ಬೆಂಗಳೂರು, ಸೆ. 07: ಮಹಿಳಾ ಕ್ರಿಕೆಟ್ ತಂಡದ ನಾಯಕಿ, ಹಿರಿಯ ಕ್ರಿಕೆಟರ್ ಮಿಥಾಲಿ ರಾಜ್ ಅವರ ಒಂದು ಸೆಲ್ಫಿ ಫೋಟೊ ಈಗ ಭಾರಿ ಚರ್ಚೆಯಾಗುತ್ತಿದೆ.
ಟ್ವಿಟ್ಟರ್ ನಲ್ಲಿ ಫೋಟೋ ಕಂಡ ಹಲವಾರು ಮಂದಿ, ಇದೇನು ಪೋರ್ನ್ ಸ್ಟಾರ್ ಮಾದರಿ ಚಿತ್ರದಂತೆ ಕಾಣುತ್ತಿದೆ. ಮೊದಲು ಚಿತ್ರ ತೆಗೆಯಿರಿ ಎಂದಿದ್ದಾರೆ. ಆದರೆ, ಅನೇಕರು ಮಿಥಾಲಿ ಬೆಂಬಲಕ್ಕೆ ನಿಂತಿದ್ದಾರೆ.

ಬ್ಲಾಕ್ ಸ್ಪಾಗೆಟ್ಟಿ ಡ್ರೆಸ್ ನಲ್ಲಿದ್ದ ಮಿಥಾಲಿ ಅವರು ತಮ್ಮ ಗೆಳತಿಯರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಇದು ಈಗ ಚರ್ಚೆಯ ವಿಷಯ.
ನೀವು ರೋಲ್ ಮಾಡೆಲ್, ಹೀಗೆಲ್ಲಾ ಡ್ರೆಸ್ ಹಾಕಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ನಿಮ್ಮ ಚಿಂತನೆ ಬದಲಾಯಿಸಿಕೊಳ್ಳಿ ಎಂದು ಮಿಥಾಲಿ ಪರವಾಗಿ ತಾಳ್ಮೆಯಿಂದ ಹಲವಾರು ಮಂದಿ ಉತ್ತರಿಸಿದ್ದಾರೆ.