For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾದ ಸೆಮಿಫೈನಲ್‌ ಸೋಲಿಗೆ ಪ್ರಧಾನಿ ಮೋದಿ ಹೇಳಿದ್ದಿದು

ICC World Cup 2019: ಟೀಮ್ ಇಂಡಿಯಾದ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
Modi, Rahul laud Team Indias fighting spirit at WC 2019

ಹೊಸದಿಲ್ಲಿ, ಜುಲೈ 10: ಪ್ರಸಕ್ತ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್‌ ಟೀಮ್‌ ಇಂಡಿಯಾ ಕಳೆದ ಬಾರಿಯ ರನ್ನರ್ಸ್‌ಅಪ್‌ ತಂಡ ನ್ಯೂಜಿಲೆಂಡ್‌ ವಿರುದ್ಧ 18 ರನ್‌ಗಳ ಅಂತರದಲ್ಲಿ ಸೋತು ತನ್ನ ಅಭಿಯಾನ ಅಂತ್ಯಗೊಳಿಸಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇದರ ಬೆನ್ನಲ್ಲೇ ಟ್ವಿಟರ್‌ ಮೂಲಕ ಭಾರತ ತಂಡದ ಸೋಲಿನ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸೋತರೂ ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ ತಂಡದ ನೀಡಿದ ಕೆಚ್ಚೆದೆಯ ಹೋರಾಟವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೂಡ ಭಾರತ ತಂಡದ ಹೋರಾಟವನ್ನು ಪ್ರಶಂಶಿಸಿದ್ದಾರೆ.

"ಇದು ನಿಜಕ್ಕೂ ನಿರಾಶಾದಾಯಕ ಫಲಿತಾಂಶ. ಆದರೂ ಅಂತ್ಯದ ವರೆಗೂ ಟೀಮ್‌ ಇಂಡಿಯಾ ಹೋರಾಟ ನಡೆಸಿದ್ದನ್ನು ಕಂಡು ಖುಷಿಯಾಗಿದೆ. ಟೂರ್ನಿಯುದ್ದಕ್ಕೂ ಭಾರತ ತಂಡ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಕುರಿತಾಗಿ ಹೆಮ್ಮೆಯ ಭಾವವಿದೆ," ಎಂದು ನರೇಂದ್ರ ಮೋದಿ ತಮ್ಮ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಟ್ವೀಟ್‌ ಮಾಡಿದ್ದಾರೆ.

ಅಷ್ಟೇ ಅಲ್ಲದೆ, "ಸೋಲು ಗೆಲುವು ಆಟದ ಒಂದು ಭಾಗ. ತಂಡದ ಮುಂದಿನ ಅಭಿಯಾನಗಳಿಗೆ ಶುಭಾಶಯ," ಎಂದು ತಮ್ಮ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಟ್ವೀಟ್‌ ಮಾಡಿದ್ದು, "ಕೋಟ್ಯಂತರ ಹೃದಯಗಳು ಇಂದು ಒಡೆದು ಹೋಗಿವೆ. ಟೀಮ್‌ ಇಂಡಿಯಾ ಕೆಚ್ಚೆದೆಯ ಹೋರಾಟ ನಡೆಸಿತು. ನಿಮಗೆ ನಮ್ಮೆಲ್ಲರ ಗೌರವ ಮತ್ತು ಪ್ರೀತಿ ಅರ್ಹವಾದದ್ದು. ಕಿವೀಸ್‌ ತಂಡಕ್ಕೆ ಧನ್ಯವಾದಗಳು. ಗೆಲುವಿ ನಿಮಗೆ ಅರ್ಹವಾಗಿತ್ತು," ಎಂದು ತಮ್ಮ ಟ್ವೀಟ್‌ನಲ್ಲಿ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪಂದ್ಯದಲ್ಲಿ 240 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ರವೀಂದ್ರ ಜಡೇಜಾ (77) ಮತ್ತು ಎಂ.ಎಸ್‌ ಧೋನಿ (50) ಅವರ ಹೋರಾಟಯುತ ಅರ್ಧಶತಕಗಳ ನೆರವಿನಿಂದ ಗುರಿ ಸಮೀಪ ತಲುಪಿತ್ತಾದರೂ ಅಂತಿಮವಾಗಿ 49.3 ಓವರ್‌ಗಳಲ್ಲಿ 221 ರನ್‌ಗೆ ಆಲ್‌ಔಟ್‌ ಆಗುವ ಮೂಲಕ 18 ರನ್‌ಗಳಿಂದ ಸೋಲನುಭವಿಸಿತು.

Story first published: Wednesday, July 10, 2019, 22:56 [IST]
Other articles published on Jul 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+