ಹೋರಾಟವಿಲ್ಲದೆ ಆಂಗ್ಲರಿಗೆ ಶರಣಾದ ಭಾರತ
ಸೌಂಥಾಪ್ಟನ್, ಜು.31: ಇಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ ಕಿಂಚಿತ್ತೂ ಹೋರಾಟ ಮನೋಭಾವ ಪ್ರದರ್ಶಿಸಿದೆ ಧೋನಿ ನೇತೃತ್ವದ ಪ್ರವಾಸಿ ಟೀಂ ಇಂಡಿಯಾ ತಂಡ ಅತಿಥೇಯ ಇಂಗ್ಲೆಂಡ್ ವಿರುದ್ಧ ಮಂಡಿಯೂರಿದೆ. ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಮೋಯಿನ್ ಅಲಿ ಆರು ವಿಕೆಟ್ ಕಿತ್ತು ಆಂಗ್ಲರ ಪಡೆಯ ಸ್ಟಾರ್ ಆಗಿ ಮಿಂಚಿದ್ದಾರೆ.
ಇಂಗ್ಲೆಂಡ್ ಒಡ್ಡಿದ್ದ 445ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಧೋನಿ ಪಡೆ ಎರಡನೇ ಇನ್ನಿಂಗ್ಸ್ ನಲ್ಲಿ 178ರನ್ನಿಗೆ ಆಲೌಟ್ ಆಗಿದೆ. ಈ ಮೂಲಕ ಐದು ಟೆಸ್ಟ್ ಪಂದ್ಯಗಳ ಈ ಸರಣಿ ಸದ್ಯಕ್ಕೆ 1-1ರಿಂದ ಸಮವಾಗಿದೆ.ಮುಂದಿನ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ನಲ್ಲಿ ಆಗಸ್ಟ್ 7 ರಂದು ನಡೆಯಲಿದೆ. ಭಾರತ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 95 ರನ್ ಗಳಿಂದ ಗೆದ್ದುಕೊಂಡಿತ್ತು.

ನಾಲ್ಕು ವಿಕೆಟ್ ನಷ್ಟಕ್ಕೆ 112 ರನ್ನುಗಳೊಂದಿಗೆ ಭಾರತ ಐದನೆ ದಿನದಾಟವನ್ನ ಆರಂಭಿಸಿತು. ಪಂದ್ಯ ಗೆಲ್ಲಲು ಇನ್ನೂ 333 ರನ್ನುಗಳ ಅಗತ್ಯವಿತ್ತು. ಒಂದೆರಡು ದೊಡ್ಡ ಜೊತೆಯಾಟದ ನಿರೀಕ್ಷೆ ಇದ್ದ ಭಾರತಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಒಂದೂ ರನ್ ಸೇರಿಸದೇ ರೋಹಿತ್ ಶರ್ಮ ಪೆವಿಲಿಯನ್ ಸೇರಿದರು. ನಂತರ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಔಟಾದರು. ಆಂಗ್ಲರು ಗೆಲುವಿನ ಕನಸು ಆಗಲೇ ಕಂಡಿದ್ದರು.ಅಜೇಯ ಅರ್ಧಶತಕ ಗಳಿಸಿದ ಅಜಿಂಕ್ಯ ರಹಾನೆಯೊಬ್ಬರೇ ಏಕಾಂಗಿಯಾಗಿ ಹೋರಾಡಿದರು
ಇಂಗ್ಲೆಂಡ್ ಮೊದಲ ಇನಿಂಗ್ಸ್ 569/7 ಡಿಕ್ಲೇರ್ಡ್
ಇಂಗ್ಲೆಂಡ್ 2ನೇ ಇನಿಂಗ್ಸ್ 205/4 ಡಿಕ್ಲೇರ್
(ಅಲಸ್ಟೇರ್ ಕುಕ್ ಅಜೇಯ 70, ಜೋ ರೂಟ್ 56, ಗ್ಯಾರಿ ಬ್ಯಾಲನ್ಸ್ 38, ಇಯಾನ್ ಬೆಲ್ 23 ರನ್ - ರವೀಂದ್ರ ಜಡೇಜಾ 52/3)
ಭಾರತ ಮೊದಲ ಇನಿಂಗ್ಸ್ 330 ರನ್ ಆಲೌಟ್
ಭಾರತ 2ನೇ ಇನಿಂಗ್ಸ್ 178 ರನ್ ಆಲೌಟ್
(ಅಜಿಂಕ್ಯ ರಹಾನೆ ಅಜೇಯ 52, ಶಿಖರ್ ಧವನ್ 37, ವಿರಾಟ್ ಕೊಹ್ಲಿ 28, ಅಜಿಂಕ್ಯ ರಹಾನೆ ಅಜೇಯ 18 ರನ್ - ಮೊಯೀನ್ ಅಲಿ 67/6) ಸಂಪೂರ್ಣ ಸ್ಕೋರ್ ಕಾರ್ಡ್ ಇಲ್ಲಿ ನೋಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications