ್ ನಡೆಯಿತು. ಈ ಪಂದ್ಯದಲ್ಲಿ ಸದ್ಯ ಡೆಲ್ಲಿ ಪರ ಕಣಕ್ಕೆ ಇಳಿದಿದ್ದ ಕೆಎಲ್ ರಾಹುಲ್ ಕಳೆದ ಆವೃತ್ತಿಯಲ್ಲಿ ಎಲ್‌ಎಸ್‌ಜಿ ನಾಯಕರಾಗಿದ್ದರು. ಆದರೆ ಈಗ ಡೆಲ್ಲಿ ಬ್ಯಾಟಿಂಗ್ ವಿಭಾಗದ ಬೆನ್ನೆಲೆಬು. ಇನ್ನು ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಿದ್ದ ರಿಷಭ್ ಪಂತ್ ಈಗ ಎಲ್‌ಎಸ್‌ಜಿ ನಾಯಕರಾಗಿದ್ದಾರೆ. ಹೀಗಾಗಿ ಈ ಇಬ್ಬರ ನಡುವಿನ ಹೋರಾಟ ಎಲ್ಲರ ಚಿತ್ತ ಕದ್ದಿತ್ತು. ಆದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಭರ್ಜರಿ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಎಲ್‌ಎಸ್‌ಜಿ ಭರ್ಜರಿ ಆರಂಭವನ್ನು ಪಡೆಯಿತು. ಈ ವೇಳೆ ಎಲ್‌ಎಸ್‌ಜಿ ತಂಡದ ಸ್ಟಾರ್ ಆಟಗಾರರಾದ ಮಿಚೆಲ್‌ ಮಾರ್ಷ್ ಹಾಗೂ ಐಡೇನ್‌ ಮಾರ್ಕ್ರಾಮ್‌ (52 ರನ್‌) 87 ರನ್‌ಗಳ ಜೊತೆಯಾಟವನ್ನು ನೀಡಿತು. ಆದರೆ ಈ ವೇಳೆ ಎಲ್‌ಎಸ್‌ಜಿ ತಂಡ ಬಿಗ್‌ ಸ್ಕೋರ್‌ನತ್ತ ಚಿತ್ತ ನೆಟ್ಟಿತ್ತು. ಆದರೆ ಆ ಕನಸಿಗೆ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ವಿಫಲರಾದರು. ಹಾಗಿದ್ದರೆ ಈ ಪಂದ್ಯವನ್ನು ಡೆಲ್ಲಿ ತನ್ನ ಕಡೆ ಮಾಡಿಕೊಂಡಿದ್ದು ಯಾವಾಗ?

Mitchell Starc s Game-Changing Spell Shatters LSG Big Score Dream Against DC

ನಿಶ್ಚಿತವಾಗಿ ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಹಲವು ನ್ಯೂನತೆಗಳನ್ನು ಕಾಡುತ್ತವೆ. ಗುರಿಯನ್ನು ಬೆನ್ನಟ್ಟಿದಾಗ ಡೆಲ್ಲಿ ಕ್ಯಾಪಿಟಲ್ಸ್ ಪರ ಅಭಿಷೇಕ್ ಪೋರೆಲ್‌ ಹಾಗೂ ಕೆಎಲ್ ರಾಹುಲ್ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಬ್ಯಾಟರ್‌ಗಳಿಗೆ ಎಲ್‌ಎಸ್‌ಜಿ ಬೌಲರ್‌ಗಳು ಕಟ್ಟಿ ಹಾಕುವಲ್ಲಿ ವಿಫಲವಾಗಿದ್ದು ಸಹ ಟರ್ನಿಂಗ್‌ ಪಾಯಿಂಟ್‌ಗಳಲ್ಲಿ ಒಂದು ಎಂದು ಹೇಳಬಹುದು.

