BCCI President: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿಯ ಹೆಸರು
ಸದ್ಯ ಭಾರತ ತಂಡ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾಗವಹಿಸಿದೆ. ಈ ಮಧ್ಯೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಮ್ಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹೀಗಿರುವಾಗ ಬಿಸಿಸಿಐ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸಿದೆ. ಈ ಹುದ್ದೆಯನ್ನು ಅಲಂಕರಿಸ ಬಲ್ಲ ಹಲವು ಮಾಜಿ ಆಟಗಾರರ ಹೆಸರುಗಳು ಕೇಳಿ ಬರುತ್ತಿವೆ. ಈ ಮಧ್ಯದಲ್ಲಿ ಈ ರೇಸ್‌ಗೆ ಅಚ್ಚರಿಯ ಹೆಸರು ಬೆಳಕಿಗೆ ಬಂದಿದೆ. ಇವರೇ ಬಹುತೇಕವಾಗಿ ಬಿಸಿಸಿಐ ಅಧ್ಯಕ್ಷರಾಗಬಹುದು ಎಂದು ಹೇಳಲಾಗುತ್ತಿದೆ.
ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಸದ್ಯ ರಾಜೀವ್ ಶುಕ್ಲಾ ಅವರು ಇದ್ದಾರೆ. ಇವರು ಬಿಸಿಸಿಐ ಮುಂದಿನ ಅಧ್ಯಕ್ಷರು ನೇಮಕ ಆಗುವವರೆಗೂ ಈ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಸೆಪ್ಟಂಬರ್ 28 ರಂದು ಬಿಸಿಸಿಐ ವಾರ್ಷಿಕ ಮಹಾ ಸಭೆ ನಡೆಯಲಿದೆ. ಈ ವೇಳೆ ಬಿಸಿಸಿಐ ಅಧ್ಯಕ್ಷರ ನೇಮಕ ಮಾಡುವ ಸಾಧ್ಯತೆ ಇದೆ. ಬಿಸಿಸಿಐನ ಹೊಸ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗುವುದು ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸೆ.20 ರಂದು ಬಿಸಿಸಿಐ ಉನ್ನತ ಅಧಿಕಾರಿಗಳು ಕೇಂದ್ರ ಸಚಿವರ ನಿವಾಸದಲ್ಲಿ ಹಾಜರಿದ್ದರು. ಈ ವೇಳೆ ಹೊಸ ಅಧ್ಯಕ್ಷ ಸ್ಥಾನಕ್ಕೆ ಮಿಥುನ್ ಮನ್ಹಾಸ್ ಬಹುತೇಕ ಫೈನಲ್ ಮಾಡಲಾಗಿದೆ.

ಬಿಸಿಸಿಐನ 94 ನೇ ವಾರ್ಷಿಕ ಮಹಾಸಭೆ ನಡೆಯಲಿದೆ. ಈ ವೇಳೆ ಮುಂದಿನ ಅಧ್ಯಕ್ಷರ ನೇಮಕ ನಡೆಯಲಿದೆ. ರೋಜರ್ ಬಿನ್ನಿ 70 ವರ್ಷ ವಯಸ್ಸನ್ನು ತಲುಪಿದ ನಂತರ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಇವರ ಸ್ಥಾನದಲ್ಲಿ ಮಿಥುನ್ ಮನ್ಹಾಸ್ ಅವರನ್ನು ನೇಮಿಸಬಹುದು ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಇನ್ನು ದೇವಜಿತ್ ಸಕಿಯಾ ಕಾರ್ಯದರ್ಶಿ, ರಾಜೀವ್ ಶುಕ್ಲಾ ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂದು ತಿಳಿದು ಬಂದಿದೆ. ಮಿಥುನ್ ಮನ್ಹಾಸ್ ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ಗೆ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮಿಥುನ್ ಸಾಧನೆ
ಮಿಥುನ್ ಮನ್ಹಾಸ್ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ಇವರು ದೇಶೀಯ ಕ್ರಿಕೆಟ್‌ನಲ್ಲಿ 157 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 27 ಶತಕ, 49 ಅರ್ಧಶತಕ ಸೇರಿದಂತೆ 9714 ರನ್ ಗಳಿಸಿದ್ದಾರೆ. ಇವರಿಗೆ ಐಪಿಎಲ್‌ನಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications