For Quick Alerts
ALLOW NOTIFICATIONS  
For Daily Alerts
 

ಮಿಚೆಲ್ ಸ್ಟಾರ್ಕ್ ಪತ್ನಿ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ

ಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಡಿಸೆಂಬರ್-ಜನವರಿಯಲ್ಲಿ ಭಾರತ ಪ್ರವಾಸ ಬೆಳೆಸಲಿವೆ. ಅಲ್ಲಿ ಎರಡೂ ತಂಡಗಳ ನಡುವೆ ಎಲ್ಲಾ ಮೂರು ಮಾದರಿಗಳ ಸರಣಿ ನಡೆಯಲಿದೆ. ಈ ಪ್ರವಾಸದ ಮೊದಲು, ಆಸ್ಟ್ರೇಲಿಯಾವು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಅಲಿಸ್ಸಾ ಹೀಲಿಯನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡದ ನಾಯಕಿಯನ್ನಾಗಿ ಆಯ್ಕೆ ಮಾಡಿದೆ. ಇದರ ಹೊರತಾಗಿ ತಹ್ಲಿಯಾ ಮೆಕ್‌ಗ್ರಾತ್‌ಗೆ ಉಪನಾಯಕಿಯ ಜವಾಬ್ದಾರಿಯನ್ನು ನೀಡಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮೆಗ್ ಲ್ಯಾನಿಂಗ್ ವಿದಾಯ ಹೇಳಿದ ನಂತರ ಈ ಬದಲಾವಣೆಗಳು ಕಂಡು ಬಂದಿವೆ.

ಮೆಗ್ ಲ್ಯಾನಿಂಗ್ ಎಲ್ಲಾ ಮೂರು ಸ್ವರೂಪಗಳಲ್ಲಿ ಆಸ್ಟ್ರೇಲಿಯನ್ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು. ಅವರ ಸ್ಥಾನವನ್ನು ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಪತ್ನಿ ಅಲಿಸ್ಸಾ ಹೀಲಿ ತುಂಬಲಿದ್ದಾರೆ. ಹೀಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಪಂದ್ಯವನ್ನು ಭಾರತದ ವಿರುದ್ಧ ಆಡಲಿದೆ.

Mitchell Starc’s Wife Is the Captain of the Australian Women’s Team

ಆಸೀಸ್ ಮಹಿಳಾ ತಂಡ ಭಾರತ ಪ್ರವಾಸವನ್ನು ಮಾಡಲಿದ್ದು, ಡಿಸೆಂಬರ್ 21 ರಿಂದ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಇದಾದ ನಂತರ ಎರಡೂ ತಂಡಗಳು ಡಿಸೆಂಬರ್ 28 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಜನವರಿ 05 ರಿಂದ ಮೂರು ಪಂದ್ಯಗಳ ಟಿ20 ಸರಣಿಯನ್ನು ನಡೆಯಲಿವೆ.

ಹೀಲಿ ಈ ಹಿಂದೆಯೂ ತಂಡದ ನಾಯಕತ್ವ ವಹಿಸಿದ್ದರು. ಅವರು ಹಂಗಾಮಿ ನಾಯಕಿಯಾಗಿ ಇಂಗ್ಲೆಂಡ್, ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ನಾಯಕತ್ವ ವಹಿಸಿದ್ದಾರೆ. ಇದಲ್ಲದೇ ಉಪನಾಯಕಿಯಾಗಿರುವ ತಹ್ಲಿಯಾ ಮೆಕ್‌ಗ್ರಾತ್ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ. ಅಲಿಸ್ಸಾ ಹೀಲಿ ಇಲ್ಲದಿದ್ದಾಗ ಅವರು ಎರಡು ಬಾರಿ ತಂಡದ ನಾಯಕತ್ವ ವಹಿಸಿದ್ದರು.

Mitchell Starc’s Wife Is the Captain of the Australian Women’s Team

ಹೀಲಿ ಅನುಭವಿ ಆಟಗಾರ್ತಿ

ಅಲಿಸ್ಸಾ ಹೀಲಿ ಆಸ್ಟ್ರೇಲಿಯಾದ ಅನುಭವಿ ಆಟಗಾರ್ತಿ. ಅವರು ತಂಡಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಾರೆ. ಹೀಲಿ ಇದುವರೆಗೆ 7 ಟೆಸ್ಟ್, 101 ODI ಮತ್ತು 147 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನ 12 ಇನ್ನಿಂಗ್ಸ್‌ಗಳಲ್ಲಿ 286 ರನ್ ಗಳಿಸಿದ್ದಾರೆ.

ಇದರಲ್ಲಿ 2 ಅರ್ಧ ಶತಕಗಳು ಸೇರಿವೆ. ಇದಲ್ಲದೆ, ಏಕದಿನದಲ್ಲಿ 89 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ, 35.39 ಸರಾಸರಿಯಲ್ಲಿ 2761 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ತಮ್ಮ ಬ್ಯಾಟ್‌ನಿಂದ 5 ಶತಕ ಮತ್ತು 15 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯ 129 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 15 ಅರ್ಧ ಶತಕ ಸೇರಿದಂತೆ 2621 ರನ್‌ಗಳನ್ನು ಗಳಿಸಿದ್ದಾರೆ.

Story first published: Saturday, December 9, 2023, 16:29 [IST]
Other articles published on Dec 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+