ಐಪಿಎಲ್ ವಿಶ್ವದ ಅತಿದೊಡ್ಡ ಟಿ20 ಲೀಗ್ ಆಗಿದೆ. ಐಪಿಎಲ್‌ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿನ ಕನಸು. ಕೆಲವು ಕ್ರಿಕೆಟಿಗರ ಈ ಕನಸು ನನಸಾದರೆ, ಕೆಲವರ ಕನಸು ಕನಸಾಗಿಯೇ ಉಳಿಯಲಿದೆ. ವಿಶ್ವದ ಎಲ್ಲಾ ಆಟಗಾರರಿಗೆ ಐಪಿಎಲ್ ಆಡಲು ಅವಕಾಶವಿದೆ. ಆದರೆ, ನೆರೆಯ ರಾಷ್ಟ್ರ ಪಾಕಿಸ್ತಾನ ತಂಡದ ಆಟಗಾರರಿಗೆ ಮಾತ್ರ ನಿಷೇದ ಹೇರಲಾಗಿದೆ. ಪಾಕಿಸ್ತಾನ ತಂಡದ ಆಟಗಾರರು ಹೇಗಾದರೂ ಮಾಡಿ ಐಪಿಎಲ್‌ನ ಭಾಗವಾಗಲು ಪ್ರಯತ್ನಿಸುತ್ತಾರೆ. ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಕೂಡ ಆ ಆಟಗಾರರಲ್ಲಿ ಒಬ್ಬರು.
ಮೊಹಮ್ಮದ್ ಅಮೀರ್ ಐಪಿಎಲ್‌ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದು, ಇದಕ್ಕಾಗಿ ಅವರು ತಯಾರಿ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಉಭಯ ದೇಶಗಳ ನಡುವಿನ ವಿವಾದ ಬಿಸಿಯಾಗುತ್ತಿದೆ. ಆದರೂ ಆಮಿರ್ ಐಪಿಎಲ್ ಆಡುವುದಾಗಿ ಸ್ಟಷ್ಟಪಡಿಸಿದ್ದಾರೆ. ಅವರ ಈ ಹೇಳಿಕೆ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಮೊಹಮ್ಮದ್ ಅಮೀರ್ ಐಪಿಎಲ್‌ನಲ್ಲಿ ಆಡಲು ಬೇರೆ ದೇಶದ ಪಾಸ್‌ಪೋರ್ಟ್ ಪಡೆಯುತ್ತಿದ್ದಾರೆ. ಆಮಿರ್ ಅವರ ಪತ್ನಿ ಮೂಲತಃ ಯುಕೆ ಪ್ರಜೆ. ಈ ಕಾರಣದಿಂದಾಗಿ ಅವರು ಯುಕೆ ಪಾಸ್‌ಪೋಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದೇ ಮಾರ್ಗ ಕಂಡುಕೊಂಡಿದ್ದ ಪಾಕಿಸ್ತಾನ ತಂಡದ ಮಾಜಿ ವೇಗಿ ಅಜರ್ ಮಹಮೂದ್ ಅವರು ಐಪಿಎಲ್ 2012 ರಲ್ಲಿ ಆಡಿದ್ದರು. ಬಳಿಕ ಪಾಕಿಸ್ತಾನ ಅಟಗಾರರನ್ನು ಐಪಿಎಲ್‌ನಿಂದ ನಿಷೇಧಿಸಿದಾಗಿನಿಂದ ಅಜರ್ ಮುಹಮೂದ್ ಬ್ರಿಟಿಷ್ ಪೌರತ್ವವನ್ನು ಪಡೆದು ಐಪಿಎಲ್‌ನಲ್ಲಿ ಆಡಿದರು.
ಈಗ ಮೊಹಮ್ಮದ್ ಅಮೀರ್ ಕೂಡ ಐಪಿಎಲ್ ಆಡಲು ಪಣ ತೊಟ್ಟಿದ್ದಾರೆ. ಪಾಕಿಸ್ತಾನದ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಆಮಿರ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವಕಾಶ ಸಿಕ್ಕರೆ, ನಾನು ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡುತ್ತೇನೆ. ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ. ಆದರೆ, ಅವಕಾಶ ಸಿಗದಿದ್ದರೆ ಪಿಎಸ್‌ಎಲ್‌ನಲ್ಲಿ ಆಡುತ್ತೇನೆ. ಮುಂದಿನ ವರ್ಷ ಐಪಿಎಲ್‌ನಲ್ಲಿ ಆಡಲು ನನಗೆ ಅವಕಾಶ ಸಿಗುತ್ತದೆ. ಅವಕಾಶ ಸಿಕ್ಕರೆ ಏಕೆ ಬೇಡ, ನಾನು ಖಂಡಿತವಾಗಿಯೂ ಆಡುತ್ತೇನೆ ಎಂದು ಹೇಳಿದ್ದಾರೆ.
ಈ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇದ್ದ ಕಾರಣ ಮುಂದಿನ ವರ್ಷ ಐಪಿಎಲ್ ಮತ್ತು ಪಿಎಸ್ಎಲ್ ನಡುವೆ ಘರ್ಷಣೆ ನಡೆಯುತ್ತದೆ ಅಂದುಕೊಂಡಿರಲಿಲ್ಲ. ಆದ್ದರಿಂದ ಎರಡೂ ಲೀಗ್‌ಗಳು ಒಟ್ಟಿಗೆ ನಡೆಯುತ್ತಿವೆ. ನಾನು ಮೊದಲು ಪಿಎಸ್‌ಎಲ್‌ಗೆ ಆಯ್ಕೆಯಾದರೆ, ನಾನು ಅದನ್ನು ಬಿಡುವುದಿಲ್ಲ. ಏಕೆಂದರೆ ಆಗ ನಿಷೇಧಕ್ಕೊಳಗಾಗುವ ಅಪಾಯವಿರುತ್ತದೆ. ಈಗ ಅದು ನಾನು ಮೊದಲು ಯಾವ ಲೀಗ್‌ಗೆ ಆಯ್ಕೆಯಾಗುತ್ತೇನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆಮಿರ್ ತಿಳಿಸಿದ್ದಾರೆ.