Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

200ನೇ ಏಕದಿನ ಕ್ರಿಕೆಟ್ ಆಡಿದ ವಿಶ್ವದ ಮೊದಲ ಮಹಿಳೆ ಮಿಥಾಲಿ ರಾಜ್!

Mithali Raj becomes first female cricketer to play 200 ODIs

ಹ್ಯಾಮಿಲ್ಟನ್, ಫೆಬ್ರವರಿ 1: ಗುರುವಾರವಷ್ಟೇ (ಜನವರಿ 31) ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು 200ನೇ ಏಕದಿನ ಪಂದ್ಯಗಳ ಸಾಧನೆ ಮಾಡಿದ್ದರು. ಶುಕ್ರವಾರ (ಫೆಬ್ರವರಿ 1) ಭಾರತದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಕೂಡ ಇದೇ ಸಾಧನೆ ಮೆರೆದಿದ್ದಾರೆ.

ಆದರೆ ಮಿಥಾಲಿ ರಾಜ್ 200ನೇ ಏಕದಿನ ಪಂದ್ಯ ಕೊಂಚ ವಿಶೇಷತೆಯಿಂದ ಕೂಡಿದೆ. ಶುಕ್ರವಾರ ಸೆಡ್ಡನ್ ಪಾರ್ಕ್‌ನ ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಜಿಲ್ಯಾಂಡ್-ಭಾರತ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ನಾಯಕಿ ಮಿಥಾಲಿ, 200ನೇ ಏಕದಿನ ಪಂದ್ಯವನ್ನಾಡಿದರು.

ಮಿಥಾಲಿ ಈ ಸಾಧನೆಗಾಗಿ 200ನೇ ಏಕದಿನ ಪಂದ್ಯಗಳನ್ನು ಪೂರೈಸಿದ ಭಾರತದ ಮೊದಲ ಕ್ರಿಕೆಟಿಗೆ ಸಾಧನೆಯಲ್ಲದೆ ವಿಶ್ವದ ಮೊದಲ ಕ್ರಿಕೆಟಿಗೆ ದಾಖಲೆಗೂ ಕಾರಣರಾಗಿದ್ದಾರೆ. 36ರ ಹರೆಯದ ಮಿಥಾಲಿ ಏಕದಿನದಲ್ಲಿ 51.33ರ ಸರಾಸರಿಯಂತೆ 6,622 ರನ್ ಸಾಧನೆ ಹೊಂದಿದ್ದಾರೆ. ಇದರಲ್ಲಿ 7 ಶತಕಗಳೂ ಸೇರಿವೆ.

200ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಗಮನಾರ್ಹ ಸಾಧನೆ ತೋರಿರಲಿಲ್ಲ. 23 ಎಸೆತಗಳಿಗೆ 7 ರನ್ ಬಾರಿಸಿ ಔಟ್ ಆಗಿದ್ದರು. ಕಾಕತಾಳೀಯವೆಂದರೆ ಮಿಥಾಲಿಯದ್ದೂ ಅದೇಪಾಡು. ಈ ವಿಶೇಷ ಪಂದ್ಯದಲ್ಲಿ 28 ಎಸೆತಗಳನ್ನು ಎದುರಿಸಿದ ಮಿಥಾಲಿ 9 ರನ್ನಿಗೆ ನಿರ್ಗಮಿಸಿದ್ದರು!

Story first published: Friday, February 1, 2019, 12:04 [IST]
Other articles published on Feb 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+