Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಮೊಯಿನ್ ಅಲಿ

ಸೆಪ್ಟೆಂಬರ್ 11 ರಿಂದ ತವರಿನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಗೆ ಇಂಗ್ಲೆಂಡ್ ತಂಡದಿಂದ ಸ್ಟಾರ್ ಆಲ್‌ರೌಂಡರ್ ಮೊಯಿನ್ ಆಲಿ ಹೊರಗುಳಿದಿದ್ದರು. ಇದೀಗ ಅವರು ಧೀಡರ್ ಎನ್ನುವಂತೆ ಅಂತರಾಷ್ಟ್ರೀಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಮೊಹಿನ್ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಸ್ಪಿನ್ ವಿಭಾಗದ ಶಕ್ತಿಯಾಗಿದ್ದರು. ಈಗಾಗಲೇ ಎರಡು ಬಾರಿ ನಿವೃತ್ತಿ ಘೋಷಿಸಿದ ಬಳಿಕವೂ 2023ರ ಏಕದಿನ ವಿಶ್ವಕಪ್ ಮತ್ತು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್‌ ಆಗಿ ಮಿಂಚಿದ್ದರು.

Moeen Ali announced his retirement from international cricket

ನಿವೃತ್ತಿ ಕಾರಣವೇನು?

ಮೊಯಿನ್ ಅಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವು ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯಾಗಿದೆ. ಏಕೆಂದರೆ ಇಂಗ್ಲೆಂಡ್ ಅನುಭವಿ ಆಲ್‌ರೌಂಡರ್‌ನನ್ನು ಕಳೆದುಕೊಂಡಿದೆ. ವಯಸ್ಸಿನ ಕಾರಣ ಮತ್ತು ನಿರಂತರ ಕಳಪೆ ಫಿಟ್‌ನೆಸ್‌ನಿಂದಾಗಿ ಮೊಯಿನ್ ಅಲಿ ನಿವೃತ್ತರಾಗಲು ನಿರ್ಧರಿಸಿದ್ದಾರೆ.

ವಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಅವರೊಂದಿಗೆ ಡೈಲಿ ಮೇಲ್‌ನಲ್ಲಿ ಮಾತನಾಡುವಾಗ ಮೊಯಿನ್ ಅಲಿ ತಮ್ಮ ನಿವೃತ್ತಿಯ ಬಗ್ಗೆ ಕುರಿತು ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆಡಿದ ದಿನಗಳು ನನ್ನ ಜೀವನದ ಅತ್ಯುತ್ತಮ ದಿನಗಳು ಎಂದು ಮೊಯಿನ್ ಆಲಿ ಹೇಳಿಕೊಂಡಿದ್ದಾರೆ.

"ನು ಇನ್ನಷ್ಟು ಕಾಲದವರೆಗೆ ಇಂಗ್ಲೆಂಡ್ ತಂಡದ ಪರ ಆಡಬೇಕು ಎಂದುಕೊಂಡಿದ್ದೆ, ಆದರೆ ಅದು ಸಾಧ್ಯವಾಗುವುದಿಲ್ಲ ಎಂಬ ಸತ್ಯ ನನಗೆ ತಿಳಿದಿದೆ. ನಿವೃತ್ತಿಯ ನಂತರವೂ ನ ನನ್ನಲ್ಲಿ ಇಂಗ್ಲೆಂಡ್ ಪರ ಆಡು ಸಾಮರ್ಥ್ಯವಿದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಯುವಕರಿಗೆ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ಪರ ಮೋಯಿನ್ ಅಲಿ ಒಟ್ಟು 138 ಏಕದಿನ ಪಂದ್ಯಗಳಿಂದ 2355 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 111 ವಿಕೆಟ್ ಉರುಳಿಸಿದ್ದಾರೆ. ಇನ್ನು 92 ಟಿ20 ಪಂದ್ಯಗಳನ್ನಾಡಿ 1229 ರನ್ ಹಾಗೂ 51 ವಿಕೆಟ್ ಪಡೆದಿದ್ದಾರೆ.

Story first published: Sunday, September 8, 2024, 10:03 [IST]
Other articles published on Sep 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+