For Quick Alerts
ALLOW NOTIFICATIONS  
For Daily Alerts
 

ಇದೇ ಮೊದಲ ಬಾರಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಅನ್‌ಕ್ಯಾಪ್ಡ್‌ ಪ್ಲೇಯರ್‌

ಭಾರತ ಕ್ರಿಕೆಟ್‌ ನಿಂಯತ್ರಣಾ ಮಂಡಳಿಯಿಂದ ಹೊಸ ಅಪ್‌ ಡೇಟ್‌ ಬಂದಿದೆ. ಈ ಸುದ್ದಿ ಬಿಸಿಸಿಐ ನೂತನ ಅಧ್ಯಕ್ಷರದ್ದಾಗಿದೆ. ಮಿಥುನ್ ಮನ್ಹಾಸ್ ಅವರನ್ನು ಬಿಸಿಸಿಐ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇವರು ಈ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ಬಹುದಿನದಿಂದ ಚರ್ಚೆಯಲ್ಲಿತ್ತು. ಈಗ ಇವರ ಹೆಸರು ಫೈನಲ್‌ ಮಾಡಲಾಗುದೆ. ಇವರು ದೇಶೀಯ ಟೂರ್ನಿಯಲ್ಲಿ ದೆಹಲಿ ತಂಡದ ಪರ ಆಡಿದ್ದಾರೆ. ಸೆ.28ರ ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ಇವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕರ್ನಾಟಕದ ಸ್ಟಾರ್ ರೋಜರ್‌ ಬಿನ್ನಿ ಅವರಿಂದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಈಗ ಮಿಥುನ್ ಮನ್ಹಾಸ್ ನೇಮಕವಾಗಿದೆ. ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದ ವಯೋಮಿತಿಯನ್ನು ಮೀರಿದ್ದರಿಂದ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರಾಜೀವ್ ಶುಕ್ಲಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ಮಿಥುನ್‌ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಂತೆ ರಾಜೀವ್ ತಮ್ಮ ಸ್ಥಾನವನ್ನು ತೊರಯಲಿದ್ದಾರೆ.

Mithun Manhas Appointed New BCCI President Succeeds Roger Binny

ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೂರನೇ ಪ್ಲೇಯರ್ ಎಂಬ ಹಿರಿಮೆ ಮಿಥುನ್ ಮನ್ಹಾಸ್ ಅವರದ್ದಾಗಿದೆ. ಇವರಿಗೂ ಮುನ್ನ 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಈ ಹುದ್ದೆಯನ್ನು ಅಲಂಕರಿಸಿದ್ದರು. ಈಗ ಈ ಸ್ಥಾನದ ಮೇಲೆ 45 ವರ್ಷದ ಮಿಥುನ್ ಮನ್ಹಾಸ್ ಆಸೀನಲಾಗರಿದ್ದಾರೆ. ಇನ್ನು ಈ ಸ್ಥಾನವನ್ನು ಅಲಂಕರಿಸುವ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎಂಬ ಹೆಗ್ಗಳಿಕೆ ಸಹ ಇವರಿಗೆ ಸಲ್ಲುತ್ತದೆ.

ಮಿಥುನ್‌ ಸಾಧನೆ

ಮಿಥುನ್ ಮನ್ಹಾಸ್ ಜಮ್ಮುವಿನಲ್ಲಿ 1979ರಲ್ಲಿ ಜನಿಸಿದರು. ಇವರು 1997-98 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು 157 ಪಂದ್ಯಗಳನ್ನು ಆಡಿದ್ದು, 45.82ರ ಸರಾಸರಿಯಲ್ಲಿ 9714 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 27 ಶತಕ ಹಾಗೂ 49 ಅರ್ಧಶತಕಗಳು ಸೇರಿವೆ. ಇನ್ನು 130 ಲೀಸ್ಟ್‌ ಎ ಪಂದ್ಯಗಳಲ್ಲಿ 4126 ರನ್ ಸಿಡಿಸಿದ್ದು, ಇದರಲ್ಲಿ 5 ಶತಕಗಳು ಸೇರಿವೆ. ಅಲ್ಲದೆ 91 ಟಿ20 ಪಂದ್ಯಗಳಲ್ಲಿ 1170 ರನ್ ಗಳಿಸಿದ್ದಾರೆ. ಇವರು ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವವನ್ನು ಸಹ ಹೊಂದಿದ್ದಾರೆ. ಇನ್ನು ಬಿಸಿಸಿಐಯನಲ್ಲಿ ಇವರು ತಮ್ಮ ಕರ್ತವ್ಯ ನಿಭಾಯಿಸಲಿದ್ದಾರೆ.

Story first published: Sunday, September 28, 2025, 15:13 [IST]
Other articles published on Sep 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+