For Quick Alerts
ALLOW NOTIFICATIONS  
For Daily Alerts
 

ಪ್ರಿಯಾ ತಾಯಿ ಕೋವಿಡ್-19ಗೆ ಬಲಿ, ಆಟಗಾರ್ತಿಯರಿಂದ ಸಂತಾಪ

Mithali Raj, Lisa Sthalekar extend condolences to bereaved Priya Punia

ನವದೆಹಲಿ: ಭಾರತೀಯ ವನಿತಾ ಕ್ರಿಕೆಟ್ ತಂಡದ ಆಟಗಾರ್ತಿ ಪ್ರಿಯಾ ಪೂನಿಯಾ ಅವರ ತಾಯಿ ಸರೋಜಾ ಮೇ 18ರ ಮಂಗಳವಾರ ಕೋವಿಡ್‌-19 ಸೋಂಕಿನ ಕಾರಣ ಮೃತರಾಗಿದ್ದಾರೆ. ದುಃಖದಲ್ಲಿರುವ ಪೂನಿಯಾಗೆ ಭಾರತೀಯ ತಂಡದ ಆಟಗಾರ್ತಿರು, ವಿದೇಶಿ ಆಟಗಾರ್ತಿಯರು ಸಂತಾಪ ಸೂಚಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದ ಪ್ರಿಯಾ ಪೂನಿಯಾ ಭಾವನಾತ್ಮಕವಾಗಿ ಸಂದೇಶ ಬರೆದುಕೊಂಡಿದ್ದರು. 'ಗಟ್ಟಿಗೆಯಾಗಿರು ಅಂತ ನೀನು ಯಾಕೆ ಯಾವಾಗಲೂ ಹೇಳುತ್ತಿದ್ದೆ ಅನ್ನೋದು ನಂಗೀಗ ಅರ್ಥವಾಗ್ತಿದೆ. ನೀನು ಇಲ್ಲದ ದಿನ ಸಹಿಸಿಕೊಳ್ಳಲು ನಂಗೆ ಬಲು ಗಟ್ಟಿ ಹೃದಯ ಬೇಕು ಅನ್ನೋದು ನಿಂಗೆ ಮೊದಲೇ ಗೊತ್ತಿತ್ತು. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ,' ಎಂದು ಪ್ರಿಯಾ ಬರೆದುಕೊಂಡಿದ್ದರು.

ತಾಯಿಯನ್ನು ಕಳೆದುಕೊಂಡಿರುವ ಪ್ರಿಯಾಗೆ ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಪೂನಂ ರಾವತ್, ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ-ಈಗ ಕಾಮೆಂಟೇಟರ್ ಆಗಿರುವ ಲೀಸಾ ಸ್ಥಾಲೇಕರ್ ಮೊದಲಾದವರು ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

24ರ ಹರೆಯದ ಪ್ರಿಯಾ, ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತ ತಂಡದಲ್ಲಿದ್ದಾರೆ. ಮೇ 19ರಂದು ವನಿತಾ ತಂಡ ಮುಂಬೈನಲ್ಲಿ ಕ್ವಾರಂಟೈನ್‌ಗಾಗಿ ಜೊತೆ ಸೇರಲಿದೆ. ಮುಂಬೈನಿಂದ ಜೂನ್ 2ಕ್ಕೆ ತಂಡ ಇಂಗ್ಲೆಂಡ್‌ಗೆ ಹೋಗಲಿದೆ. ಇದೇ ವೇಳಾ ಪುರುಷರ ತಂಡವೂ ಮಹಿಳಾ ತಂಡದೊಂದಿಗೆ ಇಂಗ್ಲೆಂಡ್‌ಗೆ ಹೋಗುವ ಸಾಧ್ಯತೆಯಿದೆ.

Story first published: Wednesday, May 19, 2021, 16:49 [IST]
Other articles published on May 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+