Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MLC 2023: ಉದ್ಘಾಟನಾ ಋತುವಿನಿಂದ ಹಿಂದೆ ಸರಿದ ಅಂಬಟಿ ರಾಯುಡು; ಎರಡು ಕಾರಣಗಳು!

ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಅವರು ಇತ್ತೀಚೆಗೆ ಐಪಿಎಲ್‌ನಿಮದಲೂ ನಿವೃತ್ತಿ ಘೋಷಿಸಿದರು. ಆ ಬಳಿಕ ಯುಎಸ್ಎನ ಉದ್ಘಾಟನಾ ಮೇಜರ್ ಲೀಗ್ ಕ್ರಿಕೆಟ್‌ (MLC) ಆವೃತ್ತಿಗಾಗಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ ಟಿ20 ಕ್ರಿಕೆಟ್‌ಗೆ ಮರಳಿದರು.

ಆದರೆ, ಇದೀಗ ಕೆಲವು ಕಾರಣಗಳಿಂದ ಅಂಬಟಿ ರಾಯುಡು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಪರ ಆಡಲು ಸಾಧ್ಯವಾಗುವುದಿಲ್ಲ. 2023ರ ಐಪಿಎಲ್ ಫೈನಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಬಳಿಕ ಅವರು ಐಪಿಎಲ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು.

MLC 2023: Ambati Rayudu Withdraws From MLC Inaugural Season; Here 2 Reasons

ಅಂಬಟಿ ರಾಯುಡು ತಮ್ಮ ಸಿಎಸ್‌ಕೆ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಕೇವಲ ಎಂಟು ಎಸೆತಗಳಲ್ಲಿ 19 ರನ್‌ಗಳ ಕೊಡುಗೆ ನೀಡಿದರು. ಈ ಆಕ್ರಮಣಕಾರಿ ಪ್ರದರ್ಶನ ಸಿಎಸ್‌ಕೆಗೆ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿತು.

ಅಂಬಟಿ ರಾಯುಡು ಅವರನ್ನು ಐಪಿಎಲ್ ಇತಿಹಾಸದಲ್ಲಿ ಜಂಟಿ ಅತ್ಯಂತ ಯಶಸ್ವಿ ಆಟಗಾರ ಎನಿಸಿದರು. ರೋಹಿತ್ ಶರ್ಮಾ ಅವರೊಂದಿಗೆ ಆರು ಐಪಿಎಲ್ ಟ್ರೋಫಿಗಳೊಂದಿಗೆ ದಾಖಲೆ ಹಂಚಿಕೊಂಡಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಅಂಬಟಿ ರಾಯುಡು ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿಯನ್ನು ಹೊಂದಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷವನ್ನು ಸೇರುವ ನಿರೀಕ್ಷೆಯಿದೆ ಮತ್ತು 2024ರ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯತೆ ಇದೆ.

ಕುತೂಹಲಕಾರಿ ಸಂಗತಿಯೆಂದರೆ, ಮೇಜರ್ ಲೀಗ್ ಕ್ರಿಕೆಟ್ ಉದ್ಘಾಟನಾ ಆವೃತ್ತಿಯಿಂದ ರಾಯುಡು ಹಿಂದೆ ಸರಿಯುವ ನಿರ್ಧಾರದ ಹಿಂದೆ ಬಿಸಿಸಿಐನ ಹೊಸ ನಿಯಮ ಕಾರಣ ಎನ್ನಲಾಗುತ್ತಿದೆ.

ವಿದೇಶಿ ಟಿ20 ಲೀಗ್‌ಗಳಿಗೆ ಭಾರತೀಯ ನಿವೃತ್ತ ಕ್ರಿಕೆಟಿಗರ ಪಾಲ್ಗೊಳ್ಳುವಿಕೆಯ ಬಗ್ಗೆ ಬಿಸಿಸಿಐ ಹೊಸ ನಿಯಮ ಜಾರಿಗೆ ತರಲಾಗುತ್ತದೆ ಎಂದು ಕಾರ್ಯದರ್ಶಿ ಜಯ್ ಶಾ ಸುಳಿವು ನೀಡಿದರು.

ಭಾರತೀಯ ಆಟಗಾರರ ಪೂರ್ವ ನಿರ್ಧರಿತ ನಿವೃತ್ತಿಗಳ ಪ್ರವೃತ್ತಿಯನ್ನು ತಡೆಯುವ ಗುರಿಯನ್ನು ಹೊಂದಿರುವ ನೀತಿಯನ್ನು ಜಾರಿಗೆ ತರುವುದಾಗಿ ಜಯ್ ಶಾ ಪ್ರಸ್ತಾಪಿಸಿದರು. ಪ್ರಸ್ತಾವಿತ ನೀತಿಯನ್ನು ಒಂದು ತಿಂಗಳೊಳಗೆ ಅನುಮೋದನೆಗಾಗಿ ಅಪೆಕ್ಸ್ ಕೌನ್ಸಿಲ್‌ಗೆ ಕಳುಹಿಸಲಾಗುವುದು ಎಂದು ಹೇಳಿದರು.

ವಿದೇಶದಲ್ಲಿ ಲಾಭದಾಯಕ ಟಿ20 ಲೀಗ್‌ಗಳಲ್ಲಿ ಭಾಗವಹಿಸುವ ಸಲುವಾಗಿ ಭಾರತೀಯ ಆಟಗಾರರು ಅವಧಿಗೆ ಮುನ್ನ ನಿವೃತ್ತಿಯಾಗುತ್ತಿರುವ ವಿಚಾರದಲ್ಲಿ ಬಿಸಿಸಿಐ ಸೆಡ್ಡು ಹೊಡೆದಿದೆ.

ಮುಂದಿನ ಅಪೆಕ್ಸ್ ಕೌನ್ಸಿಲ್ ಸಭೆಯು ವಿದೇಶಿ ಲೀಗ್‌ಗಳಲ್ಲಿ ನಿವೃತ್ತ ಭಾರತೀಯ ಆಟಗಾರರು ಆಡುವ ಬಗ್ಗೆ ಒಂದು ನೀತಿಯನ್ನು ರೂಪಿಸುವ ಕಾರ್ಯವನ್ನು ಬಿಸಿಸಿಐ ಪದಾಧಿಕಾರಿಗಳಿಗೆ ವಹಿಸಿದೆ.

ಹೀಗಾಗಿ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲಿಚ್ಚಿಸುವ ನಿವೃತ್ತ ಆಟಗಾರರಿಗಾಗಿ ಕೂಲಿಂಗ್-ಆಫ್ ಅವಧಿಯ ಪರಿಚಯವನ್ನು ಪರಿಗಣಿಸಲಾಗುತ್ತಿದೆ. ಆದರೆ ಇದನ್ನು ಎಚ್ಚರಿಕೆಯಿಂದ ಪರಿಗಣಿಸಿ ಮತ್ತು ಅಂತಿಮ ನಿರ್ಧಾರವು ಬಿಸಿಸಿಐ ಕೈಯಲ್ಲಿದೆ.

ಪ್ರಸ್ತಾವಿತ ಕೂಲಿಂಗ್-ಆಫ್ ನೀತಿಯು ಶೋಷಣೆ ಮತ್ತು ತಾರತಮ್ಯ, ವೈಯಕ್ತಿಕ ಹಕ್ಕುಗಳ ಬಗ್ಗೆ ಕಳವಳವನ್ನು ಉಂಟುಮಾಡುವ ಟೀಕೆಗಳನ್ನು ಎದುರಿಸುತ್ತಿದೆ. ಮಾಜಿ ಕ್ರಿಕೆಟಿಗರು, ಅಭಿಮಾನಿಗಳು, ವೀಕ್ಷಕರು ಮತ್ತು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Story first published: Saturday, July 8, 2023, 14:57 [IST]
Other articles published on Jul 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+