Women's IPL : ಮಹಿಳಾ ಐಪಿಎಲ್ ಗೇಮ್‌ಚೇಂಜರ್ ಎನಿಸಲಿದೆ ಎಂದ ಮಿಥಾಲಿ ರಾಜ್

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಮಹಿಳಾ ಐಪಿಎಲ್ ಟೂರ್ನಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದು ಇದು ಮಹಿಳಾ ಕ್ರಿಕೆಟ್‌ನಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದಿದ್ದಾರೆ. ಸೋಮವಾರ ವಯಾಕಾಮ್ 18 ಮಹಿಳಾ ಐಪಿಎಲ್ ಟೂರ್ನಿಯ ಮಾಧ್ಯಮ ಹಕ್ಕುಗಳನ್ನು ಗೆದ್ದಿರುವುದಾಗಿ ಬಿಸಿಸಿಐ ಘೋಷಣೆ ಮಾಡಿದ ಬಳಿಕ ಮಿಥಾಲಿ ರಾಜ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ಪ್ರಸಾರದ ಹಕ್ಕನ್ನು ರಿಲಾಯನ್ಸ್ ಒಡೆತನದ ವಯಕಾಮ್ 18 ಗೆದ್ದುಕೊಂಡಿರುವುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟ್ಟರ್‌ನಲ್ಲಿ ಘೋಷಣೆ ಮಾಡಿದರು. ಮಹಿಳಾ ಐಪಿಎಲ್ ಟೂರ್ನಿಯ ಮುಂದಿನ ಐದು ಆವೃತ್ತಿಗಳ ಪ್ರಸಾರದ ಹಕ್ಕು 951 ಕೋಟಿ ಮೊತ್ತಕ್ಕೆ ವಯಕಾಮ್ 18 ಖರೀದಿಸಿದೆ. ಇದರರ್ಥ ಮುಂದಿನ ಐದು ವರ್ಷಗಳ ಕಾಲ ಮಹಿಳಾ ಐಪಿಎಲ್ ಟೂರ್ನಿಯ ಪ್ರತಿ ಪಂದ್ಯಕ್ಕೆ 7.09 ಕೋಟಿ ಮೊತ್ತವನ್ನು ವಯಕಾಮ್ 18 ಬಿಸಿಸಿಐಗೆ ನೀಡಬೇಕಾಗುತ್ತದೆ.
ಮಹಿಳಾ ಐಪಿಎಲ್ ಪ್ರಸಾರದ ಹಕ್ಕು ಮಾರಾಟದ ಬಳಿಕ ಟ್ವೀಟ್‌ನಲ್ಲಿ ಜಯ್ ಶಾ ಇದು ಐತಿಹಾಸಿಕ ಸಂಗತಿ ಎಂದು ಬಣ್ಣಿಸಿದ್ದಾರೆ. ಹೊಸ ಯುಗದ ಆರಂಭ ಎಂದು ಕರೆದಿರುವ ಜಯ್ ಶಾ ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಸಬಲೀಕರಣಕ್ಕೆ ದೊಡ್ಡ ಮತ್ತು ಅತ್ಯಂತ ಮಹತ್ವದ ಹೆಜ್ಜೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ವಯಸ್ಸಿನ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮಹಿಳಾ ಐಪಿಎಲ್ ವೇದಿಕೆ ನೀಡಲಿದೆ ಎಂಬ ಭರವಸೆ ನೀಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಡಿರುವ ಟ್ವೀಟ್ ರಿಟ್ವೀಟ್ ಮಾಡಿರುವ ಮಿಥಾಲಿ ರಾಜ್, ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಕೂಡ ಹಂಚಿಕೊಂಡಿದ್ದಾರೆ. ಮಹಿಳಾ ಕ್ರಿಕೆಟ್‌ನ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಈ ಸಂದರ್ಭದಲ್ಲಿ ಮಹಿಳಾ ಐಪಿಎಲ್ ಕ್ರಿಕೆಟ್‌ನಲ್ಲಿ ಬಹಳ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದಿದ್ದಾರೆ.
"ಮಹಿಳಾ ಐಪಿಎಲ್ ಮಹಿಳಾ ಕ್ರಿಕೆಟ್‌ನಲ್ಲಿ ಹಾಗೂ ಸಾಮಾನ್ಯ ಕ್ರಿಕೆಟ್‌ನಲ್ಲಿ ಕೂಡ ಬಹಳ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಈ ಬೆಳವಣಿಗೆ ಬಹುದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಅದ್ಭುತವಾದ ಟೂರ್ನೆಂಟ್‌ಗಾಗಿ ಎದುರುನೋಡುತ್ತಿದ್ದೇನೆ" ಎಂದು ಮಿಥಾಲಿ ರಾಜ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಬಹಳ ಕಾಲದಿಂದ ಮಹಿಳಾ ಐಪಿಎಲ್ ನಡೆಸುವ ನಿಟ್ಟಿನಲ್ಲಿ ಬೇಡಿಕೆ ಕೇಳಿ ಬರುತ್ತಿತ್ತು. ಆದರೆ ಈ ಬಾರಿ ಬಿಸಿಸಿಐ ಈ ನಿಟ್ಟಿನಲ್ಲಿ ಹೆಜ್ಜೆಯೊಟಟಿದ್ದು ಮುಂದಿನ ಮಾರ್ಚ್‌ನಲ್ಲಿ ಐದು ತಂಡಗಳ ಐಪಿಎಲ್ ಟೂರ್ನಿ ಆಯೋಜನೆಯಾಗಲಿದೆ. ಲೀಗ್ ಹಂತದಲ್ಲಿ ಒಟ್ಟು 20 ಪಂದ್ಯಗಳಿದ್ದು ಈ ಹಂತದ ಅಗ್ರ ಎರಡು ತಂಡಗಳು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕಾಗಿ ಎಲಿಮಿನೇಟರ್ ಪಂದ್ಯದಲ್ಲಿ ಸೆನೆಸಾಟ ನಡೆಯಲಿದೆ. ಇನ್ನು ಪ್ರತಿ ತಂಡಗಳು 18 ಆಟಗಾರ್ತಿಯರನ್ನು ಹೊದಿರಲಿದ್ದು 6 ವಿದೇಶಿ ಆಟಗಾರ್ತಿಯರಿಗೆ ಅವಕಾಶ ದೊರೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications