For Quick Alerts
ALLOW NOTIFICATIONS  
For Daily Alerts
 

Modi 3.0: ಮನ್ಸುಖ್ ಮಾಂಡವಿಯಾ ನೂತನ ಕೇಂದ್ರ ಕ್ರೀಡಾ ಸಚಿವ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೂತನ ಕೇಂದ್ರ ಸಚಿವ ಸಂಪುಟದಲ್ಲಿ ಮಾಜಿ ಆರೋಗ್ಯ ಸಚಿವ ಡಾ. ಮನ್ಸುಖ್ ಎಲ್ ಮಾಂಡವಿಯಾ ಅವರಿಗೆ ಕ್ರೀಡಾ ಮತ್ತು ಯುವಜನ ಸೇವೆ ಸಚಿವಾಲಯದ ಉಸ್ತುವಾರಿ ನೀಡಲಾಗಿದೆ.

ಭಾನುವಾರ, ಜೂನ್ 9ರ ರಾತ್ರಿ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸಚಿವ ಸಂಪುಟದ ಪ್ರಮಾಣ ವಚನ ಬೋಧಿಸಲಾಯಿತು.

Modi 3 0 Mansukh Mandaviya is the New Union Sports Minister

ಈ ಹಿಂದೆ ನರೇಂದ್ರ ಮೋದಿ 2.0 ಕ್ಯಾಬಿನೆಟ್‌ನಲ್ಲಿ ಕೇಂದ್ರ ಕ್ರೀಡಾ ಸಚಿವರಾಗಿದ್ದ ಅನುರಾಗ್ ಠಾಕೂರ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಮನ್ಸುಖ್ ಮಾಂಡವಿಯಾ ಅವರಿಗೆ ಸೋಮವಾರದಂದು ಪ್ರಮುಖ ಕ್ರೀಡಾ ಸಚಿವ ಸ್ಥಾನ ನೀಡಲಾಗಿದೆ.

ಈ ಹಿಂದೆ 2019ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಗಳಿಸಿದ ನಂತರ, ಅರುಣಾಚಲ ಪ್ರದೇಶದ ಕಿರಣ್ ರಿಜಿಜು ಅವರನ್ನು ಕೇಂದ್ರ ಕ್ರೀಡಾ ಸಚಿವರನ್ನಾಗಿ ನೇಮಿಸಲಾಗಿತ್ತು.

ದೇಶದ ವಿವಿಧ ಭಾಗಗಳಲ್ಲಿ ಕ್ರಿಕೆಟ್‌ನ ಹೊರತಾಗಿ ಕ್ರೀಡೆಯ ಜನಪ್ರಿಯತೆಯನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ "ಖೇಲೋ ಇಂಡಿಯಾ' ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸುವಲ್ಲಿ ಕಿರಣ್ ರಿಜಿಜು ಪ್ರಮುಖ ಪಾತ್ರ ವಹಿಸಿದ್ದರು.

ನಂತರ ಕಿರಣ್ ರಿಜಿಜು ಅವರನ್ನು ಕಾನೂನು ಸಚಿವರನ್ನಾಗಿ ಮಾಡಲಾಯಿತು ಮತ್ತು ನಂತರ ಅವರಿಗೆ ವಿಜ್ಞಾನ ಸಚಿವಾಲಯದ ಖಾತೆಯನ್ನು ನೀಡಲಾಯಿತು. ಈ ವೇಳೆ ಹಿಮಾಚಲಪ್ರದೇಶದ ಅನುರಾಗ್ ಠಾಕೂರ್ 2022ರಲ್ಲಿ ಕ್ರೀಡಾ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರು.

2024-25ನೇ ಸಾಲಿಗೆ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವಾಲಯಕ್ಕೆ ಸಾಮಾನ್ಯ ಬಜೆಟ್‌ನಿಂದ 3,442 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

ಇನ್ನು ರಕ್ಷಾ ನಿಖಿಲ್ ಖಡ್ಸೆ ಅವರನ್ನು ಕ್ರೀಡಾ ಖಾತೆ ರಾಜ್ಯ ಸಚಿವೆಯಾಗಿ ನೇಮಿಸಲಾಗಿದೆ. ರಕ್ಷಾ ಮಹಾರಾಷ್ಟ್ರದ ರೇವರ್ ಕ್ಷೇತ್ರದಿಂದ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಸತತ ಎರಡನೇ ಬಾರಿಗೆ ತಮ್ಮ ಲೋಕಸಭಾ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತದ ಸಿದ್ಧತೆಗಳು ಬಹುತೇಕ ಮುಗಿದಿದ್ದರೂ, ಹೊಸ ಕ್ರೀಡಾ ಸಚಿವರ ಅಡಿಯಲ್ಲಿ ಅದು ಹೇಗೆ ಬಲಗೊಳ್ಳುತ್ತದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.

ನೂತನ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಹಿನ್ನೆಲೆ ಏನು?

ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಶ್ರೇಣಿಯ ಮೂಲಕ ಏರಿಕೆ ಕಂಡ ಮನ್ಸುಖ್ ಮಾಂಡವಿಯಾ ಅವರು ಬಿಜೆಪಿಯ ಕಾರ್ಯಕರ್ತರಾದರು.

2002ರಲ್ಲಿ ಮನ್ಸುಖ್ ಮಾಂಡವಿಯಾ ಪಲಿಟಾನಾ ಕ್ಷೇತ್ರದಿಂದ ಗೆದ್ದು ಗುಜರಾತ್‌ನ ಅತ್ಯಂತ ಕಿರಿಯ ವಿಧಾನಸಭೆಯ ಸದಸ್ಯರಾದರು. ಆ ಬಳಿಕ ಗುಜರಾತ್‌ನಲ್ಲಿ ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿದ್ದರು. ಅಂತಿಮವಾಗಿ 2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.

ಮನ್ಸುಖ್ ಮಾಂಡವಿಯಾ ಅವರು ಭಾವನಗರ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಮೂರು ವರ್ಷಗಳ ಹಿಂದೆ ಗುಜರಾತ್ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ರಿಸರ್ಚ್‌ನಲ್ಲಿ ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.

ನೂತನ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ಪೋರಬಂದರ್ ಲೋಕಸಭೆ ಕ್ಷೇತ್ರದಿಂದ ಗೆದ್ದರು. ಕಾಂಗ್ರೆಸ್‌ನ ಲಲಿತ್ ವಸೋಯಾ ಅವರನ್ನು ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದರು.

Story first published: Monday, June 10, 2024, 21:49 [IST]
Other articles published on Jun 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+