ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾವನ್ನು ಸ್ಪಿನ್ ಬಲೆಗೆಳೆಯಲು ಭಜ್ಜಿಯಿಂದ ಸಲಹೆ ಪಡೆದ ಆಲಿ

Moeen Ali takes Harbhajan Singh’s advice to spin web over Indian batsmen

ಲಂಡನ್, ಸೆಪ್ಟೆಂಬರ್ 10: ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ 4ನೇ ಮತ್ತು 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಮೋಯೀನ್ ಆಲಿ ಭಾರತದ ಆಟಗಾರರನ್ನು ಕಟ್ಟಿಹಾಕಿದ್ದರು. ಇಷ್ಟಾಗಿಯೂ ಆಂಗ್ಲ ಆಟಗಾರ ಆಲಿ ಅವರು ಬೌಲಿಂಗ್ ಬಗ್ಗೆ ಭಾರತದ ಹರ್ಭಜನ್ ಸಿಂಗ್ ಅವರಲ್ಲಿ ಸಲಹೆ ಪಡೆದಿದ್ದಾರೆ.

ಆರ್ ಸಿಬಿ ಕ್ಯಾಪ್ಟನ್ ಬದಲಾಯಿಸಲ್ಲ, ಕೊಹ್ಲಿಯೇ ನಾಯಕ!ಆರ್ ಸಿಬಿ ಕ್ಯಾಪ್ಟನ್ ಬದಲಾಯಿಸಲ್ಲ, ಕೊಹ್ಲಿಯೇ ನಾಯಕ!

ಭಾರತ ವಿರುದ್ಧದ 4ನೇ ಟೆಸ್ಟ್ ನಲ್ಲಿ ಕಣಕ್ಕಿಳಿದಿದ್ದ ಮೋಯೀನ್ ಆಲಿ ಭಾರತೀಯರನ್ನು ಬಹಳ ಕಾಡಿದ್ದರು. 4ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಲಿ 63 ರನ್ನಿಗೆ 5 ವಿಕೆಟ್ ಕಬಳಿಸಿದ್ದರೆ, ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಕೆಡವಿ ಭಾರತಕ್ಕೆ ಮಾರಕವಾಗಿದ್ದರು. 4ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಗೆಲುವಿನ ರುವಾರಿಯಾಗಿ ಆಲಿ ಗುರುತಿಸಿಕೊಂಡಿದ್ದರು.

ಆದರೆ 5ನೇ ಟೆಸ್ಟ್ ನಲ್ಲಿ ಆಲಿಗೆ ಭಾರತದ ಹೆಚ್ಚು ವಿಕೆಟ್ ಪಡೆಯಲಾಗಿಲ್ಲ. ಮೊದಲ ಇನ್ನಿಂಗ್ಸ್ ನಲ್ಲಿ ಆಲಿ 50 ರನ್ನಿಗೆ ಎರಡು ವಿಕೆಟನ್ನಷ್ಟೇ ಪಡೆದರು. ಹೀಗಾಗಿ ತಲೆ ಕೆಡಿಸಿಕೊಂಡ ಆಲಿ, ಭಾರತ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಸಲಹೆ ಕೇಳಿದ್ದಾರೆ. ಇದನ್ನು ಸ್ವತಃ ಭಜ್ಜಿಯೇ ಹೇಳಿಕೊಂಡಿದ್ದರೆ.

ಈ ಬಗ್ಗೆ ಭಜ್ಜಿ ಪ್ರತಿಕ್ರಿಯಿಸಿ, 'ನೀವೀಗ ಉತ್ತಮವಾಗೇ ಬೌಲಿಂಗ್ ಮಾಡುತ್ತಿದ್ದೀರಿ. ಆದರೆ ಈ ಪಿಚ್ ಏಜನ್ ಬೌಲ್ ನಂತಿಲ್ಲ. ಈ ಪಿಚ್ ನಲ್ಲಿ ದೊಡ್ಡ ಬಿರುಕುಗಳಿಲ್ಲ. ಹಾಗಾಗಿ ಸ್ಪಿನ್ನರ್ ಗಳಿಗೆ ಕೊಂಚ ಸವಾಲೇ ಹೌದು. ಬಿರುಕುಗಳು ಕಿರಿದಾಗಿದ್ದಾಗ ಪಿಚ್ ನ ಒಳ ಅಂಚು ಮತ್ತು ಹೊರ ಅಂಚು ಕ್ರಮೇಣ ಸಮವಾಗೇ ಇರುತ್ತದೆ. ಎರಡನ್ನೂ ಬಳಸಿಕೊಳ್ಳುವತ್ತ ಗಮನ ಹರಿಸಿದರೆ ಲಾಭವಿದೆ ಎಂದು ಆಲಿ ಅವರಿಗೆ ತಿಳಿಸಿದ್ದೇನೆ' ಎಂದು ಹೇಳಿದರು.

Story first published: Monday, September 10, 2018, 17:57 [IST]
Other articles published on Sep 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X