ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಲೀಗ್ ಕ್ರಿಕೆಟ್ ಸದ್ದು ಮಾಡುವ ನಿರೀಕ್ಷೆ ಮೂಡಿಸಿದೆ. ಮೇಜರ್ ಲೀಗ್ ಕ್ರಿಕೆಟ್ ಟೂರ್ನಿ ವಿಶ್ವ ಕ್ರಿಕೆಟ್‌ನ ಸ್ಟಾರ್ ಆಟಗಾರರನ್ನು ಒಳಗೊಂಡ ಟೂರ್ನಿಯಾಗಿದೆ. ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ MI ನ್ಯೂಯಾರ್ಕ್ ತಂಡ ಕಣಕ್ಕಿಳಿಯಲಿದ್ದು ಇಂದು ತಂಡದ ನಾಯಕ ಹಾಗೂ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸ್ಟಾರ್ ಆಟಗಾರರ ಬಹುದೊಡ್ಡ ಪಟ್ಟಯನ್ನೇ ಹೊಂದಿರುವ ಈ ತಂಡ ಬಲಿಷ್ಠವಾಗಿ ಗೋಚರಿಸುತ್ತಿದೆ.
ಜುಲೈ 13 ಆರಂಭವಾಗಿ 18ರವರೆಗೆ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯುತ್ತದೆ. ನಂತರ ಚರ್ಚ್ ಸ್ಟ್ರೀಟ್ ಪಾರ್ಕ್‌ನಲ್ಲಿ ಉಳಿದ ಪಂದ್ಯಗಳು ಮುಂದುವರಿಯಲಿದೆ. ಪ್ಲೇಆಫ್ ಮತ್ತು ಫೈನಲ್‌ಗಳು ಜುಲೈ 27 ರಿಂದ 30 ರವರೆಗೆ ಡಲ್ಲಾಸ್‌ನಲ್ಲಿ ಆಯೋಜನೆಯಾಗಲಿದೆ. ಒಟ್ಟು ಆರು ತಂಡಗಳು ಭಾಗವಹಿಸಿರುವ ಈ ಟೂರ್ನಿಯಲ್ಲಿ ನಾಲ್ಕು ಫ್ರಾಂಚೈಸಿಗಳ ಮಾಲಿಕತ್ವವನ್ನು ಐಪಿಎಲ್ ತಂಡಗಳ ಮಾಲೀಕರೇ ಹೊಂದಿರುವುದು ವಿಶೇಷ.

ಇನ್ನು ಈ ಟೂರ್ನಿಯ ತಂಡಗಳಲ್ಲಿ ಒಂದಾಗಿರುವ MI ನ್ಯೂಯಾರ್ಕ್ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 18 ಸದಸ್ಯರ ತಂಡವನ್ನು ಪೂರ್ಣಗೊಳಿಸಿರುವ MI ವಿಶ್ವದ ವಿವಿಧ ಲೀಗ್‌ಗಳಲ್ಲಿ ಭಾಗವಾಗಿರುವ ತಮ್ಮ ಪ್ರಮುಖ ಆಟಗಾರರ ಬಲಿಷ್ಠ ತಂಡವನ್ನು ಕಟ್ಟಿದೆ. ವೆಸ್ಟ್ ಇಂಡೀಸ್‌ನ ಹಿರಿಯ ಆಟಗಾರ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸುದೀರ್ಘ ಕಾಲ ಸ್ಟಾರ್ ಆಟಗಾರನಾಗಿದ್ದ ಕಿರಾನ್ ಪೊಲಾರ್ಡ್ ಈ ತಂಡದ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಲಸಿತ್ ಮಲಿಂಗಾ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಮತ್ತು ನಿಕೋಲಸ್ ಪೂರನ್ ಕೂಡ ಮೊದಲ ಆವೃತ್ತಿಯಲ್ಲಿ MI ನ್ಯೂಯಾರ್ಕ್ ಪರ ಕಣಕ್ಕಿಳಿಯಲಿದ್ದಾರೆ.
ಇನ್ನುಳಿದಂತೆ ಟ್ರೆಂಟ್ ಬೋಲ್ಟ್, ಟಿಮ್ ಡೇವಿಡ್, ವೇಗಿ ಜೇಸನ್ ಬೆಹ್ರೆನ್‌ಡಾರ್ಫ್, ದಕ್ಷಿಣ ಆಫ್ರಿಕಾ ಉದಯೋನ್ಮುಖ ಆಟಗಾರ ಡೆವಾಲ್ಡ್ ಬ್ರೆವಿಸ್, ಕಗಿಸೊ ರಬಾಡಾ ಮತ್ತು ನಮೀಬಿಯಾದ ಆಲ್‌ರೌಂಡರ್ ಡೇವಿಡ್ ವೈಸ್ ಕೂಡ ಮೇಜರ್ ಲೀಗ್ ಕ್ರಿಕೆಟ್‌ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಸ್ಟಾರ್ ಆಟಗಾರರಲ್ಲದೆ ಯುನೈಟೆಡ್ ಸ್ಟೇಟ್ಸ್‌ನ ಸ್ಥಳೀಯ ಪ್ರತಿಭೆಗಳಾದ ಸ್ಟೀವನ್ ಟೇಲರ್, ಆಲ್ ರೌಂಡರ್ ನೊಸ್ತುಶ್ ಕೆಂಜಿಗೆ, ಯುಎಸ್ಎ ನಾಯಕ ಮೊನಾಂಕ್ ಪಟೇಲ್, ವಿಕೆಟ್ ಕೀಪರ್ ಶಯಾನ್ ಜಹಾಂಗೀರ್, ವೇಗದ ಬೌಲರ್ ಕೈಲ್ ಫಿಲಿಪ್, ಹಮ್ಮದ್ ಅಜಮ್, ಎಹ್ಸಾನ್ ಆದಿಲ್, ಸರ್ಬ್ಜೀತ್ ಲಡ್ಡಾ ಮತ್ತು ಸಂದೀಪ್ ಗಣೇಶ್ ಈ ತಂಡದಲ್ಲಿದ್ದಾರೆ.
MI ನ್ಯೂಯಾರ್ಕ್: ಕೀರನ್ ಪೊಲಾರ್ಡ್ (ನಾಯಕ), ಟ್ರೆಂಟ್ ಬೋಲ್ಟ್, ರಶೀದ್ ಖಾನ್, ಟಿಮ್ ಡೇವಿಡ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ವೈಸ್ ಕಗಿಸೊ ರಬಾಡ, ನಿಕೋಲಸ್ ಪೂರನ್, ಜೇಸನ್ ಬೆಹ್ರೆನ್‌ಡಾರ್ಫ್, ಸ್ಟೀವನ್ ಟೇಲರ್, ನೊಸ್ತುಶ್ ಕೆಂಜಿಗೆ, ಮೊನಾಂಕ್ ಪಟೇಲ್, ಶಯಾನ್ ಜಹಾಂಗೀರ್, ಕೈಲ್ ಫಿಲಿಪ್, ಹಮ್ಮದ್ ಅಜಮ್, ಸರಬ್ಜೀತ್ ಲಡ್ಡಾ, ಸಂದೀಪ್ ಗಣೇಶ್.