ಮೊಹಾಲಿಯಲ್ಲಿ ಐಪಿಎಲ್ ಪಂದ್ಯಗಳು ನಡೆಯದ್ದಕ್ಕೆ ಕಾರಣ ಬಹಿರಂಗ

ಪಂಜಾಬ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಯಾವುದೇ ಪಂದ್ಯಗಳು ಪಂಜಾಬ್‌ನ ಮೊಹಾಲಿ ಸ್ಟೇಡಿಯಂನಲ್ಲಿ ನಡೆಯುತ್ತಿಲ್ಲ. ಪಂಜಾಬ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಈ ಬಾರಿ ಮೊಹಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿಲ್ಲ ಎಂದು ತಿಳಿದು ಬಂದಿದೆ.
ಆರಂಭದಲ್ಲಿ 2021ರ ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಮಹಾರಾಷ್ಟ್ರ ಮತ್ತು ಪೂಣೆ ತಾಣಗಳಲ್ಲಿ ನಡೆಸುವುದಾಗಿ ಬಿಸಿಸಿಐ ಯೋಚಿಸಿತ್ತು ಎಂದು ಹೇಳಲಾಗಿತ್ತು. ಮಹಾರಾಷ್ಟ್ರದ ವಾಂಖೆಡೆ, ಬ್ರಬೋರ್ನ್, ಡಿವೈ ಪಾಟಿಲ್ ಮತ್ತು ರಿಲಯನ್ಸ್ ಸ್ಟೇಡಿಯಂಗಳಲ್ಲಿ ಲೀಗ್ ಪಂದ್ಯಗಳು ನಡೆಸಲು ಮತ್ತು ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ಲೇಆಫ್ ಪಂದ್ಯಗಳನ್ನು ನಡೆಸಲು ಯೋಚಿಸಲಾಗಿತ್ತು.
ಆದರೆ ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂಬೈ ತಾಣವನ್ನು ಶಾರ್ಟ್‌ಲಿಸ್ಟ್‌ನಿಂದ ಹೊರಗಿಡಲಾಗಿದೆ. ಸದ್ಯಕ್ಕೆ ಅಹ್ಮದಾಬಾದ್, ಬೆಂಗಳೂರು, ಹೈದರಾಬಾದ್, ದೆಹಲಿ, ಕೋಲ್ಕತ್ತಾ, ಚೆನ್ನೈ ತಾಣಗಳನ್ನು ಶಾರ್ಟ್ ಲಿಸ್ಟ್‌ನಲ್ಲಿ ಇಡಲಾಗಿದೆ.
'ಮೊಹಾಲಿಯಲ್ಲಿ ಪಂದ್ಯ ಆಯೋಜಿಸಿ ಪ್ರತಿಭಟನಾ ನಿರತ ರೈತರು ಸ್ಟೇಡಿಯಂ ಕಡೆಗೆ ಬಂದು ಸಮಸ್ಯೆ ಸೃಷ್ಠಿಯಾಗೋದನ್ನು ನಾವು ಬಯಸುವುದಿಲ್ಲ. ಅದು ವಿಶ್ವದ ಎಲ್ಲಾ ಭಾಗಗಳಿಂದ ಮಾಧ್ಯಮಗಳನ್ನು ಆಕರ್ಷಿಸಲಿದೆ. ಮೊಹಾಲಿ ಸದ್ಯಕ್ಕೆ ತಾಣಗಳ ಸಾರ್ಟ್ ಲಿಸ್ಟ್‌ನಲ್ಲಿ ಇಲ್ಲ. ಪಂಜಾಬ್ ಹೊರತುಪಡಿಸಿ ಉಳಿದ ತಾಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ,' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications