MLC 2023 ಫೈನಲ್: ಪೂರನ್ ಆರ್ಭಟ; ಚೊಚ್ಚಲ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್
ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮಾಲಿಕತ್ವದ ಎಂಐ ನ್ಯೂಯಾರ್ಕ್ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ನಿಕೋಲಸ್ ಪೂರನ್ ಅವರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ MINY ತಂಡ ಸಿಯಾಟಲ್ ಓರ್ಕಾಸ್ ತಂಡವನ್ನು ಬರೊಬ್ಬರಿ 7 ವಿಕೆಟ್‌ಗಳ ಅಂತರದಿಂದ ಮಣಿಸಿ ಚಾಂಪಿಯನ್ ಎನಿಸಿಕೊಂಡಿದೆ.
ಅಮೆರಿಕಾದ ಡಾಲಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯ ಜುಲೈ 30ರಂದು ನಡೆದಿದ್ದು ಈ ಪಂದ್ಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ. ರೋಚಕವಾಗಿ ನಡೆದ ಈ ಕಾದಾಟದಲ್ಲಿ ಸೀಟೆಲ್ ಓರ್ಕಾಸ್ ತಂಡದ ವಿರುದ್ಧ ಎಂಐ ನ್ಯೂಯಾರ್ಕ್ ತಂಡ ಅದ್ಭುತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎಂಐ ನ್ಯೂಯಾರ್ಕ್ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಹಂಗಾಮಿ ನಾಯಕನಾಗಿ ಕಣಕ್ಕಿಳಿದ ನಿಕೋಲಸ್ ಪೂರನ್.

ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಕೇವಲ 55 ಎಸೆತಗಳನ್ನು ಎದುರಿಸಿ ಬರೊಬ್ಬರಿ 137 ರನ್‌ಗಳನ್ನು ಬಾರಿಸಿದ್ದಾರೆ. ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 13 ಸಿಕ್ಸರ್‌ಗಳು ಸೇರಿಕೊಂಡಿತ್ತು. ಹೀಗಾಗಿ ನ್ಯೂಯಾರ್ಕ್ ತಂಡ ಎದುರಾಳಿ ನೀಡಿದ್ದ 184 ರನ್‌ಗಳ ಗುರಿಯನ್ನು ಇನ್ನು ನಾಲ್ಕು ಓವರ್‌ಗಳು ಬಾಕಿಯಿರುವಂತೆಯೇ ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಸಿಯಾಟಲ್ ಓರ್ಕಾಸ್ ತಂಡದ ಪರವಾಗಿ ನಾಯಕ ಕ್ವಿಂಟನ್ ಡಿಕಾಕ್ ಮಾತ್ರವೇ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. 52 ಎಸೆತಗಳಲ್ಲಿ 87 ರನ್‌ಗಳಿಸಿದ ಡಿಕಾಕ್‌ಗೆ ನಿರೀಕ್ಷಿತ ಮಟ್ಟದ ಸಹಾಯ ದೊರೆಯಲಿಲ್ಲ. ಹಾಗಿದ್ದರೂ 183 ರನ್‌ಗಳ ಕಠಿಣ ಗುರಿಯನ್ನು ನೀಡುವಲ್ಲಿ ಕ್ವಿಂಟನ್ ಪಡೆ ಯಶಸ್ವಿಯಾಯಿತು.
ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಎಂಐ ನ್ಯೂಯಾರ್ಕ್ ತಂಡ ಆರಂಭಿಕ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ನಂತರ ಆರಂಭವಾಗಿದ್ದು ಪೋರನ್ ಆರ್ಭಟ. ಕೇವಲ 16 ಎದಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಪೂರನ್ ಏಕಾಂಗಿಯಾಗಿ ಪಂದ್ಯವನ್ನು ಎದುರಾಳಿಯಿಮದ ಕಸಿದುಕೊಂಡರು. 249.09ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಎಂಐ ನ್ಯೂಯಾರ್ಕ್ ತಂಡ 16 ಓವರ್‌ನಲ್ಲಿ ಗೆದ್ದು ಚಾಂಪಿಯನ್ ಎನಿಸಿಕೊಂಡಿದೆ.
ಇನ್ನು ಈ ವರ್ಷ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಅದ್ಭುತ ಯಶಸ್ಸಿನ ವರ್ಷವಾಗಿದೆ. ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಮುಂಬೈ ಇಂಡಿಯನ್ಸ್ ಇದೀಗ ವರ್ಷದ ಎರಡನೇ ಲೀಗ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications