Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

4ನೇ ಟೆಸ್ಟ್ ಪಂದ್ಯಕ್ಕೆ ಬಟ್ಲರ್ ವಿಕೆಟ್ ಕೀಪರ್, ಇಂಗ್ಲೆಂಡ್ ತಂಡ ಪ್ರಕಟ

India Vs England, 4th Test: Hosts recall Moeen and Curran, Buttler takes gloves

ಸೌಥಾಂಪ್ಟನ್, ಆಗಸ್ಟ್ 29: ಪ್ರವಾಸಿ ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಮೋಯಿನ್ ಆಲಿ ಹಾಗೂ ಸ್ಯಾಮ್ ಕುರನ್ ತಂಡಕ್ಕೆ ಮರಳಿದ್ದು, ಜೋಸ್ ಬಟ್ಲರ್ ಅವರು ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದ ಆಲ್ ರೌಂಡರ್ ಅವರು ಈ ಸರಣಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. 20 ವರ್ಷ ವಯಸ್ಸಿನ ಯುವ ಆಟಗಾರ ಓಲ್ಲಿ ಪೋಪ್ ಹಾಗೂ ಕ್ರಿಸ್ ವೋಕ್ಸ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

1
42377

ಕ್ರಿಸ್ ವೋಕ್ಸ್ ಅವರು ತೊಡೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಬದಲಿಗೆ ಸ್ಯಾಮ್ ಕುರನ್ ತಂಡಕ್ಕೆ ಬಂದಿದ್ದಾರೆ. ನ್ಯಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡ ವಿಕೆಟ್ ಕೀಪರ್ ಜಾನಿ ಬೈರ್ಸ್ಟೋ ಅವರ ಬದಲಿಗೆ ಜೋಸ್ ಬಟ್ಲರ್ ಅವರು ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇಂಗ್ಲೆಂಡ್ ತಂಡ : ಅಲೆಸ್ಟರ್ ಕುಕ್, ಕೀಟಾನ್ ಜೆನ್ನಿಂಗ್ಸ್, ಜೋ ರೂಟ್(ನಾಯಕ), ಜಾನಿ ಬೈರ್ಸ್ಟೋ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೋಯಿನ್ ಅಲಿ, ಸ್ಯಾಮ್ ಕುರನ್, ಅದಿಲ್ ರಶೀದ್,ಸ್ಟುವರ್ಟ್ ಬ್ರಾಡ್, ಜೇಮ್ಸ್ ಅಂಡರ್ಸನ್.

Story first published: Wednesday, August 29, 2018, 20:16 [IST]
Other articles published on Aug 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+