Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mitchell Starc: ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದ ಮಿಚೆಲ್ ಸ್ಟಾರ್ಕ್

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆರಂಭಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿದೆ. ಎಲ್ಲಾ ತಂಡಗಳು ಸಿದ್ಧತೆಗಳಲ್ಲಿ ನಿರತವಾಗಿವೆ. ಆದರೆ ನಂಬರ್-1 ತಂಡ ಆಸ್ಟ್ರೇಲಿಯಾದ ಸ್ಥಿತಿ ಕೆಟ್ಟದಾಗಿದೆ. ಕಳೆದ ಒಂದು ತಿಂಗಳಿನಿಂದ, ಚಾಂಪಿಯನ್ಸ್ ಟ್ರೋಫಿ ತಂಡದಿಂದ ಒಬ್ಬರು ಅಥವಾ ಇಬ್ಬರು ಮಾತ್ರವಲ್ಲ, ಆರು ಆಟಗಾರರನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ. ಇಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ, ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ ಈ ಮೆಗಾ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಸ್ಟಾರ್ ಅನುಭವಿ ಆಟಗಾರರನ್ನು ಹೊರಗಿಟ್ಟಿರುವುದರಿಂದ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಗೊಂದಲವಿದೆ. ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್‌ರಂತಹ ಅನುಭವಿ ಆಟಗಾರರು ಗಾಯದ ಕಾರಣದಿಂದಾಗಿ ಹೊರಗುಳಿದರೆ, ಮಾರ್ಕಸ್ ಸ್ಟೊಯಿನಿಸ್ 2025ರ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಹಠಾತ್ತನೆ ನಿವೃತ್ತಿ ಘೋಷಿಸಿದ್ದಾರೆ. ಈಗ ಮಿಚೆಲ್ ಸ್ಟಾರ್ಕ್ ವೈಯಕ್ತಿಕ ಕಾರಣಗಳಿಂದ ಮೆಗಾ ಟೂರ್ನಿಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

Mitchell Starc withdraws from ICC 2025 Champions Trophy

ಮಿಚೆಲ್ ಸ್ಟಾರ್ಕ್ ಹೊರಗುಳಿದಿರುವ ಬಗ್ಗೆ ಮಾಹಿತಿ ನೀಡಿದ ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ, 'ನಾವು ಮಿಚ್ ಅವರ ನಿರ್ಧಾರವನ್ನು ಅರ್ಥಮಾಡಿಕೊಂಡಿದ್ದು, ಗೌರವಿಸುತ್ತೇವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅವರ ಬದ್ಧತೆ ಮತ್ತು ಆಸ್ಟ್ರೇಲಿಯಾ ಪರ ಪ್ರದರ್ಶನ ನೀಡಲು ಆದ್ಯತೆ ನೀಡುವುದಕ್ಕಾಗಿ ಸ್ಟಾರ್ಕ್ ಅವರನ್ನು ಹೆಚ್ಚು ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸ್ಮಿತ್‌ಗೆ ನಾಯಕತ್ವ

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅನುಭವಿ ಆಟಗಾರರ ಅನುಪಸ್ಥಿತಿಯಿಂದಾಗಿ, ಆಸ್ಟ್ರೇಲಿಯಾ ತಂಡದಲ್ಲಿ ಹಲವು ಬದಲಾವಣೆಗಳು ಕಂಡುಬಂದಿವೆ. ಮಾರ್ಷ್ ಮತ್ತು ಕಮ್ಮಿನ್ಸ್ ಬದಲಿಗೆ ಸ್ಮಿತ್ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆಯಿದ್ದು, ಇದು ಆಸ್ಟ್ರೇಲಿಯಾಕ್ಕೆ ಹೊಡೆತ ಎನ್ನಬಹುದು.

ಕಮ್ಮಿನ್ಸ್, ಹ್ಯಾಜಲ್‌ವುಡ್ ಮತ್ತು ಸ್ಟಾರ್ಕ್ ತ್ರಿವಳಿ ವೇಗಿಗಳು ಒಟ್ಟಾಗಿ ಆಸ್ಟ್ರೇಲಿಯಾ ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವುಗಳನ್ನು ತಂದು ಕೊಟ್ಟಿದ್ದಾರೆ. ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಯಲ್ಲಿ, ಆಸ್ಟ್ರೇಲಿಯಾ ಫೆಬ್ರವರಿ 22 ರಂದು ಇಂಗ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಆಸ್ಟ್ರೇಲಿಯಾ ತಂಡ

ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಬೆನ್ ದ್ವಾರಶಿಸ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಥ್ಯೂ ಶಾರ್ಟ್, ಆಡಮ್ ಜಂಪಾ.

ಆಸ್ಟ್ರೇಲಿಯಾ ವೇಳಾಪಟ್ಟಿ

ಫೆಬ್ರವರಿ 22: ಆಸ್ಟ್ರೇಲಿಯಾ v ಇಂಗ್ಲೆಂಡ್, ಲಾಹೋರ್
ಫೆಬ್ರವರಿ 25: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ
ಫೆಬ್ರವರಿ 28: ಅಫ್ಘಾನಿಸ್ತಾನ v ಆಸ್ಟ್ರೇಲಿಯಾ, ಲಾಹೋರ್
ಮಾರ್ಚ್ 4: ಸೆಮಿಫೈನಲ್ 1, ದುಬೈ (ಆಸ್ಟ್ರೇಲಿಯಾ ಮುನ್ನಡೆದರೆ)
ಮಾರ್ಚ್ 5: ಸೆಮಿಫೈನಲ್ 2, ಲಾಹೋರ್
ಮಾರ್ಚ್ 9: ಫೈನಲ್, ಲಾಹೋರ್ ಅಥವಾ ದುಬೈ

Story first published: Wednesday, February 12, 2025, 11:12 [IST]
Other articles published on Feb 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+