For Quick Alerts
ALLOW NOTIFICATIONS  
For Daily Alerts
 

Mitchell Starc: ಸ್ಟಾರ್ಕ್‌ಗೆ ಐಸಿಸಿ ಪ್ರತಿಷ್ಠಿತ ಗರಿ

ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರಿಗೆ ಐಸಿಸಿ ದೊಡ್ಡ ಪ್ರಶಸ್ತಿ ನೀಡಿದೆ. ಐಸಿಸಿ ಡಿಸೆಂಬರ್‌ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆಷಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟಾರ್ಕ್ ಅವರ ಅದ್ಭೂತ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಹೀಗಾಗಿ ಇವರಿಗೆ ಡಿಸೆಂಬರ್ ತಿಂಗಳು ಆಟಗಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಡಿಸೆಂಬರ್ ಐಸಿಸಿ ತಿಂಗಳು ಆಟಗಾರರ ಪ್ರಶಸ್ತಿಗೆ ಮಿಚೆಲ್ ಸ್ಟಾರ್ಕ್‌ ಜೊತೆಗೆ ನ್ಯೂಜಿಲೆಂಡ್‌ನ ಜಾಕೋಬ್ ಡಫಿ ಮತ್ತು ವೆಸ್ಟ್ ಇಂಡೀಸ್‌ನ ಜಸ್ಟಿನ್ ಗ್ರೀವ್ಸ್ ಅವರನ್ನು ಸಹ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಆದರೆ ಮಿಚೆಲ್‌ ಸ್ಟಾರ್ಕ್‌ ಅವರ ಸ್ಥಿರ ಪ್ರದರ್ಶನದ ಫಲವಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

Mitchell Starc Wins ICC Player of the Month for December 2025 After Dominant Ashes Performance

ಸ್ಟಾರ್ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ನಲ್ಲಿ ಭರ್ಜರಿ ದಾಳಿ ನಡೆಸಿ ಗೆಲುವಿನಲ್ಲಿ ಮಿಂಚಿದ್ದರು. 5 ಪಂದ್ಯ ಆಷಸ್‌ ಸರಣಿಯನ್ನು 4-1 ರಿಂದ ಗೆದ್ದು ಬೀಗಿತ್ತು. ಆಸೀಸ್‌ ಭರ್ಜರಿ ಪ್ರದರ್ಶನ ನೀಡುವಲ್ಲಿ ಮಿಚೆಲ್‌ ಸ್ಟಾರ್ಕ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು ಡಿಸೆಂಬರ್‌ನಲ್ಲಿ ಪರ್ತ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ 10 ವಿಕೆಟ್‌ ಪಡೆದಿದ್ದರು. ಈ ಪಂದ್ಯವನ್ನು ಸಹ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಬ್ರಿಸ್ಬೇನ್‌ನಲ್ಲಿ ನಡೆದ 5ನೇ ಪಂದ್ಯದಲ್ಲೂ ಬಿಗುವಿನ ದಾಳಿ ನಡೆಸಿ ಎಂಟು ವಿಕೆಟ್‌ಗಳನ್ನು ಕಬಳಿಸಿದರು. ಒಟ್ಟಾರೆಯಾಗಿ, ಡಿಸೆಂಬರ್‌ನಲ್ಲಿ ಸ್ಟಾರ್ಕ್ 16 ವಿಕೆಟ್‌ಗಳನ್ನು ಕಬಳಿಸಿದರು.

ಐಸಿಸಿ ಈ ಪ್ರಶಸ್ತಿಯನ್ನು ಬಹಳ ಸಮಯದಿಂದ ನೀಡುತ್ತಾ ಇದರೂ, ಮಿಚೆಲ್ ಸ್ಟಾರ್ಕ್‌ ಒಮ್ಮೆಯೂ ಗೆದ್ದಿರಲಿಲ್ಲ. ಈಗ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದ ಬಳಿಕ ಸ್ಟಾರ್ಕ್‌, ಪ್ರಶಸ್ತಿ ಖುಷಿ ನೀಡಿದೆ ಎಂದು ತಿಳಿಸಿದ್ದಾರೆ. ಇವರಿಗೂ ಮೊದಲು 2023ರ ಡಿಸೆಂಬರ್‌ನಲ್ಲಿ ಪ್ಯಾಟ್ ಕಮಿನ್ಸ್‌ ಈ ಪ್ರಶಸ್ತಿಯನ್ನು ಪಡೆದಿದ್ದರು. 2 ವರ್ಷಗಳ ಬಳಿಕ ಆಸ್ಟ್ರೇಲಿಯಾ ಮತ್ತೊಬ್ಬ ಆಟಗಾರ ಈ ಪ್ರಶಸ್ತಿ ಪಡೆದಿದ್ದಾನೆ. ಎಲ್ಲರ ಕಣ್ಣುಗಳು ಮಿಚೆಲ್ ಸ್ಟಾರ್ಕ್ ಅವರ ಭವಿಷ್ಯದ ಪ್ರದರ್ಶನದ ಮೇಲೆ ಇರುತ್ತವೆ.

ಮಿಚೆಲ್‌ ಸ್ಟಾರ್ಕ್‌ ಸಾಧನೆ

35 ವರ್ಷದ ಮಿಚೆಲ್ ಸ್ಟಾರ್ಕ್‌ ಒಟ್ಟಾರೆ ಆಸ್ಟ್ರೇಲಿಯಾ ಪರ 105 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 433 ವಿಕೆಟ್‌ ಕಬಳಿಸಿದ್ದಾರೆ. ಇನ್ನು 130 ಏಕದಿನ ಪಂದ್ಯಗಳಲ್ಲಿ ಇವರು 247 ವಿಕೆಟ್‌ ಪಡೆದು ಬೀಗಿದ್ದಾರೆ. ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನು ಆಡಿರುವ ಸ್ಟಾರ್ಕ್‌ 65 ಪಂದ್ಯಗಳಲ್ಲಿ 79 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

Story first published: Thursday, January 15, 2026, 18:18 [IST]
Other articles published on Jan 15, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+