For Quick Alerts
ALLOW NOTIFICATIONS  
For Daily Alerts
 

MLC 2023: ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಈ ತಂಡವನ್ನು ಸೇರಿದ ಆರ್‌ಸಿಬಿ ಸ್ಫೋಟಕ ಆಟಗಾರ

ಆರ್‌ಸಿಬಿ ಹಾಗೂ ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಫಿನ್ ಅಲೆನ್ ಅವರು ಮೇಜರ್ ಲೀಗ್ ಕ್ರಿಕೆಟ್‌ನ (MLC) ಚೊಚ್ಚಲ ಋತುವಿನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವನ್ನು ಸೇರಿದ್ದಾರೆ. ಈ ಕುರಿತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.

ಜುಲೈ 13ರಂದು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಆರಂಭವಾಗುವ ಮೇಜರ್ ಲೀಗ್ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

MLC 2023

ಯುಎಸ್ಎನ ಅಗ್ರ-ಶ್ರೇಣಿಯ ಕ್ರಿಕೆಟ್ ಲೀಗ್‌ನ ಚೊಚ್ಚಲ ಆವೃತ್ತಿಗೆ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಅದೇ ರೀತಿ ಫಿನ್ ಅಲೆನ್ ಕೂಡ ಉದ್ಘಾಟನಾ ಋತುವಿನ ಮುಂಚಿತವಾಗಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡ ಸೇರುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.

""ನಮಸ್ಕಾರ ಎಲ್ಲರಿಗೂ, ಇಲ್ಲಿ ಫಿನ್ ಅಲೆನ್ ಇದ್ದಾರೆ. ಈ ಜುಲೈ 13ರಂದು ಚಾಲನೆ ಸಿಗುವ ಮೇಜರ್ ಲೀಗ್ ಕ್ರಿಕೆಟ್‌ನ ಉದ್ಘಾಟನಾ ಋತುವಿನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದೊಂದಿಗೆ ತೊಡಗಿಸಿಕೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ. ಅಮೆರಿಕದಲ್ಲಿ ಕ್ರಿಕೆಟ್ ಆಡುವುದು ರೋಚಕ ಸಮಯವಾಗಲಿದೆ. ನಿಮ್ಮೆಲ್ಲರನ್ನೂ ಶೀಘ್ರದಲ್ಲೇ ಟೆಕ್ಸಾಸ್‌ನಲ್ಲಿ ಭೇಟಿಯಾಗಲು ಆಶಿಸುತ್ತೇನೆ,'' ಎಂದು ಫಿನ್ ಅಲೆನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.

ಫಿನ್ ಅಲೆನ್ ನ್ಯೂಜಿಲೆಂಡ್ ತಂಡದ ಪರ 28 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ ಮತ್ತು 616 ರನ್ ಗಳಿಸಿದ್ದಾರೆ. ಇದೇ ವೇಳೆ ಎರಡು ಅರ್ಧ ಶತಕ ಮತ್ತು ಒಂದು ಶತಕವನ್ನು ಬಾರಿಸಿದ್ದಾರೆ.

ಜುಲೈ 14ರಂದು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ಅಭಿಯಾನ ಪ್ರಾರಂಭ

ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಜುಲೈ 14ರಂದು ಟೆಕ್ಸಾಸ್‌ನಲ್ಲಿ ಎಂಐ ನ್ಯೂಯಾರ್ಕ್ ವಿರುದ್ಧ ಈ ಆವೃತ್ತಿಯ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಗಮನಾರ್ಹ ಸಂಗತಿಯೆಂದರೆ, ಮೇಜರ್ ಲೀಗ್ ಕ್ರಿಕೆಟ್‌ನ ಉದ್ಘಾಟನಾ ಋತುವಿನಲ್ಲಿ ಮಾಜಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ.

ಇನ್ನು ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ಪಾಕಿಸ್ತಾನ ಟೆಸ್ಟ್ ತಂಡದ ಭಾಗವಾಗಿರದ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯಿಂದ ಗ್ರೀನ್ ಸಿಗ್ನಲ್ ಪಡೆದ ನಂತರ, ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಫ್ರಾಂಚೈಸಿ ಇತ್ತೀಚೆಗೆ ಪಾಕಿಸ್ತಾನದ ಜೋಡಿ ಶಾದಾಬ್ ಖಾನ್ ಮತ್ತು ಹ್ಯಾರಿಸ್ ರೌಫ್ ಅವರನ್ನು ಸಹ ಸೇರಿಸಿಕೊಂಡಿದೆ.

ಇದೇ ವೇಳೆ ಕೋರಿ ಆಂಡರ್ಸನ್, ಮ್ಯಾಥ್ಯೂ ವೇಡ್, ಲಿಯಾಮ್ ಪ್ಲಂಕೆಟ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರು ಮೇಜರ್ ಲೀಗ್ ಕ್ರಿಕೆಟ್‌ 2023ರಲ್ಲಿ ಯುನಿಕಾರ್ನ್ಸ್ ಫ್ರ್ಯಾಂಚೈಸ್ ಪರ ಆಡುವ ಇತರ ಆಟಗಾರರಲ್ಲಿ ಸೇರಿದ್ದಾರೆ. ಇನ್ನು ಶೇನ್ ವ್ಯಾಟ್ಸನ್ ಯುನಿಕಾರ್ನ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.

Story first published: Monday, July 3, 2023, 23:39 [IST]
Other articles published on Jul 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+