ಒಂದೇ ಓವರ್‌ನಲ್ಲಿ ಡಬಲ್‌ ವಿಕೆಟ್‌

ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್ ಮಾಡುವಾಗ ಮುಕೇಶ್‌ ಕುಮಾರ್‌ ಒಂದೇ ಓವರ್‌ನಲ್ಲಿ ಅಬ್ದುಲ್‌ ಸಮದ್‌ ಹಾಗೂ ಮಿಚೆಲ್‌ ಮಾರ್ಷ್‌ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ್ದು ಸಹ ಪಂದ್ಯದ ತಿರುವುಗಳಲ್ಲಿ ಒಂದಾಗಿತ್ತು. ಆದರೆ ಎಲ್‌ಎಸ್‌ಜಿ ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡಿದ್ದು ಸ್ಟಾರ್ಕ್‌.

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆಲ್ಲುತ್ತಿದ್ದ ಸರಿಯಾದ ಪ್ಲ್ಯಾನ್ ಮಾಡಿಕೊಂಡೆ ಬಂದಿತ್ತು. ವೇಗಿ ಮಿಚೆಲ್‌ ಸ್ಟಾರ್ಕ್‌ ಅವರಿಗೆ ಪವರ್‌ ಪ್ಲೇನಲ್ಲಿ ಒಂದೇ ಓವರ್‌ ನೀಡಿತ್ತು. ಅಲ್ಲದೆ ಇವರ ಬೌಲಿಂಗ್‌ನ್ನು ನಿಕೋಲಸ್ ಪೂರನ್‌ ಅವರು ಬಂದಾಗ ಬಳಸಬಹುದು ಎಂದು ಕಾಯ್ದುಕೊಂಡು ಇಟ್ಟುಕೊಂಡಿತ್ತು. 10ನೇ ಓವರ್‌ನ ಕೊನೆಯ ಎಸೆತದಲ್ಲಿ ಮಾರ್ಕ್ರಾಮ್‌ ಔಟ್ ಆಗುತ್ತಿದ್ದಂತೆ, ಪೂರನ್‌ ಕ್ರೀಸ್‌ಗೆ ಇಳಿದರು. ಇವರು ಬರುತ್ತಾ ಇದ್ದಂತೆ ಚೈನಾ ಮೆನ್‌ ಬೌಲರ್ ಕುಲ್‌ದೀಪ್ ಯಾದವ್ ಬೌಲ್ ಮಾಡಲು ಬಂದು ಕಾಟ ನೀಡಿದರು. ಇವರ ಸ್ಪೇಲ್‌ ಮುಗಿತಾ ಇದ್ದಂತೆ ಅಕ್ಷರ್‌ ಚೆಂಡನ್ನು ಮಿಚೆಲ್ ಸ್ಟಾರ್ಕ್‌ಗೆ ನೀಡಿದರು.

ಇದೇ ಟರ್ನಿಂಗ್ ಪಾಯಿಂಟ್

ಸ್ಟಾರ್ಕ್‌ ಬೌಲಿಂಗ್‌ಗೆ ಬರ್ತಾ ಇದ್ದಂತೆ ಪ್ಲ್ಯಾನಿಂಗ್ ತಲೆಯಲ್ಲಿ ನಡೆಯುತ್ತಲೇ ಇತ್ತು. 12ನೇ ಓವರ್‌ನ ಎರಡನೇ ಎಸೆತದಲ್ಲಿ ಸ್ಲೋವರ್‌ ಶಾರ್ಟ್ ಬೌಲ್‌ ಹಾಕಿ ಸ್ಟಾರ್ಕ್ ಪೂರನ್‌ಗೆ ಬೋಲ್ಡ್ ಮಾಡಿದರು. ಐಪಿಎಲ್‌ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇವರು ಔಟ್ ಆಗುತ್ತಾ ಇದ್ದಂತೆ ಎಲ್‌ಎಸ್‌ಜಿ ದೊಡ್ಡ ಮೊತ್ತದ ಕನಸಿಗೆ ಪೆಟ್ಟು ಬಿದ್ದಿತು.

Story first published: Tuesday, April 22, 2025, 23:44 [IST]
Other articles published on Apr 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+