ಬಿಸಿಸಿಐ ಮ್ಯಾಚ್ ರೆಫರಿ ಸಮಿತಿಗೆ ಕರ್ನಾಟಕದ ಮಿಥುನ್ ಬೀರಾಲ ಆಯ್ಕೆ

Posted By:

ಬೆಂಗಳೂರು, ಸೆಪ್ಟೆಂಬರ್ 15 : ಕರ್ನಾಟಕದ ಮಾಜಿ ಕ್ರಿಕೆಟಿಗ ಮಿಥುನ್ ಬೀರಾಲ ಅವರು ಭಾರತೀಯ ಕ್ರಿಕೆಟ್ (ಬಿಸಿಸಿಐ) ಮ್ಯಾಚ್ ರೆಫರಿ ಸಮಿತಿಗೆ ಆಯ್ಕೆಯಾಗಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ಏಕದಿನ, ಟಿ20 ವೇಳಾಪಟ್ಟಿ

ಮಿಥುನ್ ಅವರ ತಂದೆ ರಘುನಾಥ್ ಬೀರಾಲ ಅವರು ಸಹ ಹಿಂದೆ ಬಿಸಿಸಿಐನ ಮ್ಯಾಚ್ ರೆಫರಿ ಸಮಿತಿಗೆ ಆಯ್ಕೆಯಾಗಿದ್ದರು. ರಾಜ್ಯದಿಂದ ತಂದೆ-ಮಗ ಜೋಡಿ ಬಿಸಿಸಿಐ ಮ್ಯಾಷ್ ರೆಫರಿ ಸಮಿತಿಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.

Mithun Beerala appointed BCCI match referee

ಮಿಥುನ್ ಕ್ರಿಕೆಟ್ ಆಸ್ಟ್ರೇಲಿಯಾದಿಂದ II ಮಟ್ಟದ ಕೋಚಿಂಗ್ ಪ್ರಮಾಣ ಪತ್ರವನ್ನು ಸಹ ಪಡೆದಿರುವುದು ಮತ್ತೊಂದು ವಿಶೇಷ.

"ಮ್ಯಾಚ್ ರೆಫರಿಯ ಕೆಲಸವನ್ನು ನಿಭಾಯಿಸಲು ಖುಷಿಯಾಗುತ್ತಿದೆ, ನನ್ನ ತಂದೆಯ ಹಾದಿಯನ್ನೇ ಅನುಸರಿಸಲು ಸಂತೋಷವಾಗುತ್ತಿದೆ" ಎಂದು ಮಿಥುನ್ ಬೀರಾಲ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಯುವರಾಜ್ ಸಿಂಗ್ ಕಡೆಗಣನೆ, ಯಾವ ತಂಡಕ್ಕೂ ಆಯ್ಕೆ ಇಲ್ಲ

ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಮಿಥುನ್, 1999-2007ರ ಅವಧಿಯಲ್ಲಿ ಕರ್ನಾಟಕದ ಪರ 24 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 33. 07 ಸರಾಸರಿಯಲ್ಲಿ 1290 ವೈಯಕ್ತಿಕ ರನ್ ಕಲೆ ಹಾಕಿದ್ದಾರೆ.

1999-2000ರಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಆಗಿದ್ದ ಕರ್ನಾಟಕ ತಂಡದಲ್ಲಿ ಮಿಥುನ್ ಇದ್ದರು. ಇನ್ನು ನಮ್ಮ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಉಗಮಕ್ಕೆ ಮಿಥುನ್ ಅವರ ಕೊಡುಗೆ ಸಹ ಇದೆ.

Story first published: Friday, September 15, 2017, 13:15 [IST]
Other articles published on Sep 15, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