For Quick Alerts
ALLOW NOTIFICATIONS  
For Daily Alerts
 

Mitchell Starc: ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಹೀರೋ ಸ್ಟಾರ್ಕ್: ಡೆತ್‌ ಓವರ್‌ ಕಿಂಗ್

ಅಸಾಧ್ಯ ಎನ್ನುವುದು ಯರಾದಾದ್ರೂ ಡಿಕ್ಷನರಿಯಲ್ಲಿ ಇದೆಯಪ್ಪಾ ಅಂದ್ರೆ, ಆ ಸಾಲಿನಲ್ಲಿ ನಿಲ್ಲುವ ಆಟಗಾರ ಮಿಚೆಲ್ ಸ್ಟಾರ್ಕ್. ಈ ಹೆಸರು ಕಿವಿಯ ಮೇಲೆ ಬಿದ್ದರೆ ಸಾಕು ಇವರು ಮಾಡುವ ಬಿಗುವಿನ ದಾಳಿ ಕಣ್ಣ ಮುಂದೆ ಬಂದು ಹೋಗುತ್ತದೆ. ಎಂತಹದ್ದೇ ಪರಿಸ್ಥಿತಿ ಇರಲಿ, ಯಾರೇ ಎದುರಾಳಿ ಇರಲಿ, ಮಿಚೆಲ್‌ ಕೈಯಲ್ಲಿ ನಾಯಕ ಚೆಂಡನ್ನು ನೀಡಿದರೆಂದರೆ ಅದರ ಅರ್ಥ ಗೆಲುವು. ಬೌಲಿಂಗ್ ಮಷೀನ್‌ ರೀತಿ ಸತತ ಯಾರ್ಕರ್‌ಗಳನ್ನು ಪ್ರಯೋಗಿಸುವ ಮಿಚೆಲ್ ಸ್ಟಾರ್ಕ್ ಐಪಿಎಲ್‌ನಲ್ಲಿ ಮಿಂಚು ಹರಿಸಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 188 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಉತ್ತಮವಾಗಿ ಬೌಲಿಂಗ್ ನಡೆಸಿತು. ಆದರೆ ಕೊನೆಯ ಓವರ್‌ನಲ್ಲಿ 9 ರನ್‌ ಬಾರಿಸುವಲ್ಲಿ ವಿಫಲವಾಯಿತು. ಮಿಚೆಲ್ ಸ್ಟಾರ್ಕ್ ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದು ಬೌಲ್ ಮಾಡಿ ಅಬ್ಬರಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಮಗೆ ನೀಡಿದ್ದ ಹಣ ಸರಿಯಾಗಿದೆ ಎಂಬುದನ್ನು ಸಾಬೀತು ಮಾಡಿದರು.

Mitchell Starc Shines as Delhi Capitals Wins Thriller Against Rajasthan Royals

ಮಿಚೆಲ್ ಸ್ಟಾರ್ಕ್‌ ಡೆತ್‌ ಓವರ್‌ಗಳಲ್ಲಿ ಏನೆನಲ್ಲಾ ಮಾಡಬಹುದಿತ್ತು. ಆದರೆ ಅವರು ಅದನೆನ್ನು ಮಾಡಲಿಲ್ಲ. ಅವರಿಗೆ ಯಾವುದರ ಮೇಲೆ ಅಪಾರ ನಂಬಿಕೆ ಇದೆಯೋ ಅದನ್ನೆ ಪದೇ ಪದೇ ಮಾಡಿದರು. ಅಂದರೆ ಡೆತ್ ಓವರ್‌ಗಳಲ್ಲಿ ಪರ್ಫೆಕ್ಟ್‌ ಯಾರ್ಕರ್‌ಗಳನ್ನು ಹಾಕಿ ರಾಜಸ್ಥಾನ ಬ್ಯಾಟರ್‌ಗಳನ್ನು ಕಾಡಿದರು. ಮೊದಲೆರಡು ಎಸೆತಗಳಲ್ಲಿ ಸಿಂಗಲ್‌ ನೀಡಿದ್ದ ಸ್ಟಾರ್ಕ್‌, ಮೂರನೇ ಎಸೆತದಲ್ಲಿ ಎರಡು ರನ್ ನೀಡಿದರು. ನಾಲ್ಕನೇ ಎಸೆತದಲ್ಲೂ ಎರಡು ರನ್‌ ನೀಡಿದರು. ಐದನೇ ಹಾಗೂ ಆರನೇ ಎಸೆತದಲ್ಲಿ ಒಂದೊಂದು ರನ್‌ ನೀಡಿ ಅಬ್ಬರಿಸಿದರು. ಪಂದ್ಯ ಕೈಯಿಂದ ಜಾರಿಯೇ ಬಿಟ್ಟಿತು ಎಂದಾಗ ಸ್ಟಾರ್ಕ್‌ ಹೊಸ ಹುರುಪು ತುಂಬಿದರು.

ಸೂಪರ್ ಮ್ಯಾನ್‌

ಕೊನೆಯ ಓವರ್‌ನಲ್ಲಿ ಎಂಟು ರನ್‌ ನೀಡಿದ್ದರಿಂದ ಪಂದ್ಯ ಟೈ ಆಯಿತು. ಮತ್ತೆ ರಾಜಸ್ಥಾನ ಬ್ಯಾಟಿಂಗ್ ಬಂದಿತು. ಮತ್ತೆ ಸ್ಟಾರ್ಕ್ ಬೇರೆ ಏನನ್ನು ಮಾಡಲೇ ಇಲ್ಲ. ಕಾಪಿ ಪೇಸ್ಟ್‌ ರೀತಿ ಎಸೆತಗಳನ್ನು ಎಸೆದರು. ಈ ವೇಳೆ ರಾಜಸ್ಥಾನ ತಂಡವನ್ನು ಹನ್ನೊಂದು ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಇವರ ಪಾತ್ರ ದೊಡ್ಡದು.

ಮಿಚೆಲ್‌ ಸ್ಟಾರ್ಕ್‌ ನಾಲ್ಕು ಓವರ್‌ಗಳಲ್ಲಿ 36 ರನ್‌ ನೀಡಿ 1 ವಿಕೆಟ್‌ ಕಬಳಿಸಿದರು. ಆದರೆ ಇವರು ಮಾಡಿದ ಕೊನೆಯ ಓವರ್‌ ಸೂಪರ್ ಆಗಿತ್ತು. ಇವರ ಬೌಲಿಂಗ್ ಫಿಗರ್ ನೋಡಿ ನೀವು ಇವರು ದುಬಾರಿ ಆಗಿದ್ದಾರೆ ಎಂಬ ನಿರ್ಣಯಕ್ಕೆ ಬಂದ್ರೆ ಅದು ತಪ್ಪು. ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಬೌಲ್ ಮಾಡಿರುವ ಮಿಚೆಲ್ ನಿಜಕ್ಕೂ ರಿಯಲ್‌ ಹೀರೋ. ಇವರ ಬಿಗುವಿನ ದಾಳಿಗೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು.

Story first published: Thursday, April 17, 2025, 6:05 [IST]
Other articles published on Apr 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+