Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡಿಗ ಕೆಎಲ್ ರಾಹುಲ್ ಹಾಡಿ ಹೊಗಳಿದ ಇಂಗ್ಲೆಂಡ್ ಸ್ಪಿನ್ ಬೌಲರ್

ಇಂಗ್ಲೆಂಡ್ ಹಾಗೂ ಭಾರತದ ನಡುವಣ ಟೆಸ್ಟ್‌ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. ಐದು ಪಂದ್ಯಗಳ ಟೆಸ್ಟ್‌ ಸರಣಿಯ ಎಲ್ಲ ಪಂದ್ಯಗಳು ಕೊನೆಯ ದಿನದವರೆಗೆ ನಡೆದು ಕುತೂಹಲ ಮೂಡಿಸಿತ್ತು. ಈ ಸರಣಿಯಲ್ಲಿ ಎರಡೂ ತಂಡಗಳ ಭರ್ಜರಿ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕ್ಲಾಸಿಕ್ ಬ್ಯಾಟ್ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ಇಂಗ್ಲೆಂಡ್‌ ತಂಡದ ಆಫ್‌ ಸ್ಪಿನ್‌ ಮೋಯಿನ್ ಅಲಿ ಸಹ ರಾಹುಲ್ ಆಟವನ್ನು ಕೊಂಡಾಡಿದ್ದಾರೆ.

ಬಿಯರ್ಡ್ ಬಿಫೋರ್ ವಿಕೆಟ್ ಯೂಟ್ಯೂಬ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಇಂಗ್ಲೆಂಡ್ ಆಫ್‌ ಸ್ಪಿನ್‌ ಮೋಯಿನ್ ಅಲಿ ಹಾಡಿ ಹೊಗಳಿದ್ದಾರೆ. ಕೆಎಲ್ ರಾಹುಲ್ ಆರಂಭಿಕರಾಗಿ ಆಡಿದ ಧಾಟಿ ನಿಜಕ್ಕೂ ಅಮೋಘ. ಇವರು ಇಂಗ್ಲೆಂಡ್‌ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಸರಣಿಯಲ್ಲಿ ಶುಭಮನ್‌ ಗಿಲ್‌ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದಾರೆ. ಆದರೆ ಕೆಎಲ್‌ ರಾಹುಲ್‌ ಇತ್ತೀಚಿನ ವರ್ಷಗಳಲ್ಲಿ ಸೊಗಸಾಗಿ ಆಡುತ್ತಿದ್ದಾರೆ. ಅವರ ಆಟವನ್ನು ನೋಡಿದರೆ ಇವರು ವಿಶ್ವದ ಬೆಸ್ಟ್ ಆಟಗಾರರಲ್ಲಿ ಒಬ್ಬರು. ರಾಹುಲ್‌ ಇನ್ನಷ್ಟು ಫ್ರಿ ಆಗಿ ಆಡಿದರೆ ಇನ್ನು ಚೆನ್ನಾಗಿ ಆಡಬಹುದು ಎಂದು ತಿಳಿಸಿದ್ದಾರೆ.

Moeen Ali Praises KL Rahul Calls Him One of the Best Batsmen in the World

ಇಂಗ್ಲೆಂಡ್‌ ಪ್ರವಾಸದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಈ ವೇಳೆ ಶುಭಮನ್‌ ಅಬ್ಬರಿಸಿದ್ದಾರೆ. ಕೆಎಲ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದಾರೆ. ರೂಟ್‌ ಸಹ ಈ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಉಭಯ ತಂಡಗಳು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವೆ. ಈ ಸರಣಿಯನ್ನು ನಾನು ಹಿಂತಿರುಗಿ ನೋಡಿದಾಗ ಜೊತೆಯಾಟದ ಕಾಣಿಕೆಗಳು ನನ್ನ ನೆನಪಿಗೆ ಬರುತ್ತಿವೆ. ವಾಷಿಂಗ್ಟನ್‌ ಸುಂದರ್‌, ರವೀಂದ್ರ ಜಡೇಜಾ ಅವರು ಆಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಜೊತೆಯಾಟಗಳ ನೆನಪು ನನಗೆ ಆಗಾಗ ಆಗುತ್ತದೆ ಎಂದು ಮೋಯಿನ್ ಅಲಿ ತಿಳಿಸಿದ್ದಾರೆ.

ಕೆಎಲ್ ರಾಹುಲ್‌ ಈ ಸರಣಿಯಲ್ಲಿ ಕ್ಲಾಸಿಕ್‌ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರ ತಂತ್ರಗಾರಿಕೆ, ಕ್ಷಮತೆ, ಸ್ಥಿರತೆ ಎಲ್ಲವೂ ಪರ್ಫೆಕ್ಟ್‌ ಆಗಿದೆ. ಇವರು ಆರಂಭಿಕರಾಗಿ ಆಂಡರ್ಸನ್‌, ತೆಂಡೂಲ್ಕರ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಇವರು ತಮ್ಮ ಕ್ಲಾಸ್‌ ಪ್ರದರ್ಶನವನ್ನು ನೀಡಿ ಗಮನ ಸೆಳೆದರು. ಇವರು ರಕ್ಷಾಣತ್ಮಕ ಆಟ, ಅಟ್ಯಾಕಿಂಗ್ ಆಟ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಇಂಗ್ಲೆಂಡ್‌ ಸ್ಪಿನ್ ಬೌಲರ್‌ ರಾಶೀದ್ ಖಾನ್ ಹೇಳಿದ್ದಾರೆ.

Moeen Ali Praises KL Rahul Calls Him One of the Best Batsmen in the World

ಕೆಎಲ್ ಸಾಧನೆ

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಕೆಎಲ್ ರಾಹುಲ್ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 5 ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 53.20ರ ಸರಾಸರಿಯಲ್ಲಿ 532 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ 2 ಶತಕ ಹಾಗೂ 2 ಅರ್ಧಶತಕಗಳು ಬಂದಿವೆ.

Story first published: Friday, August 8, 2025, 10:48 [IST]
Other articles published on Aug 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+